ನವದೆಹಲಿ:ದೇಶವನ್ನಾಳುವವರೇ ಆಗಿರಲಿ ಅಥವಾ ಕೂಲಿ ಕಾರ್ಮಿಕನೇ ಆಗಿರಲಿ, ಅವರವರ ಶ್ರೀಮತಿಯ ಮಾತು ಕೇಳಬೇಕಾಗಿರುವುದು ಅತಿ ಮುಖ್ಯ. ಹೆಂಡತಿಯ ಮಾತು ಕೇಳದೆ, ಒಬ್ಬರೇ ಹೋಗಿ ಕರೊನಾ ಲಸಿಕೆ ಪಡೆದು ಬಂದ ಪ್ರಸಿದ್ಧ ವೈದ್ಯರಿಗೆ ಅವರ ಪತ್ನಿ ಕ್ಲಾಸ್​ ತೆಗೆದುಕೊಂಡು ವಿಡಿಯೋ ಇದೀಗ ಸಕತ್​ ವೈರಲ್​ ಆಗಿದೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ತಂಡದ ವೇಗಿ ಕಗಿಸೋ ರಬಾಡ ತ್ರಿವಳಿ ದಾಖಲೆಗಳ ಒಡೆಯ..!
ಪದ್ಮಶ್ರೀ ಪುರಸ್ಕೃತ ಹೃದ್ರೋಗ ತಜ್ಞ ಕೆಕೆ ಅಗರ್​ವಾಲ್​ ಸೋಮವಾರದಂದು ಕರೊನಾ ಲಸಿಕೆ ಪಡೆದಿದ್ದಾರೆ. ಹೆಂಡತಿ, ಮಗನೊಂದಿಗೆ ಹೋಗಿ ಲಸಿಕೆ ತೆಗೆದುಕೊಳ್ಳಬೇಕಾದ ಅವರು ಅವರಿಬ್ಬರನ್ನು ಬಿಟ್ಟು ಒಬ್ಬರೇ ಹೋಗಿ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದು ವಾಪಾಸು ಬರುವಾಗ ಲಸಿಕೆ ಪಡೆದ ನಂತರ ಹೇಗಿರುತ್ತದೆ ಎನ್ನುವುದನ್ನು ಲೈವ್​ನಲ್ಲಿ ಹೇಳುತ್ತಿದ್ದರು. ಅಷ್ಟರಲ್ಲಾಗಲೇ ಲೈವ್​ ವಿಡಿಯೋವನ್ನು ನೋಡಿದ ಅವರ ಪತ್ನಿ ತಟ್ಟನೆ ಅವರಿಗೆ ಕರೆ ಮಾಡಿದ್ದಾರೆ.
ಇದನ್ನೂ ಓದಿ:ಯೂಟ್ಯೂಬ್​​ನಿಂದ ನೋಟು ಮುದ್ರಿಸುವುದನ್ನು ಕಲಿತವ ಈಗ ಪೊಲೀಸರ ಅತಿಥಿ!
ನನ್ನ ಬಿಟ್ಟು ಅದೇಗೆ ಒಬ್ಬರೇ ಕರೊನಾ ಲಸಿಕೆ ತೆಗೆದುಕೊಂಡು ಬಂದಿರಿ ಎಂದು ವಿಚಾರಿಸಲು ಆರಂಭಿಸಿದ್ದಾರೆ. ಲಸಿಕೆ ಯಾವಾಗ ತೆಗೆದುಕೊಳ್ಳಬಹುದು ಎಂದು ಕೇಳಲು ಹೋಗಿದ್ದೆ. ಅವರು ಈಗಲೇ ಖಾಲಿ ಇದೆ, ತೆಗೆದುಕೊಳ್ಳಿ ಎಂದು ಕೊಟ್ಟರು ಎಂದು ಅಗರ್ವಾಲ್​ ಹೇಳಿದ್ದಾರೆ. ಅದನ್ನೆಲ್ಲ ಒಪ್ಪದ ಅವರ ಪತ್ನಿ ನನ್ನ ಬಳಿ ಸುಳ್ಳು ಹೇಳಬೇಡಿ ಎಂದು ರೇಗಾಡಿದ್ದಾರೆ. ಇಷ್ಟೆಲ್ಲ ಸಂಭಾಷಣೆ ಅವರು ಲೈವ್​ನಲ್ಲಿ ಇದ್ದಾಗಲೇ ಆಗಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದೆ. ಯಾವುದೇ ಸ್ಥಾನದಲ್ಲಿದ್ದರೂ ಹೆಂಡತಿಯ ಮಾತು ಕೇಳುವುದು ಅತ್ಯಗತ್ಯ ಎಂದು ನೆಟ್ಟಿಗರು ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್​)
https://t.co/KUB4ZIvEQL
— Vijayavani (@VVani4U)January 28, 2021

ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
