ಬೆಳಗಾವಿ:ರೈತರ ಉತ್ಪನ್ನಗಳನ್ನು ತ್ವರಿತವಾಗಿ ದೇಶದ ವಿವಿಧ ಮಹಾನಗರಗಳಿಗೆ ತಲುಪಿಸುವ ಉದ್ದೇಶದಿಂದ ಆರಂಭಿಸಿರುವ ದೇವ್ಲಾಲಿ-ಧನ್​ಪುರ್ ಕಿಸಾನ್ ರೈಲಿಗೆ ದೆಹಲಿಯಿಂದ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಹಾಗೂ ಬೆಳಗಾವಿಯಿಂದ ವಿಡಿಯೋ ಲಿಂಕ್ ಮೂಲಕ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಶುಕ್ರವಾರ ಹಸಿರು ನಿಶಾನೆ ತೋರಿದರು. ಸಚಿವ ಅಂಗಡಿ ಮಾತನಾಡಿ, ದೇವ್ಲಾಲಿ-ಧನ್​ಪುರ್ ಕಿಸಾನ್ ರೈಲಿನಲ್ಲಿ ಸದ್ಯ 10 ಬೋಗಿ ಅಳವಡಿಸಲಾಗಿದೆ. ಈಗಾಗಲೇ ಕಿತ್ತಳೆ, ದ್ರಾಕ್ಷಿ, ಈರುಳ್ಳಿ ಸೇರಿ ವಿವಿಧ ತರಕಾರಿ ಸಾಗಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ರೈತರಿಗೆ ವರದಾನ:ಕನ್ಯಾಕುಮಾರಿಯಿಂದ- ಕಾಶ್ಮೀರದವರೆಗೆ ದೇಶದ ವಿವಿಧೆಡೆ ಕ್ಲಸ್ಟರ್ ನಿರ್ಮಾಣ ಮಾಡಿ, ರೈತರ ಉತ್ಪನ್ನಗಳಿಗೆ ಬೇಡಿಕೆ ಇರುವ ಮಹಾನಗರಗಳಿಗೆ ತಲುಪಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರ ಸಹ ಕಿಸಾನ್ ರೈಲು ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಿದೆ. ಕರ್ನಾಟಕದ ರೈತರ ಬೇಡಿಕೆಗೆ ಅನುಗುಣವಾಗಿ ರೈಲು ಆರಂಭಿಸಲಾಗುವುದು. ಬೆಳಗಾವಿಯಿಂದ-ಗೋವಾ- ಹೈದ್ರಾ ಬಾದ್ ಸೇರಿ ವಿವಿಧೆಡೆಯಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ತರಕಾರಿ ಹಾಗೂ ಕೃಷಿ ಉತ್ಪನ್ನಗಳನ್ನು ಮಹಾನಗರಗಳಿಗೆ ತಲುಪಿಸಲು ಈ ರೈಲು ಅನುಕೂಲವಾಗಲಿದೆ. ರೈತರಿಗೆ ವರದಾನವಾಗಲಿದೆ ಎಂದರು. ರೈಲ್ವೆ, ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಸಚಿವ ಛಗನ್ ಬುಜ್​ಬಲ್, ಮಹಾರಾಷ್ಟ್ರದ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್, ಕೇಂದ್ರ ಗ್ರಾಹಕ ವ್ಯವಹಾರ ಸಚಿವ ರಾವ್​ಸಾಹೇಬ ದಾನ್ವೇ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು.
ಕಂಟೇನರ್ ಸರಕು ಸಾಗಣೆಗೆ ರಿಯಾಯಿತಿ
ಬೆಂಗಳೂರು: ರೈಲಿನ ಮೂಲಕ ಸರಕು ಸಾಗಣೆಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಹಲವು ರಿಯಾಯಿತಿ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಕಂಟೇನರ್ ಮೂಲಕ ಸರಕು ಸಾಗಣೆಗೆ ಶೇ. 5 ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ.ಕರೊನಾ ಸೋಂಕಿನ ಭೀತಿಯಿಂದಾಗಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರ ರೈಲು ಸೇವೆ ಆರಂಭವಾಗಿಲ್ಲ. ರೈಲ್ವೆ ಇಲಾಖೆಗೆ ಸಾವಿರಾರು ಕೋಟಿ ರೂ. ನಷ್ಟವುಂಟಾಗಿದೆ. ಸರಕು ಸಾಗಣೆ ಮೂಲಕ ಆದಾಯಗಳಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ನೂತನ ರಿಯಾ ಯಿತಿ ದರದ ಕುರಿತು ರೈಲ್ವೆ ಇಲಾಖೆ ಆ. 4ರಂದೇ ನೋಟಿಫಿಕೇಷನ್ ಹೊರಡಿಸಿದೆ. ನೂತನ ದರ ಆ. 8ರಿಂದ 2021ರ ಏಪ್ರಿಲ್ 30ರವರೆಗೆ ಅನ್ವಯವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + twenty =
Remember me
