ನವದೆಹಲಿ:ಬೆಕ್ಕುಗಳೇ ಹಾಗೆ. ಕದ್ದು ಹಾಲು ಕುಡಿಯುವುದು ಇಲ್ಲವೇ ಮೀನನ್ನು ಬಾಯಲ್ಲಿ ಕಚ್ಚಿಕೊಂಡು ಓಡುವುದು ಸಾಮಾನ್ಯ. ಆದರೆ, ಇಲ್ಲೊಂದು ಬೆಕ್ಕು ಪದೇಪದೆ ಬಾಕ್ ಕೌಂಟರ್​ನಿಂದ ಹಣದ ಕಟ್ಟನ್ನು ಎಗರಿಸಿಕೊಂಡು ಹೋಗುತ್ತದೆ.
ಪಾಪ, ಅದೇನೂ ಖರೀದಿ ಮಾಡಬೇಕು ಅಂದುಕೊಂಡಿದೆಯೋ ಅಥವಾ ಸಾಲಸೋಲ ಏನಾದರೂ ಮಾಡಿಕೊಂಡಿದೆಯೋ ಗೊತ್ತಿಲ್ಲ. ಆದರೆ ಬಾರ್​ನ ಕೌಂಟರ್​ನಲ್ಲಿ ಮಾಲೀಕ ಇಲ್ಲ ಎನ್ನುತ್ತಲೇ, ಕೌಂಟರ್​ನಲ್ಲಿರುವ ಹಣದ ಕಟ್ಟನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತದೆ. ಹಾಗೆ ಮಾಡಿದಾಗ ಪ್ರತಿಬಾರಿಯೂ ಅದು ಸಿಕ್ಕಿಬಿದ್ದಿದೆ.
ಇದು ರಷ್ಯಾದ ಪಬ್​ ಒಂದರಲ್ಲಿ ದಿನವೂ ನಡೆಯುವ ಘಟನೆ. ಇದಕ್ಕೂ ಮುನ್ನ ಈ ಬೆಕ್ಕು ಹಣದ ಕಟ್ಟನ್ನು ಬಾಯಲ್ಲಿ ಕಚ್ಚಿಕೊಂಡು ಪಬ್​ನ ಮುಖ್ಯದ್ವಾರದತ್ತ ಹೋಗುತ್ತಿರುವುದನ್ನು ಗ್ರಾಹಕರೊಬ್ಬರು ಗಮನಿಸಿದ್ದರು. ತಕ್ಷಣವೇ ಅದನ್ನು ಅಡ್ಡಹಾಕಿ ಹಣದ ಕಟ್ಟನ್ನು ಪಡೆದು ಪಬ್​ ಮಾಲೀಕರಿಗೆ ಹಿಂದಿರುಗಿಸಿದ್ದರು.
ಇದನ್ನೂ ಓದಿ:ವಿಡಿಯೋ: ಕಳ್ಳನ ಬೈಕ್ ಕೆಡವಿ ಮಗಳನ್ನು ಕಾಪಾಡಿದ ಅಮ್ಮ
ಆದರೆ, ಈ ಬಾರಿ ಅದು ಮಾಲೀಕ ಕ್ಯಾಶ್​ ಕೌಂಟರ್​ನಲ್ಲಿ ಇಲ್ಲದಿರುವುದನ್ನು ಗಮನಿಸಿ, ಒಂದು ಕಟ್ಟು ಎತ್ತಿಕೊಂಡು ಹೋಗುತ್ತಿತ್ತು. ಸರಿಯಾಗಿ ಅದೇ ವೇಳೆಗೆ ಪಬ್​ನ ಮಾಲೀಕ ಬಂದಿದ್ದರಿಂದ ಆತನ ಕೈಗೆ ಹಣಕೊಟ್ಟು ಅಮಾಯಕನಂತೆ ಕುಳಿತುಕೊಂಡಿತು. ಅವರು ಕೌಂಟರ್​ನಲ್ಲಿ ಹಣದ ಕಟ್ಟನ್ನು ಇರಿಸಿ ಬರುತ್ತಲೇ ತನಗೆ ಇನ್ನೆಲ್ಲಿ ಹೊಡೆಯುತ್ತಾರೋ ಎಂಬ ಭಯದಲ್ಲಿ ಓಡಿ ತಪ್ಪಿಸಿಕೊಂಡಿತು.
ಬೆಕ್ಕಿನ ಈ ಕೃತ್ಯ ಪಬ್​ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಪಬ್​ ಮಾಲೀಕ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರಷ್ಯಾದ ದಿನಪತ್ರಿಕೆ ಡೇಲಿಸ್ಟಾರ್​ ಪ್ರಕಾರ, ಈ ಬೆಕ್ಕನ್ನು ಯಾರೋ ರಟ್ಟಿನ ಪೆಟ್ಟಿಗೆಯಲ್ಲಿ ಇರಿಸಿ ರಸ್ತೆ ಬದಿ ಬಿಟ್ಟು ಹೋಗಿದ್ದರಂತೆ. ಅದನ್ನು ಪಬ್​ನ ಮಾಲೀಕ ನಡೇಡಾ ವೊಡೊಲೋಜ್​ಕಾಯಾ ಎಂಬಾತ ಗಮನಿಸಿ, ಪಬ್​ಗೆ ಕರೆತಂದು ಸಾಕಿಕೊಂಡಿದ್ದಾರೆ. ಹೀಗಾಗಿ ಬಹುಶಃ ಈ ಬೆಕ್ಕಿನ ಹಿಂದಿನ ಮಾಲೀಕರು ಯಾರಾದರೂ ಕಳ್ಳರಾಗಿರಬಹುದಾ? ಅವರು ಹಣ ಕದಿಯುವ ತರಬೇತಿಯನ್ನು ಇದಕ್ಕೆ ಕೊಟ್ಟಿದ್ದಾರಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಿಪಿಇ ಗೌನ್ ತೊಟ್ಟಿದ್ದ ನರ್ಸ್​ಗೆ ಒಲಿಯಿತು ಅದೃಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − seven =
Remember me
