ನವದೆಹಲಿ:ಪಾಕಿಸ್ತಾನದಲ್ಲಿ ಹಿಂದು ದ್ವೇಷ ಮುಂದುವರಿದಿದ್ದು, ಹಿಂದು ಯುವತಿಯರ ಅಪಹರಣ ಹಾಗೂ ಮತಾಂತರ ಪ್ರಕರಣಗಳು ವರದಿಯಾಗಿವೆ. ಕಳೆದೆರಡು ದಿನಗಳಲ್ಲಿ ಹಿಂದು ಯುವತಿಯರಿಬ್ಬರನ್ನು ಅಪಹರಿಸಿದ್ದಲ್ಲದೆ ಬಲವಂತವಾಗಿ ಮತಾಂತರ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮುಸ್ಲಿಂ ಧಾರ್ಮಿಕ ನಾಯಕ ಮಿಯಾ ಅಬ್ದುಲ್ ಖಾಲಿಕ್ (ಮಿಯಾನ್ ಮಿಟ್ಟೂ ಅಥವಾ ಮಿಟ್ಟೂ) ಎಂಬಾತ ಬಲವಂತವಾಗಿ ಏಕ್ತಾ ಕುಮಾರಿ ಎಂಬ ಹಿಂದು ಯುವತಿಯನ್ನು ಮತಾಂತರಗೊಳಿಸಿದ್ದಾಗಿ ವರದಿಯಾಗಿದೆ. ಈತ ಪಾಕಿಸ್ತಾನ ಸೇನೆ ಮತ್ತು ಇಮ್ರಾನ್ ಖಾನ್‌ಗೆ ಆಪ್ತನೆಂದು ಹೇಳಲಾಗಿದೆ. ಬಲೂಚಿಸ್ತಾನದ ಸಿಬಿಯ ನಿವಾಸಿ, ಶಿಕ್ಷಕಿಯಾಗಿರುವ ಏಕ್ತಾ ಕುಮಾರಿಯನ್ನು ಸ್ಥಳೀಯ ಮುಸ್ಲಿಂ ನಾಯಕ ಯಾರ್ ಮೊಹಮ್ಮದ್ ಭುಟ್ಟೋ ಎಂಬಾತ ಅಪಹರಿಸಿದ್ದ. ಈಕೆ ಅನಿಲ್ ಕುಮಾರ್ ಎಂಬುವವರ ಪುತ್ರಿ.
ಮತ್ತೊಬ್ಬ ಹಿಂದು ಯುವತಿ ಧನಿ ಕೊಹ್ಲಾಹಿ ಎಂಬಾಕೆಯನ್ನು ಕರಾಚಿಯ ಜುಮಾ ಬಜಾರ್‌ನಿಂದ ಮುಸ್ಲಿಮನೊಬ್ಬ ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸಿದ್ದಲ್ಲದೆ ಮದುವೆಯನ್ನೂ ಆಗಿದ್ದಾನೆ ಎನ್ನಲಾಗಿದೆ. ಅಪಹೃತ ಪುತ್ರಿಯ ಸುಳಿವು ಇಲ್ಲದ್ದರಿಂದ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ಮಗಳನ್ನು ರಕ್ಷಿಸುವಂತೆ ಕೋರಿದ್ದಾರೆ.
ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು?

ಮಗಳನ್ನು ಕೊಂದು ಹೊಲದಲ್ಲಿ ಎಸೆದ ಅಪ್ಪ ಅಮ್ಮ! ಇಷ್ಟಕ್ಕೆಲ್ಲ ಕಾರಣ ಆ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
