ಬೆಂಗಳೂರು:ಕರೊನಾ ವೈರಸ್‌ನಿಂದ ಅನೇಕ ದೇಶಗಳು ಚೇತರಿಸಿಕೊಂಡಿಲ್ಲ. ಹೀಗಿರುವಾಗ ಈಗ ಕಿಸ್ಸಿಂಗ್ ಡಿಸೀಜ್. ಇದೇನಿದು ಹೊಸ ಕಾಯಿಲೆ ಅಂತಾ ಯೋಚನೆ ಮಾಡ್ತಾ ಇದ್ದೀರ? ಈ ಅಮೆರಿಕದಂತಹ ದೇಶಗಳಲ್ಲಿ ಕಿಸ್ಸಿಂಗ್ ಡಿಸೀಜ್ ಅಪಾಯದ ಮಟ್ಟಕ್ಕೇರಿದೆ. ಈ ರೋಗವು ಮುಖ್ಯವಾಗಿ ಲಾಲಾರಸದ ಮೂಲಕ ದೇಹವನ್ನು ಪ್ರವೇಶಿಸುವುದರಿಂದ ಇದನ್ನು ಕಿಸ್ಸಿಂಗ್ ಕಾಯಿಲೆ ಎಂದೇ ಹೆಸರಾಗಿದೆ.
ಕಿಸ್ಸಿಂಗ್ ಮೂಲಕವೇ ಈ ಸಾಂಕ್ರಾಮಿಕ ರೋಗ ಹರಡುತ್ತಿದೆ. ಈಗಾಗಲೇ ಬ್ರಿಟನ್‌ನಲ್ಲಿ ಈ ವೈರಸ್‌ನಿಂದಾಗಿ ಕಾಲೇಜು ವಿದ್ಯಾರ್ಥಿಯೊರ್ವ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಎಪ್ಸ್ಟೀನ್-ಬಾರ್ ವೈರಸ್​​ನಿಂದ ಉಂಟಾಗುತ್ತದೆ. ಇದು ಸೋಂಕಿತ ವ್ಯಕ್ತಿಯ ಬಾಯಿಯಿಂದ ಲಾಲಾರಸದ ನೇರ ಸಂಪರ್ಕದಿಂದ ಅಥವಾ ರಕ್ತದಂತಹ ಇತರ ದೈಹಿಕ ದ್ರವಗಳ ಮೂಲಕ ಹರಡುತ್ತದೆ. ಚುಂಬನ, ಲೈಂಗಿಕ ಸಂಪರ್ಕ ಮೂಲಕ ಹರಡಬಹುದು. ಒಮ್ಮೆ ಈ ರೋಗವು ಸೋಂಕಿತ ವ್ಯಕ್ತಿಯ ಲಾಲಾರಸದ ಮೂಲಕ ಇನ್ನೊಬ್ಬ ವ್ಯಕ್ತಿಗೆ ಸೋಂಕು ತಗಲುತ್ತದೆ.
ಕಿಸ್ಸಿಂಗ್ ಕಾಯಿಲೆ ಲಿಪ್‌ಲಾಕ್ ಕಿಸ್, ಒಂದೇ ಸ್ಪೂನ್, ಒಂದೇ ಸಿಗರೇಟು ಇಬ್ಬರು ಬಳಸುವುದು ಹೀಗೆ ವೈರಸ್ ದೇಹವನ್ನು ಪ್ರವೇಶಿಸಿದಾಗ, ಮೊದಲ ಬದಲಾವಣೆಯು ಗಂಟಲಿನಲ್ಲಿ ಕಂಡು ಬರುತ್ತದೆ.
ಕೆಮ್ಮು, ನೋಯುತ್ತಿರುವ ಗಂಟಲು ಅನುಭವಕ್ಕೆ ಬರುತ್ತದೆ ವ್ಯಕ್ತಿಯ ಗಂಟಲು ನೋಯಿಸಲು ಪ್ರಾರಂಭಿಸುತ್ತದೆ.
ಜ್ವರ ಬಂದಾಗ ಗಂಟಲಿನ ಗ್ರಂಥಿಗಳು ಊದಿಕೊಳ್ಳುತ್ತವೆ. ಇದರ ನಂತರ ವ್ಯಕ್ತಿಯು ವಾಂತಿ ಮಾಡಲು ಪ್ರಾರಂಭಿಸುತ್ತಾನೆ ಆಗಾಗ್ಗೆ ಮೈ ಬೆವರಲು ಹೆಚ್ಚಾಗುತ್ತದೆ. ತಲೆ ಮತ್ತು ಮೈಕೈ ನೋವು ಕಾಣಿಸಿಸಕೊಳ್ಳುತ್ತದೆ. ಅಲ್ಲದೆ ಹಸಿವಿನ ಕೊರತೆ, ಯಕೃತ್ತಿನಲ್ಲಿ ನೋವು ಸಹ ಇದರ ಲಕ್ಷಣಗಳಾಗಿವೆ. ಕಿಸ್ಸಿಂಗ್ ಕಾಯಿಲೆ ತಡೆಗಟ್ಟಲು ಮುಖ್ಯವಾಗಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.
ಪ್ರಭುದೇವ ಅಜ್ಜಿ ನಿಧನ; ಅಂತ್ಯಕ್ರಿಯೆಗೆ ಮೈಸೂರಿಗೆ ಆಗಮಿಸಿದ ನಟ
ಪ್ರಭುದೇವ ಅಜ್ಜಿ ನಿಧನ; ಅಂತ್ಯಕ್ರಿಯೆಗೆ ಮೈಸೂರಿಗೆ ಆಗಮಿಸಿದ ನಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
