ಸಿಯೋಲ್:ಉತ್ತರ ಕೊರಿಯಾದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ನಾನಾ ಊಹಾಪೋಹಗಳು ಎಲ್ಲೆಡೆ ಎದ್ದಿವೆ. ಅನೇಕ ದಿನಗಳಿಂದ ದಿಢೀರ್​ ನಾಪತ್ತೆಯಾಗಿರುವ ಕಿಮ್​ ಜಾಂಗ್​ ಬದುಕಿ ಇರುವುದು ಸಂದೇಹ ಎಂದೇ ಬಿಂಬಿಸಲಾಗುತ್ತಿದೆ. ಆದ್ದರಿಂದ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆಯೂ ಶುರುವಾಗಿಬಿಟ್ಟಿದೆ.ಆದರೆ ಉತ್ತರ ಕೊರಿಯಾದ ಭದ್ರತಾ ಸಲಹೆಗಾರ ಮೂನ್ ಜೇ ಇನ್ ಈ ಊಹಾಪೋಹಗಳೆಲ್ಲಾ ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ ‘ಕಿಮ್​ ಜಾಂಗ್​ ಉನ್​ ಜೀವಂತವಾಗಿದ್ದು ಆರೋಗ್ಯವಾಗಿದ್ದಾರೆ. ಅಷ್ಟೇ ಅಲ್ಲದೆ, ನಮ್ಮ ಸರ್ಕಾರದ ಸ್ಥಾನವೂ ಭದ್ರವಾಗಿದೆ’ ಎಂದಿದ್ದಾರೆ. ಅನೇಕ ಮಾಧ್ಯಮಗಳಲ್ಲಿ ಕಿಮ್​ ಜಾಂಗ್​ ಮೃತಪಟ್ಟಿದ್ದಾರೆ ಎಂಬಂತೆ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ಮೂಜ್​ ಜೇ ಇನ್​ ಈ ಸ್ಪಷ್ಟನೆ ನೀಡಿದ್ದಾರೆ.‘ಕಿಮ್ ಜಾಂಗ್ ಉನ್ ಆರೋಗ್ಯ ಉತ್ತಮವಾಗಿದೆ. ಉತ್ತರ ಕೊರಿಯಾದ ಪೂರ್ವದ ರೆಸಾರ್ಟ್ ಪಟ್ಟಣ ವೋನ್ಸಾನ್ ನಲ್ಲಿ ಅವರು ಏಪ್ರಿಲ್ 13ರಿಂದಲೂ ತಂಗಿದ್ದಾರೆ. ಮಾಧ್ಯಮಗಳು ವರದಿ ಮಾಡಿದಂತೆ ಯಾವುದೇ ಘಟನೆಗಳು ಸಂಭವಿಸಿಲ್ಲ’ ಎಂದು ಅವರು ಹೇಳಿದ್ದಾರೆ. ಆದರೆ ಅವರ ಈ ಹೇಳಿಕೆಯ ನಂತರವೂ ಊಹಾಪೋಹಗಳಿಗಂತೂ ತೆರೆ ಬಿದ್ದಿಲ್ಲ!ಕಿಮ್​ ಜಾಂಗ್​ ಏಪ್ರಿಲ್​ 15ಕ್ಕಿಂತ ಮುಂಚೆ ಅಂದರೆ ಏಪ್ರಿಲ್​ 11ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೇ ಕೊನೆ. ಏಪ್ರಿಲ್ 15 ರಂದು ಕಿಮ್​ನ ಅಜ್ಜ ಮತ್ತು ಉತ್ತರ ಕೊರಿಯಾದ ಸಂಸ್ಥಾಪಕರಾಗಿದ್ದ ಕಿಮ್ ಇಲ್ ಸೂಂಗ್ ಹುಟ್ಟುಹಬ್ಬ. ಎಂದಿಗೂ ಈ ದಿನದ ಕಾರ್ಯಕ್ರಮದ ಆಚರಣೆಯನ್ನು ತಪ್ಪಿಸದಿದ್ದ ಕಿಮ್​ ಈ ವರ್ಷ ಅಂದು ಕೂಡ ಕಾಣಿಸಿಕೊಂಡಿರಲಿಲ್ಲ. ಈ ಕಾರಣದಿಂದ ಮಾಧ್ಯಮಗಳಲ್ಲಿ ಅವರು ಅನಾರೋಗ್ಯ ಪೀಡಿತರಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ತಿಂಗಳ ಆರಂಭದಲ್ಲಿ ಹೃದಯ ಸಂಬಂಧಿ ಪ್ರಕ್ರಿಯೆಗೆ ಒಳಪಟ್ಟ ನಂತರ ಯಾವುದೇ ಕಾರ್ಯಕ್ರಮ ಅಥವಾ ಸಾರ್ವಜನಿಕವಾಗಿ ಕಿಮ್​ ಕಾಣಿಸಿಕೊಂಡಿರಲಿಲ್ಲ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಅನೇಕ ರೀತಿಯಲ್ಲಿ ವರದಿಗಳು ಬಿತ್ತರವಾಗುತ್ತಿವೆ. ಜತೆಗೆ ಅವರ ಉತ್ತರಾಧಿಕಾರಿಯ ಚರ್ಚೆಯೂ ಶುರುವಾಗಿದೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twenty + 13 =
Remember me
