ಬೆಂಗಳೂರು:ಪೊಲೀಸರು ಎಂದು ಹೇಳಿಕೊಂಡು ಶ್ರೀಮಂತರನ್ನೇ ಅಹಪರಿಸುತ್ತಿದ್ದ ಖತರ್​​ನಾಕ್​ ಕಿಡ್ನ್ಯಾಪರ್ಸ್ ಕೊನೆಗೂ ಅಸಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಬಂಧನಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೈದರಾಬಾದ್​ ಮೂಲದ ಪ್ರಸಾದ್, ಮಹಾರಾಷ್ಟ್ರದ ಸಿದ್ಧಾರ್ಥ್, ನಾಗುರಾವ್, ಕಿರಣ್, ಬಾನುದಾಸ್ ಬಂಧಿತರು. ಇವರು ತಮ್ಮನ್ನು ಹೈದರಾಬಾದ್ ಪೊಲೀಸರು ಎಂದು ಹೇಳಿಕೊಂಡು ಶ್ರೀಮಂತರನ್ನು ಅಪಹರಣ ಮಾಡುತ್ತಿದ್ದರು. ನಂತರ ಲಕ್ಷಾಂತರ ರೂ. ವಸೂಲಿ ಮಾಡುತ್ತಿದ್ದರು.
ಹೀಗೆ ವಸಂತ ಶಿವರೆಡ್ಡಿ ಎಂಬವರನ್ನು ಅಪಹರಿಸಿದ್ದ ಆರೋಪಿಗಳು, 50 ಲಕ್ಷ ರೂ. ವಸೂಲಿ ಮಾಡಿದ್ದರು. ವಸಂತ, ಶಿವರೆಡ್ಡಿಗೆ ಹೈದರಾಬಾದ್​ಗೆ ಕಾರ್ಯನಿಮಿತ್ತ ಹೋಗಿದ್ದಾಗ ಅಲ್ಲಿನ ಹರೀಶ್ ಎಂಬಾತನ ಪರಿಚಯ‌ ಆಗಿತ್ತು. ಜಮೀನು ವಿಚಾರವಾಗಿ ಇವರು ಆರೋಪಿಯನ್ನು ಪರಿಚಯ ಮಾಡಿಕೊಂಡಿದ್ದರು.
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಹರೀಶ್, ಕಡಿಮೆ ದರದಲ್ಲಿ ಜಮೀನಿದೆ, ಅದರ ಬಗ್ಗೆ ಮಾತನಾಡಬೇಕು ಎಂಬುದಾಗಿ ಹೇಳಿ ವಸಂತ, ಶಿವರೆಡ್ಡಿ ಅವರನ್ನು ಕರೆಸಿಕೊಂಡಿದ್ದ. ದೇವನಹಳ್ಳಿ ಕಡೆಗೆ ಕರೆಸಿಕೊಂಡು, ನಂತರ ಹೈದರಾಬಾದ್ ಕಡೆಗೆ ಕರೆದೊಯ್ದು ಅಪಹರಣ ಮಾಡಿದ್ದರು.
ಅಪಹರಣದ ಬಳಿಕ ಶಿವರೆಡ್ಡಿಯನ್ನ ನಗ್ನಗೊಳಿಸಿ, ವಿಡಿಯೋ ಮಾಡಿ 50 ಲಕ್ಷ ರೂ. ಕೊಡುವಂತೆ ತಾಕೀತು ಮಾಡಿದ್ದರು. ಹಣ ತರುವಂತೆ ವಸಂತಳನ್ನ ಬೆಂಗಳೂರಿಗೆ ಕಳಿಸಿದ್ದರಿಂದ, ಆಕೆ ಸಾಲ ಮಾಡಿ ಹನ್ನೊಂದು ಲಕ್ಷ ರೂ. ಸಮೇತ ಹೈದರಾಬಾದ್​ಗೆ ಹೋಗಿ ಆರೋಪಿಗಳಿಗೆ ನೀಡಿದ್ದಳು. ನಂತರ ಅವರು ಇಬ್ಬರನ್ನೂ ಬಿಟ್ಟು ಕಳಿಸಿದ್ದರು. ಈ ಸಂಬಂಧ ಅವರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
ಹೈದರಾಬಾದ್​ನ ಜುಬಿಲಿ ಹಿಲ್ಸ್ ಕ್ಲಬ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳ ಬಳಿ ಪೊಲೀಸ್ ಎಂಬ ಕುರಿತು ನಕಲಿ ಐ.ಡಿ. ಕಾರ್ಡ್​​ಗಳು ಪತ್ತೆಯಾಗಿವೆ. ಆರೋಪಿಗಳಣು ಶಾಸಕ ಅಭ್ಯರ್ಥಿಯೊಬ್ಬರನ್ನೂ ಕಿಡ್ನಾಪ್‌ ಮಾಡಿದ್ದರೆನ್ನಲಾಗಿದ್ದು, ಅವರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ.
ಬರ್ತ್​ಡೇಗೆ ಬರುವವರಿಗೆ ರಿಯಲ್ ಸ್ಟಾರ್ ಉಪೇಂದ್ರ ಕಂಡಿಷನ್ ಇದು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − five =
Remember me
