ಕೋಲ್ಕತ್ತ:ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಭೀಕರವಾಗಿ ಹತ್ಯೆಯಾದ ಕೋಲ್ಕತ್ತದ ಆರ್​ಜಿ ಕರ್​ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯ ಟ್ರೈನಿ ವೈದ್ಯೆಯ ದೇಹದಲ್ಲಿ ತುಂಬಾ ಗಾಯಳಾಗಿದ್ದು, ಅವೆಲ್ಲವೂ ಆಕೆ ಸಾಯುವ ಮೊದಲೇ ಆಗಿದೆ ಎಂಬ ಭಯಾನಕ ಸಂಗತಿ ಇಂಡಿಯಾ ಟುಡೆಗೆ ಲಭ್ಯವಾಗಿರುವ ಮರಣೋತ್ತರ ವರದಿಯಲ್ಲಿ ಬಹಿರಂಗವಾಗಿದೆ.
ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಕ್ಕೆ ಸಾಕ್ಷಿ ಸಹ ಲೌಭ್ಯವಾಗಿದ್ದು, ಅತ್ಯಾಚಾರ ಎಂಬುದು ದೃಢವಾಗಿದೆ. ಮರಣೋತ್ತರ ವರದಿಯಲ್ಲಿ ಕಂಡುಬಂದ ಆಘಾತಕಾರಿ ಅಂಶಗಳು ಈ ಕೆಳಕಂಡಂತಿವೆ.* ಸಂತ್ರಸ್ತೆಯ ಗುಪ್ತಾಂಗ, ತೋಳು, ಕುತ್ತಿಗೆ, ಮುಖ ಮತ್ತು ತಲೆಯಲ್ಲಿ ಸುಮಾರು 14 ಹೆಚ್ಚು ಗಾಯಗಳಾಗಿವೆ.* ಸಾವಿಗೆ ಕಾರಣವನ್ನು “ಹಸ್ತಚಾಲಿತ ಕತ್ತು ಹಿಸುಕುವಿಕೆಗೆ ಸಂಬಂಧಿಸಿದೆ” ಎಂದು ನಿರ್ಧರಿಸಲಾಗಿದೆ.* ಸಾವಿನ ವಿಧಾನವನ್ನು ನರಹತ್ಯೆ ಅಥವಾ ಕೊಲೆ ಎಂದು ತೀರ್ಮಾನಿಸಲಾಗಿದೆ.* ಬಲವಂತದ ಲೈಂಗಿಕ ಕ್ರಿಯೆಯ ಸಾಕ್ಷ್ಯದೊಂದಿಗೆ ಸಂಭವನೀಯ ಲೈಂಗಿಕ ದೌರ್ಜನ್ಯವನ್ನು ಈ ವರದಿಯು ಸೂಚಿಸಿದೆ.* ಸಂತ್ರಸ್ತೆಯ ಗುಪ್ತಾಂಗದಲ್ಲಿ ಬಿಳಿ, ದಪ್ಪ, ಸ್ನಿಗ್ಧ ದ್ರವ ಕಂಡುಬಂದಿದೆ.* ಶ್ವಾಸಕೋಶದಲ್ಲಿ ರಕ್ತಸ್ರಾವ ಮತ್ತು ದೇಹದಲ್ಲಿ ರಕ್ತ ಹೆಪ್ಪುಗಟ್ಟಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.* ಮೂಳೆಗಳು ಮುರಿದಿರುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.ಇನ್ನು ಹೆಚ್ಚಿನ ವಿಶ್ಲೇಷಣೆಗಾಗಿ ಸಂತ್ರಸ್ತೆಯ ರಕ್ತ ಮತ್ತು ಇತರ ದೈಹಿಕ ದ್ರವಗಳ ಮಾದರಿಗಳನ್ನು ಕಳುಹಿಸಲಾಗಿದೆ.
ಏನಿದು ಪ್ರಕರಣ?ವಿರಾಮವಿಲ್ಲದೆ ಸುಮಾರು 36 ಗಂಟೆಗಳ ಕಾಲ ವಿಸ್ತರಿಸಿದ ಶಿಫ್ಟ್ ಮತ್ತು ಅಧ್ಯಯನದಿಂದ ಬಳಲಿದ ಬಳಿಕ ಆಗಸ್ಟ್​ 9ರಂದು ಆಸ್ಪತ್ರೆಯ ಸೆಮಿನಾರ್​ ರೂಮ್​ನಲ್ಲಿನ ವೇದಿಕೆಯ ಮೇಲೆ ಸಂತ್ರಸ್ತೆ ಮಲಗಿದ್ದಳು. ಈ ವೇಳೆ ಆಕೆಯ ಮೇಲೆ ಓರ್ವ ಅಥವಾ ಸಾಮೂಹಿಕವಾಗಿ (ಇನ್ನೂ ತನಿಖೆ ನಡೆಯುತ್ತಿದೆ) ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಲೈಂಗಿಕ ದೌರ್ಜನ್ಯ ಬಳಿಕ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮರುದಿನ ಬೆಳಿಗ್ಗೆ ಸೆಮಿನಾರ್ ಹಾಲ್​ಗೆ ಬಂದ ಇಂಟರ್ನ್‌ಗಳು ಮತ್ತು ಸಹ ಸ್ನಾತಕೋತ್ತರ ಟ್ರೈನಿ ವೈದ್ಯರು ಆಕೆಯ ದೇಹವನ್ನು ಕಂಡಾಗ ಈ ಪ್ರಕರಣ ಬೆಳಕಿಗೆ ಬಂದಿತು. ಸಂತ್ರಸ್ತೆಯ ಮೃತದೇಹದ ಪಕ್ಕದಲ್ಲೇ ಲ್ಯಾಪ್‌ಟಾಪ್, ನೋಟ್‌ಬುಕ್ ಮತ್ತು ಸೆಲ್‌ಫೋನ್ ಹಾಗೇ ಇತ್ತು.
ಓರ್ವನ ಬಂಧನಸದ್ಯ ಈ ಪ್ರಕರಣದಲ್ಲಿ ಸಂಜೋಯ್​ ರಾಯ್​ ಎಂಬಾತನನ್ನು ಆಗಸ್ಟ್ 10 ರಂದು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವರದಿಗಳ ಪ್ರಕಾರ ಆರೋಪಿ 2019ರಿಂದ ಕೋಲ್ಕತ್ತ ಪೊಲೀಸರ ವಿಪತ್ತು ನಿರ್ವಹಣಾ ಗುಂಪಿನೊಂದಿಗೆ ನಾಗರಿಕ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದನು. ನಂತರ, ಆತನನ್ನು ಪೊಲೀಸ್ ವೆಲ್​ಫೇರ್​ ಸೆಲ್​ಗೆ ವರ್ಗಾಯಿಸಲಾಯಿತು ಮತ್ತು ಆಸ್ಪತ್ರೆಯಲ್ಲಿನ ಪೊಲೀಸ್ ಔಟ್‌ಪೋಸ್ಟ್‌ಗೆ ನಿಯೋಜಿಸಲಾಯಿಗಿತ್ತು. ಈ ರಾಯ್, ಆಗಾಗ ಕೋಲ್ಕತ್ತ ಪೊಲೀಸ್ ಟೀ ಶರ್ಟ್ ಧರಿಸಿ ಅಧಿಕಾರಿಯಂತೆ ನಟಿಸುತ್ತಿದ್ದನು ಮತ್ತು ಬ್ಯಾರಕ್‌ಗಳಲ್ಲಿ ಉಳಿಯಲು ತಮ್ಮ ಸಂಪರ್ಕಗಳನ್ನು ಬಳಸುತ್ತಿದ್ದರು ಎಂದು ಮೂಲಗಳು ಬಹಿರಂಗಪಡಿಸಿವೆ. ಆಸ್ಪತ್ರೆಯಲ್ಲೇ ಈತ ದಂಧೆ ನಡೆಸುತ್ತಿದ್ದ. ರೋಗಿಗಳ ಸಂಬಂಧಿಕರಿಗೆ ಹಾಸಿಗೆ ಕೊಡಿಸುವುದಾಗಿ ಭರವಸೆ ನೀಡಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಹೆಚ್ಚಿನ ತನಿಖೆ ನಡೆದಾಗ ಆಘಾತಕಾರಿ ಸಂಗತಿಗಳು ಬಯಲಾಗಿವೆ. ಅರೋಪಿ ರಾಯ್, ಮೊಬೈಲ್ ಫೋನ್‌ನಲ್ಲಿ ಹಲವಾರು ಹಿಂಸಾತ್ಮಕ ಮತ್ತು ಅಶ್ಲೀಲ ಫೋಟೋ ಮತ್ತು ವಿಡಿಯೋಗಳಿವೆ. ಈಗಾಗಲೇ ಆತ ಹಲವು ಬಾರಿ ಮದುವೆ ಆಗಿ ವಂಚನೆ ಮಾಡಿರುವ ಆರೋಪವೂ ಇದೆ.
ಭಾರಿ ಪ್ರತಿಭಟನೆಈ ಭಯಾನಕ ಅಪರಾಧವು ದೇಶದೆಲ್ಲಡೆ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ಪಶ್ಚಿಮ ಬಂಗಾಳ ಮತ್ತು ಭಾರತದ ಇತರ ಭಾಗಗಳಲ್ಲಿ ವೈದ್ಯರು ಮತ್ತು ನರ್ಸ್​ಗಳು ಭಾರಿ ಮುಷ್ಕರಗಳು ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರನ್ನು ಸಿಬಿಐನಿಂದ ವಿಚಾರಣೆಗೆ ಒಳಪಡಿಸಲಾಗಿದೆ.
ಈ ಘಟನೆಗೆ ಪ್ರತಿಕ್ರಿಯೆಯಾಗಿ, ಪಶ್ಚಿಮ ಬಂಗಾಳ ಸರ್ಕಾರವು ಕೆಲಸದ ಸ್ಥಳಗಳಲ್ಲಿ, ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಘೋಷಿಸಿದೆ. ಈ ಕ್ರಮಗಳಲ್ಲಿ ಮಹಿಳೆಯರಿಗೆ ವಿಶೇಷವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಗೊತ್ತುಪಡಿಸಿದ ವಿಶ್ರಾಂತಿ ಕೊಠಡಿಗಳು ಮತ್ತು ಸಿಸಿಟಿವಿ ಮಾನಿಟರ್ ಒಳಗೊಂಡ ಸುರಕ್ಷಿತ ವಲಯಗಳ ಸ್ಥಾಪನೆಯನ್ನು ಒಳಗೊಂಡಿವೆ.
ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸ್ವತಃ ಕೈಗೆತ್ತಿಕೊಂಡಿದ್ದು, ಆಗಸ್ಟ್ 20 ರಂದು ವಿಚಾರಣೆಯನ್ನು ನಿಗದಿಪಡಿಸಿದೆ.(ಏಜೆನ್ಸೀಸ್​)
ಕೆಕೆಆರ್​​ ನನ್ನನ್ನು ಉಳಿಸಿಕೊಳ್ಳದಿದ್ರೆ ನನಗೆ ಆರ್​ಸಿಬಿ ಪರ ಆಡಲು ಇಷ್ಟ ಎಂದ ರಿಂಕು ಸಿಂಗ್​!

ಹೌದು ನಾನು ಮದುವೆ ಆಗುತ್ತೇನೆ ಆದರೆ… ಬಾಲಿವುಡ್​ ಬ್ಯೂಟಿ, ಸಂಸದೆ ಕಂಗನಾ ಒಪನ್​ ಟಾಕ್​!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × four =
Remember me
