ಬೀಜಿಂಗ್:ಈಗೆಲ್ಲ ಟೆಕ್ನಿಕಲ್ ಯುಗ. ಈಗಿನ ಮಕ್ಕಳಂತೂ ಹುಟ್ಟುತ್ತಲೇ ಮೊಬೈಲ್ ಬಳಕೆ ಕಲಿತು ಬಂದಿರುತ್ತವೆಯೇನೋ ಎನ್ನುವಂತೆ ವರ್ತಿಸಲಾರಂಭಿಸಿದ್ದಾರೆ. ಅದೇ ರೀತಿ ಮೂರು ವರ್ಷದ ಪುಟಾಣಿಯೊಬ್ಬಳು ತಂದೆಯ ಮೊಬೈಲ್​ನಿಂದ ನೂಡಲ್ಸ್​ ಆರ್ಡರ್​ ಮಾಡಿ ಅಪ್ಪ ಅಮ್ಮನನ್ನೇ ಪೇಚಿಗೆ ಸಿಲುಕಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಜಿಲಿನ್ ಹೆಸರಿನ ನಗರದಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ಹೊಟ್ಟೆ ಹಸಿವು ಎಂದು ಆನ್​ಲೈನ್​ನಲ್ಲಿ ನೂಡಲ್ಸ್ ಆರ್ಡರ್ ಮಾಡಿದ್ದಾಳೆ. ಅಪ್ಪನ ಮೊಬೈಲ್​ನಲ್ಲಿದ್ದ ಆ್ಯಪ್​ ಮೂಲಕ ಆರ್ಡರ್​ ಮಾಡಿದ್ದಾಳೆ. ಸ್ವಲ್ಪ ಸಮಯದಲ್ಲಿ ಡೆಲಿವರಿ ಬಾಯ್ ಮನೆ ಅಪಾರ್ಟ್​ಮೆಂಟ್​ ಬಳಿ ಬಂದಿದ್ದು, ಬರೋಬ್ಬರಿ ಏಳು ಬಾರಿ 13ನೇ ಫ್ಲೋರ್​ನ ಮನೆವರೆಗೆ ಹತ್ತಿಳಿದು ನೂಡಲ್ಸ್​ ಕೊಟ್ಟಿದ್ದಾನೆ.
ಮೊದಲಿಗೆ ಅದನ್ನು ಯಾವುದೋ ಆಫರ್ ಇರಬೇಕು ಎಂದು ಭಾವಿಸಿದ ಬಾಲಕಿಯ ತಂದೆಗೆ ಆಮೇಲೆ ಮಗಳು ಮಾಡಿದ ಕಿತಾಪತಿ ಗೊತ್ತಾಗಿದೆ. ಏಕಾಗಿ ಮಾಡಿದೆ ಎಂದು ಕೇಳಿದಾಗ ನನಗೆ ಹಸಿವಾಗಿತ್ತು ಎಂದು ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆ ನೂಡಲ್ಸ್​ ಬೌಲ್ಸ್​ಗಳನ್ನು ಇಟ್ಟುಕೊಳ್ಳಲು ಪೂರ್ತಿ ಕೋಣೆಯೇ ಬೇಕಾಗಿದ್ದಾಗಿ ಬಾಲಕಿಯ ತಂದೆ ತಿಳಿಸಿದ್ದಾನೆ. ನಂತರ ಕೇವಲ 8 ಬೌಲ್​ಗಳನ್ನು ಮನೆಯಲ್ಲಿಟ್ಟುಕೊಂಡು ಉಳಿದದ್ದನ್ನು ಬಡವರಿಗೆ ಹಂಚಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)
ನಡುರಾತ್ರಿ ಬಸ್ಸಿನಲ್ಲಿ ಅನುಮಾನಾಸ್ಪದವಾಗಿ ಸಿಕ್ಕ ಯುವತಿ-ಯುವಕರಿಗೆ ಬಟ್ಟೆ ಹಾಕಿಕೊಳ್ಳುವುದಕ್ಕೂ ಬಿಡದೆ ಎಳೆದೊಯ್ದ ಪೊಲೀಸರು!

ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
