ನವದೆಹಲಿ:ಸಾಮಾನ್ಯವಾಗಿ ವಿದೇಶ ಪ್ರಯಾಣಕ್ಕೆ ಹಲವು ನಿಯಮಗಳನ್ನು ರೂಪಿಸಿರಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಾವು ತೆರಳುತ್ತಿರುವ ದೇಶದ ವೀಸಾ ನಿಯಮಗಳ ಬಗ್ಗೆ ಗೊತ್ತಿರಲೇಬೇಕು. ಇಲ್ಲದಿದ್ದರೆ ದೇಶವನ್ನು ಪ್ರವೇಶಿಸಲು ಬಿಡದೇ ವಿಮಾನ ನಿಲ್ದಾಣದಿಂದಲೇ ನಿಮ್ಮ ದೇಶಕ್ಕೆ ವಾಪಸ್​ ಕಳುಹಿಸಲಾಗುತ್ತದೆ.
ಇದೀಗ, ಇದೇ ನಿಯಮ ರೈಲು ಪ್ರಯಾಣಕ್ಕೂ ಅನ್ವಯವಾಗುತ್ತಿದೆ…! ಹೌದು ರೈಲ್ವೆ ಪ್ರಯಾಣ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ ಎನಿಸಿದೆ. ನೀವು ಯಾವ ರಾಜ್ಯಕ್ಕೆ ತೆರಳುತ್ತಿದ್ದೀರೋ ಅಲ್ಲಿನ ಕ್ವಾರಂಟೈನ್​ ಪ್ರೊಟೊಕಾಲ್​ ತಿಳಿದುಕೊಳ್ಳುವುದು ಕಡ್ಡಾಯವಾಗಿದೆ.
ಇದನ್ನೂ ಓದಿ;ಮೆಟ್ರೋ ರೈಲು ಪ್ರಯಾಣಕ್ಕೆ ಕ್ಯೂಆರ್​ ಕೋಡ್​ ಟಿಕೆಟ್​, ಕಡ್ಡಾಯವಾಗಲಿದೆ ಆರೋಗ್ಯ ಸೇತು ಆ್ಯಪ್​
ಏನಿದು ಕ್ವಾರಂಟೈನ್​ ಪ್ರೊಟೊಕಾಲ್​?:ಸದ್ಯ ಕೋವಿಡ್​ ಸಂಕಷ್ಟದಿಂದ ಪಾರಾಗಲು ಕೇಂದ್ರದ ಮಾರ್ಗಸೂಚಿ ಅನ್ವಯ ಆಯಾ ರಾಜ್ಯಗಳು ಪ್ರತ್ಯೇಕ ಕ್ವಾರಂಟೈನ್​ ನಿಯಮಗಳನ್ನು ರೂಪಿಸಿವೆ. ಬೇರೆ ರಾಜ್ಯಕ್ಕೆ ತೆರಳಿದಾಗ ಕಡ್ಡಾಯವಾಗಿ 14 ದಿನ ಕ್ವಾರಂಟೈನ್​ ಇರಬೇಕಾಗುತ್ತದೆ. ಈ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು. ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ ಕೆಲವೆಡೆ ವಿನಾಯ್ತಿ ನೀಡಲಾಗಿದೆ. ಹೀಗೆ ಹಲವು ನಿಯಮಗಳಿವೆ. ಆನ್​ಲೈನ್​ನಲ್ಲಿ ರೈಲು ಟಿಕೆಟ್​ ಬುಕಿಂಗ್​ ಆರಂಭಿಸಿದಾಗ ಕೋವಿಡ್​-19 ಎಚ್ಚರಿಕೆ ತೆರೆದುಕೊಳ್ಳುತ್ತದೆ. ಅದರಲ್ಲಿನ ನಿಯಮಗಳನ್ನು ತಿಳಿದುಕೊಳ್ಳುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ತಿಳಿಸಿದೆ.ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಕೆಲ ಪ್ರಯಾಣಿಕರು ಕ್ವಾರಂಟೈನ್​ಗೆ ಒಪ್ಪದ ಕಾರಣ ಮರಳಿ ದೆಹಲಿಗೆ ಕಳುಹಿಸಲಾಗಿತ್ತು. ಹೀಗಾಗಿ ಆಯಾ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ವಿಧಿಸಿದ ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
ಇದನ್ನೂ ಓದಿ;ಲಾಕ್​ಡೌನ್​ ಕಾಲ ಮುಗೀತು, ಕರೊನಾ ಕಟ್ಟಿ ಹಾಕುತ್ತಾ ಕಂಟೇನ್​ಮೆಂಟ್​?
ಇದಲ್ಲದೇ, ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ ಸ್ಮಾರ್ಟ್​ಫೋನಿನಲ್ಲಿ ಆರೋಗ್ಯ ಸೇತು ಆ್ಯಪ್​ ಹೊಂದಿರುವುದು ಕಡ್ಡಾಯವಾಗಿದೆ. ಸದ್ಯ ರೈಲಿನಲ್ಲಿ ಐಆರ್​ಸಿಟಿಸಿ ವತಿಯಿಂದ ಆಹಾರ ಪೂರೈಕೆ ವ್ಯವಸ್ಥೆಯಿರುವುದಿಲ್ಲ. ಇದಲ್ಲದೇ, ಹೊದಿಕೆ, ಊಟದ ವ್ಯವಸ್ಥೆ ಇರುವುದಿಲ್ಲ. ಇದನ್ನೆಲ್ಲ ಪ್ರಯಾಣಿಕರೇ ಹೊಂದಿಸಿಕೊಳ್ಳುವುದು ಪ್ರಯಾಣಿಕರದ್ದೇ ಜವಾಬ್ದಾರಿ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಸದ್ಯ ದೇಶಾದ್ಯಂತ ರಾಜಧಾನಿ ಎಕ್ಸಪ್ರೆಸ್​ ಮಾದರಿಯ ವಿಶೇಷ ರೈಲುಗಳಷ್ಟೇ ಸಂಚರಿಸುತ್ತಿವೆ. ಜೂನ್​​ 30ರವರೆಗೆ ಮಾಡಲಾಗಿದ್ದ ಎಲ್ಲ ಸಾಮಾನ್ಯ ಪ್ರಯಾಣಿಕ ರೈಲುಗಳ ಮುಂಗಡ ಟಿಕೆಟ್​ಗಳನ್ನು ರದ್ದು ಮಾಡಲಾಗಿದ್ದು, ಪ್ರಯಾಣಿಕರಿಗೆ ಹಣ ಹಿಂದಿರುಗಿಸಲಾಗುತ್ತಿದೆ.
ಸಿಬ್ಬಂದಿಗೆ ಸಂಬಳ ನೀಡಲು ಜಮೀನು ಮಾರಾಟಕ್ಕೆ ಮುಂದಾದ ತಿರುಪತಿ ದೇಗುಲ ಮಂಡಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − two =
Remember me
