ಟರ್ಕಿ:ಈ ಮುದ್ದು ಪುಟಾಣಿಯ ವಯಸ್ಸು ಇನ್ನೂ ಒಂದು ವರ್ಷ ತುಂಬಿಲ್ಲ. ಹೆಸರು ಕೊಬೆ. ಈ ಪಾಪುವಿನ ಹೆಸರಿನಲ್ಲಿ ಅದಾಗಲೇ ಇನ್​ಸ್ಟಾಗ್ರಾಂ ಖಾತೆಯನ್ನೂ ತೆರೆದಾಗಿದೆ. ಈತನಿಗೆ ಇದಾಗಲೇ ಬೆಂಬಲಿಗರ ಸಂಖ್ಯೆ 13 ಲಕ್ಷವನ್ನು ದಾಟಿದೆ.
ಅಷ್ಟಕ್ಕೂ ಈ ಇನ್​ಸ್ಟಾಗ್ರಾಂ ತೆರೆದಿರುವುದು ಅಡುಗೆ ಸಂಬಂಧಿ ಮಾಹಿತಿ ನೀಡಲು. ತನ್ನ ಪುಟ್ಟಪುಟಾಣಿ ಕೈಗಳಿಂದ ಈ ಬಾಲಕ ಒಂದಿಷ್ಟು ತರಕಾರಿಗಳನ್ನು ಬಾಯಲ್ಲಿ ಹಾಕಿಕೊಳ್ಳುವುದನ್ನು ನೋಡುವುದೇ ಅಂದ.
ಅಂದ ಹಾಗೆ Chef Kobe ಎಂಬ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ.ಪೋಷಕರು ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅಡುಗೆ ಸಂಬಂಧಿತ ಮಾಹಿತಿಗಳನ್ನು ಇದರಲ್ಲಿ ಅಪ್​ಲೋಡ್​ ಮಾಡಲಾಗುತ್ತದೆ. ಬಟರ್​ಚಿಕನ್, ನಾನ್​ನಿಂದ ಮಾಕ್ ಮತ್ತು ಚೀಸ್ ತನಕ ಎಲ್ಲ ಬಗೆಯ ಅಡುಗೆಗಳನ್ನು ಹೇಗೆ ಮಾಡುವುದು ಎಂಬ ವೀಡಿಯೋ ಪಾಠ ಇದರಲ್ಲಿ ಹೇಳಿಕೊಡಲಾಗುತ್ತದೆ.
ಇದನ್ನೂ ಓದಿ:ಮುಂದುವರೆದ ಸಾಧುಗಳ ಹತ್ಯೆಯ ಸರಣಿ: ಪಾಲ್ಗರ್​ ಹತ್ಯೆಯ ಸತ್ಯ ಬಹಿರಂಗಗೊಳ್ಳುವ ಮುನ್ನವೇ ಇನ್ನೊಂದು ಕೊಲೆ!
“ನನ್ನ ಅಮ್ಮನ ಜತೆ ಬಟರ್ ಚಿಕನ್ ಹಾಗೂ ನಾನ್ ಮಾಡ್ತೀನಿ! ಈ ಸ್ಟೌ ಮೇಲೆ ಸಾಕಷ್ಟು ಕೆಲಸಗಳನ್ನು ಮಾಡಲು ಆಕೆ ಸಹಾಯ ಮಾಡುತ್ತಾಳೆ. ನಾನು ಕೆಲವು ತಪ್ಪು ಮಾಡ್ತೇನೆ. ಆದರೆ ಓಕೆ. ಇದನ್ನು ಮಾಡಲು ತುಂಬ ಸಂತೋಷ ಆಗುತ್ತದೆ!!! ನಾನ್ ತಿನ್ನುವಾಗ ಇಷ್ಟವಾಗುತ್ತದೆ. ನನಗೆ ನಾನ್ ಅಂದರೆ ಪ್ರೀತಿ” ಎಂದು ಮಗುವೇ ಹೇಳಿದಂತೆ ವೀಡಿಯೋ ತೋರಿಸುವ ಮೂಲಕ ಪಾಠವನ್ನು ಹೇಳಿಕೊಡಲಾಗುತ್ತದೆ.
ಇದನ್ನು ನೋಡಿಯೇ ಜನರು ಈ ಪಾಪುವಿನ ಫಾಲೋವರ್ಸ್​ ಆಗಿಬಿಟ್ಟಿದ್ದಾರೆ. ಈ ವೀಡಿಯೋವನ್ನು ಇದಾಗಲೇ ಲಕ್ಷಾಂತರ ಮಂದಿ ನೋಡಿದ್ದಾರೆ. ಸುಮಾರು ಏಳು ಸಾವಿರ ಕಮೆಂಟ್​ಗಳು ಇನ್​ಸ್ಟಾಗ್ರಾಂಗೆ ಬಂದಿವೆ.
ಇದನ್ನೂ ಓದಿ:ರಾಜ್ಯದಲ್ಲಿ 97 ಹೊಸ ಪ್ರಕರಣ- ಮುಂದುವರೆದ ಮಹಾರಾಷ್ಟ್ರ ಕಂಟಕ
ತಮಗೆ ಬರುವ ವಿವಿಧ ಬಗೆಯ ಅಡುಗೆಗಳನ್ನು ತಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜತೆಗೆ ಹಂಚಿಕೊಳ್ಳಬೇಕು ಎಂಬ ಕಾರಣಕ್ಕೆ ವೀಡಿಯೋ ಮಾಡಲು ಆರಂಭಿಸಿದ್ದರು ಕೊಬೆ ಅಮ್ಮ. ಫೆಬ್ರವರಿ ಕೊನೆಯಲ್ಲಿ ಇದನ್ನು ಆರಂಭಿಸಲಾಗಿತ್ತು. ಆರಂಭದಲ್ಲಿ 200 ಫಾಲೋವರ್ಸ್ ಮಾತ್ರ ಇದ್ದರು. ಆ ನಂತರ ಈ ಮಗುವಿನ ಮುದ್ದು ಮುಖ, ಅದರ ತೊದಲು ಮಾತಿಗೆ ಮನಸೋತಿರುವ ನೆಟ್ಟಿಗರು ಈ ಮಗುವಿನ ಬೆಂಬಲಿಗರಾಗತೊಡಗಿ ಇದೀಗ 13 ಲಕ್ಷ ದಾಟಿದೆ.
https://www.instagram.com/p/CAMDJvTBCPu/?utm_source=ig_embed
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × 4 =
Remember me
