ಕಿಯೆವ್/ಮಾಸ್ಕೊ:ರಷ್ಯಾ ಸೈನಿಕರು ಸ್ವಾಧೀನ ಪಡಿಸಿಕೊಂಡಿದ್ದ ರಾಜಧಾನಿ ಕಿಯೆವ್ ಬಳಿಯ ಹಲವು ಪ್ರದೇಶಗಳನ್ನು ಯೂಕ್ರೇನ್ ಸೇನೆ ಮರುವಶಕ್ಕೆ ಪಡೆದಿದೆ. ತಮ್ಮನ್ನು ಬಲೆಗೆ ಬೀಳಿಸಲು ರಷ್ಯಾದ ಸೈನಿಕರು ಹೂಡಿದ್ದ ತಂತ್ರಕ್ಕೆ ಪ್ರತಿತಂತ್ರ ಮಾಡಿದ ಯೂಕ್ರೇನ್ ಪಡೆಗಳು, ರಸ್ತೆಗಳಲ್ಲಿ ಬಿದ್ದಿದ ನಾಗರಿಕರ ಶವಗಳನ್ನು ಕೇಬಲ್ ಮೂಲಕ ಎಳೆದರು. ಹುಶಾರಾಗಿ ಮುಂದಡಿ ಇಟ್ಟು, ಪಟ್ಟಣವನ್ನು ಮರುವಶಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಬುಚಾ ನಗರದಲ್ಲಿ 300ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ. ಇದು ಉದ್ದೇಶಪೂರ್ವಕ ಹತ್ಯೆ ಎಂದು ಯೂಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ. ಪುರುಷರು ಮತ್ತು ಮಹಿಳೆಯರ ಕೈಗಳನ್ನು ಕಟ್ಟಿಹಾಕಿ ಗುಂಡಿಟ್ಟು ಕೊಲ್ಲಲಾಗಿದೆ. ಇದು ನಾಜಿಗಳು ಮಾಡಿದ ಹತ್ಯೆಗಿಂತ ಕ್ರೂರ ಎಂದು ಟ್ವೀಟ್ ಮಾಡಿದ್ದಾರೆ. ರಷ್ಯಾ ಪಡೆಗಳ ಈ ಹೇಯದಾಳಿಯನ್ನು ಐರೋಪ್ಯ ಒಕ್ಕೂಟ, ಬ್ರಿಟನ್​ಗಳು ತೀವ್ರವಾಗಿ ಖಂಡಿಸಿವೆ.
ರಷ್ಯಾದಲ್ಲಿ ಔಷಧ ಕೊರತೆ:ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿರುವ ಕಾರಣ ಪೂರೈಕೆ ಜಾಲದಲ್ಲಿ ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಅತ್ಯಾವಶ್ಯಕ ಔಷಧಗಳ ಕೊರತೆ ಎದುರಾಗಿದೆ. ಕೆಲವೊಂದು ಔಷಧಗಳು ರಾಜಧಾನಿ ಮಾಸ್ಕೊ ಮತ್ತು ಇತರ ಪ್ರಮುಖ ನಗರಗಳಲ್ಲೂ ಲಭ್ಯವಿಲ್ಲ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಯೂಕ್ರೇನ್ ವಿರುದ್ಧ ಯುದ್ಧ ಹೂಡಿ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ರಷ್ಯಾದ ಅನೇಕ ಪಟ್ಟಣಗಳಲ್ಲಿ ಪ್ರತಿಭಟನೆಗಳು ವ್ಯಕ್ತವಾಗಿವೆ.
ಬಂದರಿನ ಮೇಲೆ ಬಾಂಬ್ ದಾಳಿ:ಯೂಕ್ರೇನ್​ನ ಒಡೆಸ್ಸಾ ನಗರ ಬಂದರಿನ ಮೇಲೆ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸಿವೆ. ದಕ್ಷಿಣದಲ್ಲಿರುವ ತಮ್ಮ ಸೇನೆಯನ್ನು ಸಂರ್ಪಸಲು ಈ ಬಂದರನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಈ ದಾಳಿ ನಡೆಸಿದೆ. ಕಪು್ಪ ಸಮುದ್ರದಲ್ಲಿ ಯೂಕ್ರೇನಿನ ಅತಿ ದೊಡ್ಡ ಬಂದರು ಇದಾಗಿದ್ದು, ದಾಳಿಯಿಂದ ಭಾರಿ ಹಾನಿ ಆಗಿದೆ. ಆದರೆ ಸಾವು-ನೋವಿನ ಬಗ್ಗೆ ಇನ್ನು ವರದಿಯಾಗಿಲ್ಲ. ಯೂಕ್ರೇ ನ್​ನ ಉತ್ತರ ಭಾಗದಲ್ಲಿ ಸೇನೆ ಹಿಂಪಡೆಯುವುದಾಗಿ ರಷ್ಯಾ ಘೋಷಿಸಿದ ಬಳಿಕ ದಕ್ಷಿಣದಲ್ಲಿ ಭಾರಿ ದಾಳಿ ನಡೆಸಿದೆ. ಈ ಮಧ್ಯೆ, ಶಾಂತಿ ಮಾತುಕತೆಗೆ ಪ್ರಯತ್ನಗಳು ನಡೆಯುತ್ತಿವೆಯಾದರೂ ಯಾವುದೂ ಫಲಪ್ರದವಾಗಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 2 =
Remember me
