ಕೋಲ್ಕತ್ತಾ:ದೇಶಾದ್ಯಂತ ಸಂಚಲನ ಮೂಡಿಸಿರುವ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ಡಾಕ್ಟರ್ ಮೇಲೆ ಅತ್ಯಾಚಾರ ಮತ್ತು ಹತ್ಯೆ ಘಟನೆ ಖಂಡಿಸಿ ಪ್ರತಿಭಟನೆಗಳು ಮುಂದುವರಿದಿರುವ ಬೆನ್ನಲ್ಲೇ ಇದುವರೆಗೆ 19 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಇಸ್ರೋದ ಎಸ್ಸೆಸ್ಸೆಲ್ವಿ-ಡಿ3 ಉಡಾವಣೆ ಯಶಸ್ವಿ
ಬಂಧಿತರಲ್ಲಿ ಐವರನ್ನು ಸಾಮಾಜಿಕ ಮಾಧ್ಯಮದ ಪ್ರತಿಕ್ರಿಯೆಯ ಮೂಲಕ ಗುರುತಿಸಲಾಗಿದೆ. ಆಸ್ಪತ್ರೆಯ ಉಪಕರಣಗಳನ್ನು ಗುರುವಾರ ಧ್ವಂಸ ಮಾಡಿದ ಆರೋಪಿಗಳ ಫೋಟೋಗಳನ್ನು ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಬಂಧನಕ್ಕೆ ಸಹಕರಿಸುವಂತೆ ವಿನಂತಿಸಲಾಗಿದೆ.ಮುಂದುವರಿದ ಪ್ರತಿಭಟನೆ: ಘಟನೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ಶುಕ್ರವಾರವೂ ಮುಂದುವರಿದಿದ್ದು, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೂಡ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆ ಬೆಂಬಲಿಸಿ 24 ಗಂಟೆಗಳ ಬಂದ್‌ಗೆ ಬೆಂಬಲ ಘೋಷಿಸಿದೆ.
ಐಎಂಎ ಬಂದ್ ಆಗಸ್ಟ್ 17 ರಂದು ಬೆಳಗ್ಗೆ 6 ರಿಂದ ಆಗಸ್ಟ್ 18 ರ ಬೆಳಗ್ಗೆ 6 ರವರೆಗೆ ಮುಂದುವರಿಯುತ್ತದೆ. ಇದಲ್ಲದೇ ದೆಹಲಿ ವೈದ್ಯಕೀಯ ಸಂಘ ಸೇರಿದಂತೆ ದೇಶದ ಹಲವು ವೈದ್ಯಕೀಯ ಸಂಘಗಳು ಕೂಡ ಐಎಂಎ ಬಂದ್‌ನಲ್ಲಿ ಭಾಗವಹಿಸುವುದಾಗಿ ಘೋಷಿಸಿವೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಸಂಜೆ 4 ಗಂಟೆಯಿಂದ ಬಂಗಾಳ ಬಂದ್ ಘೋಷಿಸಿದರು. ಮತ್ತೊಂದೆಡೆ ಆ ರಾಜ್ಯದ ಬಿಜೆಪಿ ಆಸ್ಪತ್ರೆ ಪಾದಯಾತ್ರೆ ಕೈಗೊಂಡಿದೆ.
ಇನ್ನು ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ತಡರಾತ್ರಿ ಸಂತ್ರಸ್ತೆಯ ಪೋಷಕರೊಂದಿಗೆ ಮಾತನಾಡಿದೆ. ಇದರ ಜೊತೆಗೆ ಐವರು ವೈದ್ಯರು, ಮಾಜಿ ವೈದ್ಯಕೀಯ ಅಧೀಕ್ಷಕ, ಪ್ರಾಂಶುಪಾಲರನ್ನು ಸಹ ಪ್ರಶ್ನಿಸಿದೆ.
ಆಸ್ಪತ್ರೆ ಧ್ವಂಸಕ್ಕೆ ಯತ್ನ:ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕೆಲವು ಕೊಠಡಿಗಳು ಮತ್ತು 18 ವಿಭಾಗಗಳನ್ನು ಗುಂಪೊಂದು ಧ್ವಂಸಗೊಳಿಸಿದೆ. ಗುರುವಾರ ರಾತ್ರಿ ತುರ್ತು ಚಿಕಿತ್ಸಾ ಕೊಠಡಿ, ಸಿಬ್ಬಂದಿ ಕೊಠಡಿ, ಔಷಧ ಅಂಗಡಿಗಳಲ್ಲಿ ಭಾರಿ ಅನಾಹುತ ನಡೆದಿದೆ. ಬಹುತೇಕ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ನಾಶಪಡಿಸಲಾಗಿದೆ.
ಅಗ್ನಿ ಕ್ಷಿಪಣಿ ಪಿತಾಮಹ ರಾಮ್ ನಾರಾಯಣ್ ಇನ್ನಿಲ್ಲ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 5 =
Remember me
