
ಚನ್ನೈ:ಕ್ರಿಕೆಟ್ ಅಥವಾ ಸಿನೆಮಾ ಐಕಾನ್​ಗಳ ಮೇಲೆ ಅಭಿಮಾನ ಇರುವುದು ತಪ್ಪಲ್ಲ. ಆದರೆ ಅದು ಅಪಾಯಕಾರಿ ಮಟ್ಟಕ್ಕೆ ಬೆಳೆಯಬಾರದು. ಅಭಿಮಾನ ಅತಿರೇಕವಾದಾಗ… ದುಡುಕಿನ ನಿರ್ಧಾರ ಕೈಗೊಂಡರೆ… ನಿಂದಿಸಿದರೆ.. ನಡೆಯಬಾರದ್ದು ನಡೆದೇ ಹೋಗುತ್ತೆ ಎಂಬುದಕ್ಕೆ ಈ ಪ್ರಕರಣವೇ ಜ್ವಲಂತ ಉದಾಹರಣೆ.

ಅವರಿಬ್ಬರೂ ಆಪ್ತ ಸ್ನೇಹಿತರು. ಕ್ರಿಕೆಟ್​ ಅಂದ್ರೆ ಅತೀವ ಪ್ರೀತಿ. ಆದರೆ ಇವರಿಬ್ಬರ ನೆಚ್ಚಿನ ಆಟಗಾರರು ಮಾತ್ರ ಬೇರೆ ಬೇರೆ. ಆ ಇಬ್ಬರು ಆಟಗಾರರ ಪೈಕಿ ಯಾರು ಉತ್ತಮ ಎಂಬ ವಿಚಾರಕ್ಕೆ ಶುರುವಾದ ಚರ್ಚೆ ವಿಕೋಪಕ್ಕೆ ತಿರುಗಿದ್ದು, ಸ್ನೇಹಿತನಿಂದಲೇ ಮತ್ತೊಬ್ಬ ಸ್ನೇಹಿತ ಕೊಲೆಯಾಗಿದ್ದಾನೆ. ಇಂತಹ ಆಘಾತಕಾರಿ ಘಟನೆ ತಮಿಳುನಾಡಿನ ಅರಿಯಲೂರು ಜಿಲ್ಲೆಯ ಪೊಯ್ಯೂರು ಗ್ರಾಮದಲ್ಲಿ ನಡೆದಿದೆ.

ಪಿ.ವಿಘ್ನೇಶ್(24) ಮೃತ ದುರ್ದೈವಿ. ಕೊಲೆ ಆರೋಪಿ ಧರ್ಮರಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಲ್ಲಿ ಯಾರು ಉತ್ತಮ? ಎಂದು ಚರ್ಚೆ ಮಾಡುತ್ತಿದ್ದರು. ಈ ವೇಳೆ ಆರ್​ಸಿಬಿ ಟೀಂ ಮತ್ತು ವಿರಾಟ್​ ಕೊಹ್ಲಿಯನ್ನು ವಿಘ್ನೇಶ್​ ನಿಂದಿಸಿದ್ದು, ಸಿಟ್ಟಿಗೆದ್ದ ಧರ್ಮರಾಜ್​ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಕುಡಿದ ಅಮಲಿನಲ್ಲಿ ಈ ಕೃತ್ಯವೆಸಗಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 3 =
Remember me
