ನವದೆಹಲಿ:ಇತ್ತೀಚೆಗೆ ಯೂಟ್ಯೂಬ್ ಚ್ಯಾನಲ್​ನಲ್ಲಿ ನಡೆದ ಸಂದರ್ಶನವೊಂದರಲ್ಲಿ “ಇಸ್ಲಾಮಿಕ್ ದಾಳಿಕೋರರು ಮಾಡಿದ್ದ ದೇವಸ್ಥಾನದ ನಾಶಕ್ಕೆ ಪಶ್ಚಾತ್ತಾಪ ರೂಪದಲ್ಲಿ ಮಂದಿರಗಳ ಜೀರ್ಣೋದ್ಧಾರ ಮಾಡುತ್ತಿದ್ದೇನೆ” ಎಂದು ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಥವಾ ಪುರಾತತ್ವ ಇಲಾಖೆಯ ಮುಖ್ಯ ನಿರ್ದೇಶಕ ಕೆ.ಕೆ. ಮಹಮದ್ ಹೇಳಿದ್ದಾರೆ.ಇವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ಕಾಮೆಂಟ್ ವಿಭಾಗದಲ್ಲಿ ವ್ಯಕ್ತವಾಗಿದೆ. ಇವರು, ಈ ಹಿಂದೆ ರಾಮಜನ್ಮ ಭೂಮಿ ಪ್ರಕರಣದಲ್ಲೂ ನ್ಯಾಯಾಲಯಕ್ಕೆ ಅಯೋಧ್ಯೆಯಲ್ಲಿ ಹಿಂದೆ ದೇವಸ್ಥಾನ ಇದ್ದ ಬಗ್ಗೆ ಸಾಕ್ಷ್ಯವನ್ನು ಒದಗಿಸಿದ್ದರು.
ಅವರು ಈವರೆಗೆ 100ಕ್ಕೂ ಹೆಚ್ಚು ದೇವಸ್ಥಾನಗಳನ್ನು ಮರುನಿರ್ಮಾಣ ಮಾಡಿದ್ದಾರೆ. ಅವರು ತಮ್ಮ ಸಂದರ್ಶನದಲ್ಲಿ ಈ ಕೆಲಸ ಮಾಡುತ್ತಿರುವುದಕ್ಕೆ ಎರಡು ಕಾರಣಗಳನ್ನು ನೀಡಿದ್ದಾರೆ. ಆರ್ಕಿಯಲಾಜಿಕಲ್ ಕಾರಣ ಏನೆಂದರೆ, ಬಿದ್ದಿರುವ ಅವಶೇಷಗಳನ್ನು ಮರು ಜೋಡಿಸಿದರೆ ಹಿಂದಿನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಕಟ್ಟಡ ಮರು ನಿರ್ಮಾಣ ಆಗುತ್ತದೆ.


A post shared by Ranveer Allahbadia (@ranveerallahbadia)
ಆದರೆ ಅವರೇ ಹೇಳಿಕೊಳ್ಳುವಂತೆ ವೈಯಕ್ತಿಕವಾಗಿ ಈ ಕೆಲಸ ಪಶ್ಚಾತ್ತಾಪದ ಭಾಗ. ಅವರು “ನಾನು, ಹಿಂದಿನ ಕಾಲದಲ್ಲಿ ಮುಸಲ್ಮಾನರು ಭಾರತಕ್ಕೆ ಬಂದಾಗ ಅವರು ಅನೇಕ ದೇವಸ್ಥಾನಗಳನ್ನು ನಾಶ ಮಾಡಿದ್ದರು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಸೂಕ್ಷ್ಮವಾಗಿ ನನಗೆ ಇದಕ್ಕೆ ಪ್ರಾಯಶ್ಚಿತ್ತ ಮಾಡಬೇಕಿದೆ.
ನಾನು ಇಲ್ಲಿಯವರೆಗೆ 100ಕ್ಕೂ ಹೆಚ್ಚು ದೇವಸ್ಥಾನಗಳನ್ನು ಮರುನಿರ್ಮಾಣ ಮಾಡಿದ್ದೇನೆ. ಪ್ರತೀ ಮಂದಿರ ಪುನರ್​ನಿರ್ಮಾಣವಾದಾಗ ನನ್ನ ಮನಸ್ಸಿನಲ್ಲಿ ನಾನು ಪ್ರಾಯಶ್ಚಿತ್ತ ಮಾಡಿದ್ದೇನೆ ಎಂದೇ ಇರುತ್ತದೆ. ಇದನ್ನು ಮಾಡಲು ನನಗೆ ದೇವರು ಅವಕಾಶ ನೀಡಿದ್ದಾರೆ. ಮತ್ತು ನಾನು ಅದನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದೇನೆ. ಹೀಗಾಗಿ ಅದು ನನಗೊಂದು ಪ್ರಾಯಶ್ಚಿತ್ತದ ರಿಪೇರಿ ಕಾರ್ಯ” ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + twelve =
Remember me
