ಕಾಸರಗೋಡು: ಕೊಚ್ಚಿ ಮರಡ್​ನಲ್ಲಿ ಅನಧಿಕೃತವಾಗಿ ನಿರ್ವಿುಸಲಾಗಿದ್ದ ಎರಡು ಬಹುಮಹಡಿ ಕಟ್ಟಡಗಳನ್ನು ಧ್ವಂಸಗೊಳಿಸಲಾಯಿತು. ಶನಿವಾರ, ಭಾನುವಾರ ಸೇರಿ ಒಟ್ಟು ನಾಲ್ಕು ಕಟ್ಟಡಗಳನ್ನು ಪೂರ್ಣಪ್ರಮಾಣದಲ್ಲಿ ನೆಲಸಮಗೊಳಿಸುವ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ನಗರದಲ್ಲಿ ಅತ್ಯಂತ ದೊಡ್ಡ ಕಟ್ಟಡ ಎಂದೇ ಗುರುತಿಸಲಾಗಿದ್ದ ಜೈನ್ ಕೊರಾಲ್ಕೋವನ್ನು ಬೆಳಗ್ಗೆ 11.03ರ ವೇಳೆಗೆ ಕೆಡವಲಾಯಿತು. ಕಟ್ಟಡ ನೆಲಸಮಗೊಳಿಸುವ ಮೊದಲು ಮೂರು ಬಾರಿ ಎಚ್ಚರಿಕೆಯ ಸೈರನ್ ಮೊಳಗಿಸಲಾಯಿತು. ಕೊನೆಯ ಕಟ್ಟಡ ಗೋಲ್ಡನ್ ಕಾಯಲೋರವನ್ನು ಮಧ್ಯಾಹ್ನ 2.32ರ ವೇಳೆಗೆ ಸ್ಪೋಟಿಸಿ ನೆಲಕ್ಕುರುಳಿಸುವ ಮೂಲಕ ಮರಡ್ ನಗರಸಭೆ ಸುಪ್ರೀಂಕೋರ್ಟ್ ಆದೇಶವನ್ನು ಪೂರ್ಣವಾಗಿ ಜಾರಿಗೊಳಿಸಿತು. ಸಮೀಪದಲ್ಲೇ ಇದ್ದ ಅಂಗನವಾಡಿ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಲಾಗಿತ್ತು. ಹತ್ತಿರದಲ್ಲೇ ಇದ್ದ ಹಿನ್ನೀರಿಗೂ ಮಣ್ಣು ಬೀಳದಂತೆ ಅತ್ಯಾಧುನಿಕ ತಂತ್ರಜ್ಞಾನದ ಕಾರ್ಯಾಚರಣೆ ಮಾಡಲಾಗಿತ್ತು.
ದೇಶದಲ್ಲೇ ಮೊದಲ ನಿದರ್ಶನ:ದೇಶದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಗಗನಚುಂಬಿ ಕಟ್ಟಡಗಳನ್ನು ನಿಯಂತ್ರಿತ ಸ್ಪೋಟಕ ಬಳಸಿ ಕೆಡವಲಾಗಿದೆ. ಶನಿವಾರದ ಕಾರ್ಯಾಚರಣೆಯಲ್ಲಿ ಕುಂಡನ್ನೂರಿನ ಹೋಲಿ ಫೈತ್ ಎಚ್​ಟುಒ ಹಾಗೂ ನೆಟ್ಟೂರ್ ಆಲ್ಪಾ ಸೆರಿನ್ ಟವರನ್ನು ಕ್ಷಣಮಾತ್ರದಲ್ಲಿ ನೆಲಸಮಗೊಳಿಸಲಾಗಿತ್ತು. 122 ಅಪಾರ್ಟ್​ವೆುಂಟ್ ಹೊಂದಿದ್ದ ಜೈನ್ ಕೊರಾಲ್ಕೋ ಫ್ಲ್ಯಾಟ್ ಅತ್ಯಂತ ದೊಡ್ಡ ಹಾಗೂ 40 ಅಪಾರ್ಟಮೆಂಟ್ ಹೊಂದಿದ್ದ ಗೋಲ್ಡನ್ ಕಾಯಲೋರ ಫ್ಲ್ಯಾಟ್​ನ್ನು ಭಾರಿ ಜಾಗರೂಕತೆಯಿಂದ ಕೆಡವಲಾಯಿತು.
15ರಿಂದ ತ್ಯಾಜ್ಯ ತೆರವು
ನಾಲ್ಕು ಕಟ್ಟಡಗಳ ತ್ಯಾಜ್ಯ ಒಂದೂ ಕಾಲು ಲಕ್ಷ ಟನ್ ಮೀರಲಿದ್ದು, ಜ.15ರಿಂದ ತೆರವು ಕಾರ್ಯ ಆರಂಭಗೊಳ್ಳಲಿದೆ. ಎರಡೂವರೆ ತಿಂಗಳ ಒಳಗಾಗಿ ಕಾಂಕ್ರೀಟ್ ಮತ್ತು ಕಬ್ಬಿಣ ಬೇರ್ಪಡಿಸಿ, ಸಂಪೂರ್ಣ ತ್ಯಾಜ್ಯವನ್ನು ಸ್ಥಳಾಂತರಗೊಳಿಸಲು ಕಂಪನಿಗೆ ಆದೇಶಿಸಲಾಗಿದೆ. ಪ್ರತಿ ದಿನ 25 ಲಾರಿಗಳು ತಲಾ 15ಲೋಡ್​ನಂತೆ ಇಲ್ಲಿಂದ ತ್ಯಾಜ್ಯ ಸ್ಥಳಾಂತರಗೊಳಿಸಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
