ನವದೆಹಲಿ:ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೆ ನಂದಿನಿ ಹಾಲು ಪೂರೈಕೆ ಮಾಡುತ್ತಿರುವ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಲ) ರಾಷ್ಟ್ರ ರಾಜಧಾನಿ ದೆಹಲಿಗೆ ಅಕ್ಟೋಬರ್‌ನಿಂದ ದಿನಕ್ಕೆ 2.5 ಲಕ್ಷ ಲೀಟರ್ ನಂದಿನಿ ಹಾಲು ಪೂರೈಕೆ ಮಾಡಲು ಮುಂದಾಗಿದೆ.
ಈ ಕುರಿತಂತೆ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್‌ ನೇತೃತ್ವದ ಅಧಿಕಾರಿಗಳ ತಂಡ ದೆಹಲಿಗೆ ಬಂದಿದ್ದು, ಸುಮಾರು 70 ವಿತರಕರ ಜತೆಗೆ ಸಭೆಗಳನ್ನು ನಡೆಸಿದೆ. ಅದೇ ರೀತಿ. ವಿವಿಧ ಹಾಲು ಉತ್ಪನ್ನ ಘಟಕಗಳಿಗೂ ಭೇಟಿ ನೀಡಿದೆ.
ಕರ್ನಾಟಕದಲ್ಲಿ ಈಗ ಅಂದಾಜು 1 ಕೋಟಿ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಸದ್ಯ ಆಂಧ್ರ ಪ್ರದೇಶಕ್ಕೆ ದಿನಕ್ಕೆ 2.5 ಲಕ್ಷ ಲೀಟರ್‌, ಮಹಾರಾಷ್ಟ್ರಕ್ಕೆ 2.5 ಲಕ್ಷ ಲೀಟರ್ ಮತ್ತು ತಮಿಳುನಾಡಿಗೆ 40 ಸಾವಿರ ಲೀಟರ್‌ ಹಾಲನ್ನು ಕೆಎಂಎಫ್ ಪೂರೈಸುತ್ತಿದೆ. ಉತ್ತರ ಭಾರತದ ಮಾರುಕಟ್ಟೆಗೂ ಅದನ್ನು ಪೂರೈಕೆ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೇವೆ ಎಂದು ಎಂ.ಕೆ. ಜಗದೀಶ್‌ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:VIDEO| ಹಿಂದೂಗಳ ಮೇಲೆ ನಿಲ್ಲದ ಅಟ್ಟಹಾಸ; ವಿದ್ಯೆ ಕಲಿಸಿದ ಗುರುವನ್ನೇ ನಿಂದಿಸಿ ರಾಜೀನಾಮೆ ಕೊಡಿಸಿದ ದುರುಳರು
ಮೊದಲ ಹಂತದಲ್ಲಿ ದೆಹಲಿಗೆ ದಿನಕ್ಕೆ 2.5 ಲಕ್ಷ ಲೀಟರ್ ಪೂರೈಸಲು ಪ್ಲಾನ್ ಮಾಡಿದ್ದೇವೆ. 6 ತಿಂಗಳೊಳಗೆ 5 ಲಕ್ಷ ಲೀಟರ್‌ಗೆ ಅದನ್ನು ಹೆಚ್ಚಿಸುವ ಚಿಂತನೆ ಇದೆ. ನಂದಿನಿ ಹಾಲನ್ನು ರೈತರಿಂದ ಲೀಟರ್‌ಗೆ ರೂ. 32ಕ್ಕೆ ಖರೀದಿ ಮಾಡುತ್ತಿದ್ದೇವೆ. ನವದೆಹಲಿಯಲ್ಲಿ ಹಾಲಿನ ಬೆಲೆ ಲೀ.ಗೆ ರೂ 54 ಇದೆ. ಕರ್ನಾಟಕದಿಂದ ದೆಹಲಿಗೆ ಹಾಲು ತರುವುದು ಬಹುದೊಡ್ಡ ಸವಾಲು. ಇದಕ್ಕೆ ಕಡಿಮೆ ಎಂದರೆ 53 ಗಂಟೆಗಳಾದರೂ ಬೇಕು ಎಂದರು.
ಹಾಸನ ಹಾಲು ಒಕ್ಕೂಟ ದೆಹಲಿಗೆ ಹಾಲು ಪೂರೈಕೆ ಮಾಡಲಿದೆ. ಮುಂದಿನ ದಿನಗಳಲ್ಲಿ ಭೋಪಾಲ್‌, ಇಂದೋರ್‌ ಹಾಗೂ ಉಜ್ಜೈನಿಯಲ್ಲಿ ನಂದಿನಿ ಹಾಲು ಪೂರೈಸುವ ಯೋಜನೆಯಿದೆ. ಇದಕ್ಕಾಗಿ ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟದ ಮೂಲಕ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಜಗದೀಶ್ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − twelve =
Remember me
