ದೆಹಲಿ:ಅಪಹರಣಕ್ಕೊಳಗಾಗಿದ್ದ ಬಾಲಕಿ 17 ವರ್ಷಗಳ ನಂತರ ಪತ್ತೆಯಾಗಿರುವ ಘಟನೆ ದೆಹಲಿಯ ಗೋಕಲ್ಪುರಿಯಲ್ಲಿ ನಡೆದಿದೆ. ಸೀಮಾಪುರಿ ಪೊಲೀಸ್ ಠಾಣೆಯ ತಂಡವು ರಹಸ್ಯ ಮಾಹಿತಿಯ ಮೇರೆಗೆ ಬಾಲಕಿಯನ್ನು ಪತ್ತೆ ಹಚ್ಚಿದೆ.
ಇದನ್ನೂ ಓದಿ:ಶಾಲೆಯ ಆವರಣದಲ್ಲೇ ಬಡಿದಾಡಿಕೊಂಡ ಮುಖ್ಯಶಿಕ್ಷಕಿ-ಸಹಾಯಕ ಶಿಕ್ಷಕಿ: ವಿಡಿಯೋ ವೈರಲ್​
2006ರಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. ಪೋಷಕರ ದೂರಿನ ಮೇರೆಗೆ ದೆಹಲಿಯ ಗೋಕಲ್ಪುರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 363ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಆಕೆಗೆ 32 ವರ್ಷ ವಯಸ್ಸಾಗಿದ್ದು, ಕಾರಣಾಂತರಗಳಿಂದ ಆಕೆಯ ಹೆಸರನ್ನು ಬಹಿರಂಗ ಪಡಿಸಿಲ್ಲ.
ಈ ಕುರಿತು ಮಾತನಾಡಿದ ಪೊಲೀಸರು, ಹುಡುಗಿ ತನ್ನ ಮನೆಯಿಂದ ನಾಪತ್ತೆಯಾದ ನಂತರ ಉತ್ತರ ಪ್ರದೇಶದ ಚೆರ್ದಿಹ್ ಜಿಲ್ಲೆಯ ಬಲಿಯಾ ಗ್ರಾಮದಲ್ಲಿ ದೀಪಕ್ ಎಂಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ನಂತರ, ಕೆಲವು ವರ್ಷಗಳ ಆಕೆ ದೀಪಕ್​ನನ್ನು ತೊರೆದು ಪ್ರತ್ಯೇಕವಾಗಿ ಗೋಕಲ್ಪುರಿಯಲ್ಲಿ ವಾಸಿಸುತ್ತಿದ್ದಳು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + five =
Remember me
