ಕೋಲ್ಕತ್ತ:ದೇಶದೆಲ್ಲೆಡೆ ಲಾಕ್‌ಡೌನ್‌ ಆದೇಶ ಜಾರಿಯಾದರೂ ಜನರ ಓಡಾಟ ಮಾತ್ರ ನಿಂತಿಲ್ಲ. ಕರೊನಾ ವೈರಸ್‌ ಹರಡುವಿಕೆ ಕುರಿತಂತೆ ಎಷ್ಟೇ ಘೋಷಣೆ ಕೂಗಿದರೂ ಕೆಲವರು ಇದನ್ನು ಕಿವಿಯ ಮೇಲೆ ಹಾಕಿಕೊಳ್ಳುತ್ತಲೇ ಇಲ್ಲ. ಬೇರೆ ದಾರಿ ಕಾಣದ ಕೋಲ್ಕತ್ತ ಪೊಲೀಸರು ‘ದಂಡಂ ದಶ ಗುಣಂ’ ಎಂಬಂತೆ ಲಾಕ್‌ಔಟ್‌ ನಿಯಮ ಉಲ್ಲಂಘಿಸಿ ವಿನಾಕಾರಣ ತಿರುಗಾಟ ನಡೆಸುವವರನ್ನು ಬಂಧಿಸುವ ಕ್ರಮಕ್ಕೆ ಮುಂದಾಗಿದೆ.
ನಿನ್ನೆ ಒಂದೇ ದಿನಕ್ಕೆ 980 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಚೆಕಿಂಗ್‌ ಪೋಸ್ಟ್‌ ಬಳಿ ಹಾಗೂ ರಸ್ತೆಯ ಮೇಲೆ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಇವರೆಲ್ಲಾ ಸಿಕ್ಕಿ ಬಿದ್ದಿದ್ದಾರೆ.
ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿ ಕೇಸು ದಾಖಲು ಮಾಡಿಕೊಳ್ಳಲಾಗುವುದು ಎಂದು ಪೊಲೀಸ್‌ ಇಲಾಖೆ ಹೇಳಿದೆ. ‘ಬರಿ ಮಾತಿನಿಂದ ಹೇಳಿದರೆ ಜನರಿಗೆ ಹೇಳಿದರೆ ಬುದ್ಧಿ ಬರುವುದಿಲ್ಲ ಎಂಬ ಕಾರಣಕ್ಕೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ’ ಎಂದು ಕೋಲ್ಪತ್ತ ಪೊಲೀಸ್‌ ಆಯುಕ್ತ ಅನುಜ್‌ ಶರ್ಮಾ ಹೇಳಿದ್ದಾರೆ.
ಲಾಕ್ ಡೌನ್ ಪರಿಣಾಮ: ಮದ್ಯ ಸಿಗದೆ ಮತ್ತೆ ಮೂವರ ಆತ್ಮಹತ್ಯೆ!

ಮರದ ಗೋದಾಮುಗಳಿಗೆ ಬೆಂಕಿ: ಭಾರತಿ ನಗರದ ಬಂಬೂ ಬಜಾರ್​ನಲ್ಲಿ ಅವಘಡ, ಲಕ್ಷಾಂತರ ರೂ. ನಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − ten =
Remember me
