ಚೆನ್ನೈ:ಟಾಂಜಾನಿಯಾದ ಜನಪ್ರಿಯ ಇಂಟರ್ನೆಟ್ ಸೆನ್ಸೇಷನ್​ ಕಿಲಿ ಪಾಲ್ ಇತ್ತೀಚೆಗೆ ತಮಿಳಿನ ತಮಿಳಿನ ‘ಕಚ್ಚಿ ಸೆರಾ’ ಹಾಡಿಗೆ ಹೃದಯಪೂರ್ವಕವಾಗಿ ಭಾವಾಭಿನಯ ಮಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿದೆ.
ಇದನ್ನೂ ಓದಿ:ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯರ ವಾಶ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ..ಆರೋಪಿ ಲ್ಯಾಪ್‌ಟಾಪ್‌ನಲ್ಲಿ 300 ಅಶ್ಲೀಲ ವಿಡಿಯೋ!
ಕಿಲಿಪಾಲ್​ಗೆ ಭಾಷೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ, ಅವರು ರೋರಿದ ಅಭಿವ್ಯಕ್ತಿ ಎಂಥವರನ್ನೂ ಬೆರಗುಗೊಳಿಸುತ್ತದೆ. ಹಾಡಿಗೆ ತಕ್ಕಂತೆ ತುಟಿಯಾಡಿಸುವುದು, ಕಣ್ಣ ಹುಬ್ಬೇರಿಸುವುದು, ಕೈ ಬೀಸುವುದು ಹಾಗೂ ಮುಖಭಾವಗಳೊಂದಿಗೆ ಪ್ರದರ್ಶನ ಮಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ.

A post shared by Kili Paul (@kili_paul)

ಕಿಲಿ ಪೌಲ್ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಅವರು ಮೂಲತಃ ಯುವ ಸಂಗೀತ ಕಲಾವಿದ ಸಾಯಿ ಅಭ್ಯಂಕರ್ ಅವರು ಪ್ರದರ್ಶಿಸಿದ ‘ಕಚ್ಚಿ ಸೆರಾ’ ಹಾಡಿಗೆ ತುಟಿ ಸಿಂಕ್ ಮಾಡುವುದನ್ನು ಮತ್ತು ವೈಬ್ ಮಾಡುವುದನ್ನು ಕಾಣಬಹುದು.
ವೀಡಿಯೋದಲ್ಲಿ ಕಿಲಿ ಮೊದಲು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಬಳಿಕ ಬೀಟ್‌ನ ಸಾಹಿತ್ಯಕ್ಕೆ ಟ್ಯೂನ್ ಮಾಡಿ, ಲಿಪ್ ಸಿಂಕ್ ಮಾಡುತ್ತಾರೆ. ಬಳಿಕ ಹಾಡು ಮುಂದುವರಿಯುತ್ತಿದ್ದಂತೆ ಪ್ರತಿ ಪದಕ್ಕೆ ತಕ್ಕಂತೆ ಎಲ್ಲೂ ವ್ಯತ್ಯಾಸವಾಗದಂತೆ ತಮಿಳು ಭಾಷೆ ಚೆನ್ನಾಗಿ ಬಲ್ಲವರಂತೆ ಭಾವಾಭಿನಯ ಮಾಡಿ ತೋರಿಸುತ್ತಾರೆ. ಹಾಡಿನ ಭಾವಕ್ಕೆ ತಕ್ಕಂತೆ ಆನಂದಿಸುತ್ತಿರುವುದು ಅದರಲ್ಲಿ ಕಂಡುಬಂದಿದೆ. ಅವರ ಸಹಜ ಮತ್ತು ನೈಜ ಅಭಿವ್ಯಕ್ತಿ ಹಾಡಿನೊಂದಿಗೆ ಅದ್ಭುತವಾಗಿ ಪ್ರತಿಧ್ವನಿಸಿದೆ. ಇದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ.
ಅವರ ರೀಲ್​ಗೆ ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ಹೃದಯ ಮತ್ತು ಚಪ್ಪಾಳೆ ತಟ್ಟುವ ಎಮೋಜಿಗಳನ್ನು ಹಾಕಿದ್ದಾರೆ. ತಮಿಳುನಾಡಿಗೆ ಭೇಟಿ ನೀಡುವಂತೆ ಅಭಿಮಾನಿಗಳು ಕೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಐದು ಲಕ್ಷ ವೀಕ್ಷಣೆ ಮತ್ತು 50,000 ಲೈಕ್‌ಗಳನ್ನು ಆಕರ್ಷಿಸಿದೆ.
‘ಕಂಗನಾಗೆ ಅತ್ಯಾಚಾರಗಳ ಬಗ್ಗೆ ಸಾಕಷ್ಟು ಅನುಭವವಿದೆ’: ವಿವಾದಾತ್ಮಕ ಹೇಳಿಕೆ ನೀಡಿದ ಸಿಮ್ರಂಜಿತ್​ಸಿಂಗ್ ಮಾನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 3 =
Remember me
