ಕೋಲ್ಕತ್ತಾ:ಖ್ಯಾತ ಗಾಯಕ ಕೆಕೆ ಸಾವಿಗೆ ಇಡೀ ದೇಶವೇ ದುಃಖಸಾಗರದಲ್ಲಿ ಮುಳುಗಿದೆ. ಅವರ ಹಠಾತ್​ ನಿಧನ ಸಂಗೀತ ಲೋಕದಲ್ಲೇ ತಲ್ಲಣ ಮೂಡಿಸಿದ್ದು, ಕೃಷ್ಣ ಕುಮಾರ್​ ಕುನ್ನತ್​ ಸಾವಿಗೆ ರಾಷ್ಟ್ರದ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.
ಈ ನಡುವೆ ಅವರ ಸಾವಿಗೂ ಮುನ್ನ ಆದ ಕೆಲ ಪ್ರಮಾದಗಳಿಂದ ಅವರ ಪ್ರಾಣಕ್ಕೆ ಕುತ್ತು ಬಂದಿತ್ತು ಎಂಬ ಆರೋಪಗಳು ಕೇಳಿಬರುತ್ತಿವೆ. ಸಂಗೀತ ಕಾರ್ಯಕ್ರಮ ಆಯೋಜಿಸಿದ್ದ ಆಯೋಜಕರು ಮಾಡಿದ ಕೆಲ ತಪ್ಪಿನಿಂದಾಗಿ ಇಂದು ಸಂಗೀತ ಲೋಕದ ಖ್ಯಾತ ಗಾಯಕನನ್ನು ಕಳೆದುಕೊಂಡಿದ್ದೇವೆ ಎಂದು ಸ್ವತಃ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್​ ಧನ್​​ಖರ್​ ಹೇಳಿದ್ದಾರೆ.
ದಿಲ್ಲಿ ಪ್ರವಾಸಕ್ಕೂ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮ ಪ್ರಾರಂಭದಲ್ಲೇ ಕೆಕೆ ಅವರ ದೇಹದಲ್ಲಿ ಬದಲಾವಣೆ ಕಂಡುಬಂದಿದೆ. ಹಲವು ಜನರು ನನಗೂ ಅವರ ಕಾರ್ಯಕ್ರಮದ ವಿಡಿಯೋವನ್ನು ಕಳುಹಿಸಿದ್ದಾರೆ. ಅದನ್ನು ನೋಡಿ ನಾನೇ ಶಾಕ್​ಗೆ ಒಳಗಾಗಿದ್ದೇನೆ. ಭಾರೀ ಉತ್ಸಾಹದಲ್ಲಿದ್ದ ಅವರ ದೇಹದಲ್ಲಿ ಬದಲಾವಣೆ ಕಂಡುಬಂದಾಗಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ ಬದುಕಿರುತ್ತಿದ್ದರು ಎಂದು ಹೇಳಿದ್ದಾರೆ.
ಇದಕ್ಕೆಲ್ಲಾ ಮ್ಯಾನೇಜ್​ಮೆಂಟ್​ ಹೊಣೆಯಾಗಲಿದ್ದು, ಕಡಿಮೆ ಜನರು ಸೇರುವ ಜಾಗದಲ್ಲಿ ಸಾವಿರಾರು ಮಂದಿಯನ್ನು ಸೇರಿಸಿದ್ದೂ ಕೂಡ ಅವರಿಗೆ ತೊಂದರೆ ಎನಿಸಿದೆ. ಹಾಡು ಹಾಡುತ್ತಲೇ ಅವರ ಮುಖಭಾವದಲ್ಲಿ ಸಾಕಷ್ಟು ಬದಲಾವಣೆಯಾಗುತ್ತೆ. ಆದರೂ ಕೂಡ ಆಯೋಜಕರು ಮಾತ್ರ ತಲೆಕೆಡಿಸಿಕೊಂಡಿಲ್ಲದಿರುವುದು ವಿಷಾದನೀಯ ಎಂದು ರಾಜ್ಯಪಾಲರು ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಮತ್ತೊಬ್ಬ ಬಾಲಿವುಡ್​ ನಟನಿಗೆ ಕರೊನಾ ಪಾಸಿಟಿವ್​

ರೇಪ್​​ ಬಗ್ಗೆ ಹಾಸ್ಯ ಮಾಡಿರುವ ಈ ಜಾಹಿರಾತಿಗೆ ಭಾರೀ ಹಿನ್ನಡೆ! ಟ್ವಿಟ್ಟಿಗರಿಂದ ತರಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
