ಅಯೋಧ್ಯೆ:ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ನಡೆಯಲಿರುವ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭಕ್ಕೆ ಸದ್ಯ ದಿನಗಣನೆ ಆರಂಭಗೊಂಡಿದ್ದು, ದೇಶದ ನಾನಾ ಭಾಗಗಳಿಂದ ಹಲವಾರು ವಿಶೇಷ ಕೊಡುಗೆಗಳು ದೇವಾಲಯಕ್ಕೆ ಹರಿದುಬರುತ್ತಿವೆ. ಇದರೊಟ್ಟಿಗೆ ರಾಮನ ವಿಗ್ರಹ ಪ್ರತಿಷ್ಠಾಪನೆ ದಿನದಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿದ್ದು, ರಾಜಕೀಯ ನಾಯಕರು ಸೇರಿದಂತೆ ಗಣ್ಯಾತಿ ಗಣ್ಯರು ಕಾರ್ಯಕ್ರಮಕ್ಕೆ ಆಹ್ವಾನ ಪಡೆದಿದ್ದಾರೆ. ಈ ಮಧ್ಯೆ ಜನವರಿ 22ರಂದು ಜನಿಸುವ ಮಕ್ಕಳನ್ನು ಆಶೀರ್ವದಿಸಲು ಪೋಷಕರಿಂದ ಹಣ ಪಡೆಯುವುದು ಅಥವಾ ಯಾವುದೇ ರೀತಿಯ ಉಡುಗೊರೆಗಳನ್ನು ಪಡೆಯುವುದಿಲ್ಲ ಎಂದು ‘ಕಿನ್ನರ್’ ಸಮುದಾಯ ಹೇಳಿದೆ.
ಇದನ್ನೂ ಓದಿ:ದಿವ್ಯಾ ಪಹುಜಾ ಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಯ್ತು ಶಾಕಿಂಗ್ ಸಂಗತಿ!
“ಜನವರಿ 22ರಂದು ಜನಿಸಿದ ಮಕ್ಕಳನ್ನು ಆಶೀರ್ವದಿಸಲು ಪೋಷಕರಿಂದ ಸಾಂಪ್ರದಾಯಿಕ ಉಡುಗೊರೆಗಳೇ ಆಗಲಿ ಅಥವಾ ಹಣವನ್ನೇ ಆಗಲಿ ನಾವು ತೆಗೆದುಕೊಳ್ಳುವುದಿಲ್ಲ ಎಂದು ಬರೇಲಿಯ ‘ಕಿನ್ನರ್’ ಸಮುದಾಯ ತಿಳಿಸಿದೆ. ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ದಿನದಂದು ಜನಿಸಿದ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಅಭಿನಂದನಾ ಗೀತೆಗಳನ್ನು ಹಾಡುತ್ತೇವೆ” ಎಂದು ಸಮುದಾಯದ ಶಾರದಾ ಅವರು ಹೇಳಿದರು.
“ನವಜಾತ ಶಿಶುಗಳನ್ನು ಆಶೀರ್ವದಿಸುವುದಕ್ಕಾಗಿ ನಾವು ಭೇಟಿ ನೀಡುವ ಮನೆಗಳಲ್ಲಿ ಆಯಾ ಕುಟುಂಬದವರಿಂದ ಯಾವುದೇ ರೀತಿಯಲ್ಲಿ ಹಣ ಸ್ವೀಕರಿಸುವುದಿಲ್ಲ. ಆದರೆ ಅವರು ಸಂತೋಷದಿಂದ ಏನಾದರೂ ಕೊಟ್ಟರೇ ಖಂಡಿತ ಅದನ್ನು ಪಡೆಯುತ್ತೇವೆ. ಜನವರಿ 22ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲು ಪ್ರತಿ ಮನೆಗೆ ಐದು ದೀಪಗಳನ್ನು ಕಳುಹಿಸುತ್ತಿದ್ದೇವೆ” ಎಂದು ಶಾರದಾ ಹೇಳಿದ್ದಾರೆ,(ಏಜೆನ್ಸೀಸ್).
ದಿವ್ಯಾ ಪಹುಜಾ ಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಯ್ತು ಶಾಕಿಂಗ್ ಸಂಗತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 8 =
Remember me
