ಮುಂಬೈ:ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಪ್ರೀಮಿಯರ್​ ಲೀಗ್ (ಪಿಎಸ್​ಎಲ್​)​ ಅನ್ನು ಅರ್ಧಕ್ಕೆ ಬಿಟ್ಟು ಬಂದ ವೆಸ್ಟ್​ ಇಂಡೀಸ್​ ಮಾಜಿ ನಾಯಕ ಕೈರಾನ್​ ಪೊಲ್ಲಾರ್ಡ್ ಪಾಕ್​ನಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ಪಿಎಸ್​ಎಲ್​ನಲ್ಲಿ ಕರಾಚಿ ಕಿಂಗ್ಸ್​ ತಂಡದ ಭಾಗವಾಗಿದ್ದ ಪೊಲ್ಲಾರ್ಡ್ ಅನಂತ್​ ಅಂಬಾನಿ-ರಾಧಿಕಾರ ಮರ್ಚೆಂಟ್​ ಪ್ರೀ ವೆಡ್ಡಿಂಗ್​ನಲ್ಲಿ ಪಾಲ್ಗೊಳ್ಳಲು ಮಾರ್ಚ್​ 1ರಂದು ಗುಜರಾತಿನ ಜಾಮ್​​ನಗರಕ್ಕೆ ಬಂದಿಳಿದರು.
ಒಂದೆಡೆ ಪೊಲ್ಲಾರ್ಡ್​ ಜಾಮ್​ನಗರಕ್ಕೆ ಆಗಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದರೆ, ಮತ್ತೊಂದೆಡೆ ಅದೇ ವಿಡಿಯೋ ಪಾಕ್​ನಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ. ಬಾಬರ್​ ಅಜಾಮ್​ ನೇತೃತ್ವದ ಪೇಶಾವರ್​ ಝಲ್ಮಿ ವಿರುದ್ಧ ಫೆ.21ರಂದು ನಡೆದ ಪಿಎಸ್​ಎಲ್​ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಪೊಲ್ಲಾರ್ಡ್​ ಕೇವಲ 21 ಎಸೆತಗಳಲ್ಲಿ 49 ರನ್​ ಬಾರಿಸುವ ಮೂಲಕ ಕರಾಚಿ ಕಿಂಗ್ಸ್​ ತಂಡದ ಗೆಲುವಿಗೆ ಕಾರಣರಾದರು. ಒಳ್ಳೆಯ ಫಾರ್ಮ್​ನಲ್ಲಿ ಇರುವಾಗಲೇ ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್​ನಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿರುವುದು ಪಾಕ್​ನಲ್ಲಿನ ಕೆಲವರ ಆಕ್ರೋಶಕ್ಕೆ ಗುರಿಯಾಗಿದೆ.
ಐಷಾರಾಮಿ ಕಾರ್ಯಕ್ರಮವನ್ನು ಸುಲಭವಾಗಿ ಆಯ್ಕೆ ಮಾಡಿಕೊಂಡ ಪೊಲ್ಲಾರ್ಡ್​ ಅವರ ಸಮರ್ಪಣಾ ಮನೋಭಾವದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲ್ಲಾರ್ಡ್ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಫ್ರಾಂಚೈಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅದರಲ್ಲೂ ಭಾರತಕ್ಕೆ ಬಂದಿರುವುದರಿಂದ ಪಾಕ್​ನಲ್ಲಿರುವ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.
ಇದೇ ಸಂದರ್ಭದಲ್ಲಿ ಕೆಲ ಭಾರತೀಯರು ಮೀಮ್ಸ್​ಗಳನ್ನು ಹರಿಬಿಡುವ ಮೂಲಕ ಪಾಕಿಸ್ತಾನ ಸೂಪರ್ ಲೀಗ್‌ನ ಸ್ಥಾನಮಾನ ನೋಡಿ ನಗುತ್ತಿದ್ದಾರೆ. ಅಂದಹಾಗೆ ಪೊಲ್ಲಾರ್ಡ್​ ಅವರು ಐಪಿಎಲ್​ನಲ್ಲಿ ಮುಕೇಶ್​ ಅಂಬಾನಿ ಅವರ ರಿಲಯನ್ಸ್​ ಒಡೆತನದ ಐಪಿಎಲ್​ ಟೀಮ್​ ಮುಂಬೈ ಇಂಡಿಯನ್ಸ್​ ಭಾಗವಾಗಿದ್ದರು. ಇದಿಷ್ಟೇ ಅಲ್ಲದೆ, ರಿಲಯನ್ಸ್​ ಒಡೆತನ ಎಸ್​ಎ20 ಮತ್ತು ಐಎಲ್​ಟಿ20 ತಂಡ ಭಾಗವಾಗಿದ್ದಾರೆ.
ಭಾರಿ ಟ್ರೋಲ್‌ಗಳ ನಡುವೆ. ಪೊಲ್ಲಾರ್ಡ್ ಈಗ ಪಾಕಿಸ್ತಾನಕ್ಕೆ ಮರಳಿದ್ದು, ಇಂದು ಮುಲ್ತಾನ್ ಸುಲ್ತಾನ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡಲಿದ್ದಾರೆ.(ಏಜೆನ್ಸೀಸ್​)
ಏಕಕಾಲದಲ್ಲಿ 5 ಸರ್ಕಾರಿ ಕೆಲಸ ಗಿಟ್ಟಿಸಿದ ಯುವತಿ! ಆಯ್ದುಕೊಂಡ ಹುದ್ದೆ, ಕಾರಣ ತಿಳಿದ್ರೆ ಮೆಚ್ಚಿಕೊಳ್ತೀರಾ

ಗ್ಯಾರಂಟಿ ಯೋಜನೆಯ ಪ್ರಯೋಜನ ತೆರೆದಿಟ್ಟ ವೃದ್ಧೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ಕೆ ಮೆಚ್ಚುಗೆ

ಕಡು ಬಡತನದಿಂದಾಗಿ ಕನಸಾಗೇ ಉಳಿದಿದ್ದ ತಾಯಿಯ ಆಸೆಯನ್ನು ಈಡೇರಿಸಿದ ಮಕ್ಕಳು! ಮನಕಲಕುತ್ತೆ ಈ ಸ್ಟೋರಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 + 3 =
Remember me
