ಕಲ್ಕತ್ತಾ:ಪಶ್ಚಿಮ ಬಂಗಾಳ ಸರ್ಕಾರದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ಆಯೋಜಿಸಿರುವ 29ನೇ ಕಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (KIFF) ವರ್ಣರಂಜಿತ ಚಾಲನೆ ದೊರೆತ್ತಿದ್ದು, ಕಾರ್ಯಕ್ರಮಕ್ಕೆ ಬಾಲಿವುಡ್​ ಸೆಲೆಬ್ರಿಟಿಗಳ ದಂಡೇ ಹಾಜರಾಗಿದೆ. ಇತ್ತ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಾಲಿವುಡ್​ ನಟರ ಜೊತೆ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಜತೆ ನಿರ್ದೇಶಕ ಮಹೇಶ್​ ಭಟ್​, ನಟರಾದ ಸಲ್ಮಾನ್​ ಖಾನ್​, ಅನಿಲ್​ ಕಪೂರ್​, ಸೋನಾಕ್ಷಿ ಸಿನ್ಹಾ, ಶತ್ರುಘ್ನ ಸಿನ್ಹಾ, ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಜೊತೆ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಕಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (KIFF) 2023 ಥೀಮ್​ ಸಾಂಗ್​ಗೆ ಇವರೆಲ್ಲರೂ ಹೆಜ್ಜೆ ಹಾಕಿದ್ದಾರೆ.
#WATCH| Kolkata: West Bengal CM Mamata Banerjee, Film Director Mahesh Bhatt, former Indian cricketer Sourav Ganguly, actors Salman Khan, Anil Kapoor and Sonakshi Sinha shake a leg at the Kolkata International Film Festival (KIFF).(Source: KIFF Social Media)pic.twitter.com/EHOKtK9g3B
ಇದನ್ನೂ ಓದಿ:VIDEO| ಹಾಡಹಗಲೇ ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಅಧ್ಯಕ್ಷನ ಗುಂಡಿಕ್ಕಿ ಹತ್ಯೆ
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಲ್ಮಾನ್​ ಖಾನ್​ ನಾನು ನೋಡಿದ ಅತಿ ದೊಡ್ಡ ಚಿತ್ರೋತ್ಸವಗಳಲ್ಲಿ ಇದೂ ಕೂಡ ಒಂದು. ನನಗೆ ಮಮತಾ ಬ್ಯಾನರ್ಜಿ ಅವರ ಬಗ್ಗೆ ಅಸೂಯೆ ಇದ್ದು, ಅಷ್ಟು ಚಿಕ್ಕ ಮನೆಯಲ್ಲಿ ಹೇಗೆ ವಾಸಿಸುತ್ತಿದ್ದಾರೆ ಎಂಬುದು ಈವರೆಗೆ ನನಗೆ ಅರ್ಥವಾಗಿಲ್ಲ ಎಂದ ಸಲ್ಮಾನ್​ ಬಳಿಕ ತಮ್ಮ ಚಿತ್ರದ ಡೈಲಾಗ್​ ಒಂದನ್ನು ಹೇಳುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ದಾರೆ.
ಕಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು 1995ರಲ್ಲಿ ಶುರು ಮಾಡಲಾಯಿತು. ಬಂಗಾಳ ಚಿತ್ರರಂಗದ ಹಿರಿಯ ನಟರಾದ ಸತ್ಯಜಿತ್ ರೇ, ಋತ್ವಿಕ್ ಘಾಟಕ್, ಮೃಣಾಲ್ ಸೇನ್ ಮತ್ತು ನಿರ್ಮಾಪಕದರಿಂದ ಸ್ಪೂರ್ತಿ ಪಡೆದಿದ್ದು, ಕಾರ್ಯಕ್ರಮವನ್ನು ಡಿಸೆಂಬರ್​ 05ರಿಂದ 12ನೇ ತಾರೀಖಿನವರೆಗೂ ನಡೆಸಲಾಗುತ್ತದೆ. ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಸಂಘ (FIAPF) ಗುರುತಿಸಿ ಅನುಮೋದನೆ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 7 =
Remember me
