ಮುಂಬೈ:ಅಮೆರಿಕದ ಖ್ಯಾತ ನಟಿ, ಮಾಡೆಲ್​, ಉದ್ಯಮಿ ಕಿಮ್​ ಕರ್ದಾಶಿಯನ್​ ಬರೋಬ್ಬರಿ 3 ಕೋಟಿ ರೂಪಾಯಿಗೂ ಅಧಿಕ ಬೆಲೆಯ ಬ್ಯಾಗ್ ಹಿಡಿದು ಫುಟ್​ಬಾಲ್​ ಪಂದ್ಯ ನೋಡಲು ಬಂದಿರುವುದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಚರ್ಚೆಯಾಗುತ್ತಿದೆ.
ಕಿಮ್​ ಕರ್ದಾಶಿಯನ್​ ಫುಟ್​ಬಾಲ್​ ಪಂದ್ಯ ನೋಡಲು ಬಂದಿದ್ದ ವೇಳೆ​ ಒಂದು ಬ್ಯಾಗ್​ ಹಿಡಿದುಕೊಂಡಿದ್ದರು. ಸಿಲ್ವರ್ ಬಣ್ಣದ ಬ್ಯಾಗ್​ ಇದಾಗಿದೆ. ಇದರ ಬೆಲೆ ಬರೋಬ್ಬರಿ 3 ಕೋಟಿ 12 ಲಕ್ಷದ 61 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ.
ಬ್ಯಾಗ್​ನ ವಿಶೇಷತೆ?:ಇದು ಪ್ರತಿಷ್ಠಿತ ಹರ್ಮೆಸ್​ ಕಂಪನಿಯ ಬ್ಯಾಗ್​. ಬಂಗಾರ ಮತ್ತು ವಜ್ರದಿಂದ ಮಾಡಿದ ವಿನ್ಯಾಸ ಇದೆ. ಜಗತ್ತಿನ ಕೆಲವೇ ಕೆಲವು ಮಂದಿ ಮಾತ್ರ ಈ ಬ್ಯಾಗ್‌ನ ಮಾಲಿಕರಾಗಿದ್ದಾರೆ. ಈಗಾಗಲೇ ಎಲ್ಲಾ ಬ್ಯಾಗ್​ಗಳು ಸೋಲ್ಡ್​ ಔಟ್​ ಆಗಿವೆ. ಬೇಕು ಎಂದರೂ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಅಷ್ಟೋಂದು ದುಬಾರಿ ಹಾಗೂ ವಿಶೇಷವಾಗಿದೆ.
ಬ್ಯಾಗ್​​ ಬೆಲೆ ಕೇಳಿ ನೆಟ್ಟಿಗರು ಆ ಚಿಕ್ಕ ಬ್ಯಾಗ್‌ಗೆ ಅಷ್ಟು ಕೊಟ್ಟಿದ್ದಾರಾ? ಅಷ್ಟಕ್ಕೂ ಇದು ಎಂಥ ಬ್ಯಾಗ್​? ಇದರಲ್ಲಿ ಅಂಥ ವಿಶೇಷತೆ ಏನು ಎಂದು ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × four =
Remember me
