ನವದೆಹಲಿ:ಭಾರತದಲ್ಲಿ ಪ್ರಸ್ತುತ ಕರೊನಾ ಚೇತರಿಕೆ ದರವು ಶೇಕಡ 97.49 ರಷ್ಟಿದೆ. ಅಂದರೆ ಸೋಂಕಿಗೆ ಒಳಗಾಗುವ 100 ಜನರಲ್ಲಿ 97 ರಿಂದ 98 ಜನರು ಗುಣಮುಖರಾಗುತ್ತಿದ್ದಾರೆ. ದೇಶದಲ್ಲಿ ಈವರೆಗೆ ಕರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದವರ ಸಂಖ್ಯೆ 3,23,74,497 ಆಗಿದೆ. ಮತ್ತೊಂದೆಡೆ, ಈವರೆಗೆ ಕರೊನಾದಿಂದ 4,42,317 ಜನರು ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 33,376 ಹೊಸ ಕರೊನಾ ಪ್ರಕರಣಗಳು ಕಂಡುಬಂದಿವೆ. ಒಟ್ಟು 32,198 ಜನರು ಗುಣಮುಖರಾಗಿರುವುದು ದಾಖಲಾಗಿದ್ದರೆ, 308 ಜನರು ಕರೊನಾದಿಂದ ಸಾವಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಪ್ರಸ್ತುತ 3,91,516 ಸಕ್ರಿಯ ಕರೊನಾ ಪ್ರಕರಣಗಳಿವೆ.
ಇದನ್ನೂ ಓದಿ:ಲೇಟಾದ್ರೂ ಚೌತಿಗೆ ಡಿಫರೆಂಟ್‌ ಆಗಿ ವಿಷ್‌ ಮಾಡಿದ ನಟಿ ಐಂದ್ರಿತಾ ರೇ..!
ಅತಿಹೆಚ್ಚು ಮತ್ತು ಬಹುಪಾಲು ಕರೊನಾ ಕೇಸುಗಳು ಕೇರಳದ್ದೇ ಆಗಿವೆ. ಕಳೆದ 24 ಗಂಟೆಗಳಲ್ಲಿ ಕೇರಳ ರಾಜ್ಯದಲ್ಲಿ 25,010 ಹೊಸ ಕೇಸುಗಳು ದಾಖಲಾಗಿದ್ದರೆ, 177 ಕರೊನಾ ಸಾವುಗಳೂ ವರದಿಯಾಗಿವೆ.
ಲಸಿಕಾ ಅಭಿಯಾನವು ಚುರುಕಿನ ಗತಿಯಲ್ಲಿ ನಡೆಯುತ್ತಿದ್ದು, ಒಟ್ಟು 73,05,89,688 ಡೋಸ್​ಗಳಷ್ಟು ಕರೊನಾ ಲಸಿಕೆ ನೀಡಲಾಗಿದೆ. ಕೋವಿನ್​ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 65,27,175 ಡೋಸ್​ ಲಸಿಕೆ ನೀಡಲಾಗಿದೆ.(ಏಜೆನ್ಸೀಸ್)
ಟೆಂಪೋದೊಳಗೆ ರೇಪ್​… ಬೆಳ್ಳಂಬೆಳಿಗ್ಗೆ ನಡೆದಿತ್ತು ಕ್ರೂರಿಯ ಆರ್ಭಟ!

ದೈವಿಕ ಭಾವ ಮೂಡಿಸುವ ‘ಪದ್ಮಾಸನದಲ್ಲಿ ನಮಸ್ಕಾರ ಮುದ್ರೆ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
