ಕೋಲ್ಕತ್ತಾ:ಆರ್ ಜಿ ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಘಟನೆ ನಡೆದು 21 ದಿನಗಳಾಗಿದ್ದು ಆಕೆಯ ಸಾವಿನ ಕುರಿತು ದೇಶದ ಹಲವೆಡೆ ಇನ್ನೂ ಕಳವಳ ವ್ಯಕ್ತವಾಗುತ್ತಿದೆ. ಈ ನಡುವೆ ಆಕೆ ಸಾವಿಗೆ ಸಂಬಂಧಿಸಿದಂತೆ ಹಲವು ಭಯಾನಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಮಗಳ ಸಾವಿನ ಬಗ್ಗೆ ಆಸ್ಪತ್ರೆ ಸಿಬ್ಬಂದಿ ನಡೆದುಕೊಂಡ ರೀತಿ ಬಗ್ಗೆ ಮೃತರ ಪೋಷಕರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಆಗಸ್ಟ್ 9 ರಂದು ಬೆಳಗ್ಗೆ ಕೇವಲ ಅರ್ಧ ಗಂಟೆಯಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಮೂರು ಫೋನ್ ಕರೆಗಳು ಬಂದವು. ಮೊದಲ ಫೋನ್ ಕರೆಯಲ್ಲಿ ನಿಮ್ಮ ಮಗಳ ಆರೋಗ್ಯ ಸರಿಯಿಲ್ಲ, ಕೂಡಲೇ ಆಸ್ಪತ್ರೆಗೆ ಬರುವಂತೆ ಹೇಳಿದರು. ಮಗಳಿಗೆ ಏನಾಗಿದೆ ಎಂದು ಅವರನ್ನು ಕೇಳಿದಾಗ ನಾವು ವೈದ್ಯರಲ್ಲ ಎಂದು ನಿರ್ಲಕ್ಷ್ಯದಿಂದ ಉತ್ತರಿಸಿದರು ಎಂದು ಹೇಳಿದರು.
ಅದಾದ ಬಳಿಕ ಮತ್ತೊಂದು ಫೋನ್ ಕರೆ ಬಂದಿದ್ದು, ಮಗಳ ಆರೋಗ್ಯ ಹೇಗಿದೆ ಎಂದು ಕೇಳುವ ಮುನ್ನವೇ ಮೊದಲು ಆಸ್ಪತ್ರೆಯ ಹೃದ್ರೋಗ ವಿಭಾಗಕ್ಕೆ ಬರುವಂತೆ ಸೂಚಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಫೋನ್ ಕರೆ ಬಂತು, ಆಗ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ ಎಂದು ಹೇಳಿದರು. ಘಟನೆಯ ಹಿಂದಿನ ದಿನ ಅಂದರೆ ಆ. 8ರಂದು ರಾತ್ರಿ 11.30ಕ್ಕೆ ಮಗಳೊಂದಿಗೆ ಕಡೇ ಬಾರಿ ಮಾತನಾಡಿದೆವು ಎಂದು ಮೃತ ಸಂತ್ರಸ್ತೆ ತಾಯಿ ಹೇಳಿದರು.
ವೈದ್ಯೆ ಹತ್ಯೆ ನಂತರ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಸಿಬ್ಬಂದಿಯ ವರ್ತನೆಯ ವಿರುದ್ಧ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಮ್ಮ ಮಗಳು ಸತ್ತ ತಕ್ಷಣ ತಮಗೆ ಮಾಹಿತಿ ನೀಡಿಲ್ಲ, ಮಗಳ ಮೃತದೇಹವನ್ನು ತಕ್ಷಣ ನೋಡುವ ಅವಕಾಶವನ್ನೂ ನೀಡಿಲ್ಲ. 3 ಗಂಟೆ ಕಾದ ನಂತರ ಶವ ನೋಡಲು ಅವಕಾಶ ನೀಡಲಾಯಿತು ಎಂದು ಅವರು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eleven =
Remember me
