ಪಶ್ಚಿಮ ಬಂಗಾಳ:ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಖಂಡಿಸಿ ರಾಜ್ಯದ ಮಹಿಳಾ ವೈದ್ಯರು ಮತ್ತು ಇತರರು ಬೃಹತ್ ಪ್ರತಿಭಟನೆ ಕೈಗೊಂಡಿದ್ದು, ಧರಣಿಯನ್ನು ಇಂದು ಕೂಡ ಮುಂದುವರೆಸಿದ್ದಾರೆ. ಪ್ರಕರಣವನ್ನು ಹೈಕೋರ್ಟ್​ ಸಿಬಿಐಗೆ ವಹಿಸಿದ್ದು, ತನಿಖೆ ಚುರುಕುಗೊಳಿಸುವಂತೆ ಆದೇಶಿಸಿದೆ. ಈ ಮಧ್ಯೆ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ, ನಾವು ಕೆಲಸ ಮಾಡಲ್ಲ ಎಂದು ವೈದ್ಯರು ಧರಣಿ ನಡೆಸುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆಯ ಮಧ್ಯರಾತ್ರಿಯಿಂದಲೇ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಅತ್ಯಾಚಾರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಮಗಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ಸಿಗಬೇಕು ಎಂದು ಮಹಿಳಾ ವೈದ್ಯರು ನಿರಂತರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಗರದಾದ್ಯಂತ ಪ್ರತಿಭಟಿಸುತ್ತಿದ್ದಾರೆ.
ಇದನ್ನೂ ಓದಿ:ನಾನು ಗುಟ್ಟಾಗಿ ಮದ್ವೆಯಾಗಿದ್ದೇನೆ; ರಹಸ್ಯವಾಗಿಡಲು ಕಾರಣ ಇದೆ ಎಂದ ಸಲ್ಮಾನ್ ಖಾನ್
ಇನ್ನು ಕರ್ತವ್ಯನಿರತ ಮಗಳ ಮೇಲೆ ಕಾಲೇಜಿನಲ್ಲಿ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಗೆ ಶಿಕ್ಷೆ ಕೊಡಿಸಿ ಎಂದು ಅಂಗಾಲಾಚಿ ಬೇಡಿಕೊಳ್ಳುತ್ತಿರುವ ಆಕೆಯ ತಂದೆ, “ನನ್ನ ಪುತ್ರಿ ಬಹಳ ದೊಡ್ಡ ಕನಸನ್ನು ಕಂಡಿದ್ದಳು. ತನ್ನ ಬಯಕೆ ಸೇರಿದಂತೆ ಹಲವಾರು ವಿಷಯಗಳನ್ನು ಪರ್ಸನಲ್​ ಡೈರಿಯಲ್ಲಿ ಬರೆದಿಡುತ್ತಿದ್ದಳು. ತಾನು ಸಾಯುವ ದಿನದಂದೇ ಅವಳ ಕೊನೆ ಆಸೆಯನ್ನು ಬರೆದು, ನೈಟ್​ ಶಿಫ್ಟ್​ಗೆ ತೆರಳಿದ್ದಳು” ಎಂದು ಭಾವುಕರಾದರು. ಅಸಲಿಗೆ ಮೃತ ವೈದ್ಯೆ ಅಂದು ತನ್ನ ಡೈರಿಯಲ್ಲಿ ಪ್ರಸ್ತುತ ಕೈಗೊಂಡಿದ್ದ ಕೋರ್ಸ್​ನಲ್ಲಿ ಚಿನ್ನದ ಪದಕ ಗೆದ್ದು, ಹೆತ್ತವರಿಗೆ ಖುಷಿ ಪಡಿಸಬೇಕು ಎಂದು ಬರೆದುಕೊಂಡಿದ್ದರು ಎನ್ನಲಾಗಿದೆ.
“ನನ್ನ ಮಗಳು ಪ್ರತಿದಿನ 10-12 ಗಂಟೆಗಳ ಕಾಲ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆಕೆ ಓದಿನಲ್ಲಿ ಸದಾ ಮುಂದೆ, ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದವಳು. ಆದ್ರೆ, ಇಂದು ಎಲ್ಲವೂ ಛಿದ್ರವಾಗಿದೆ. ತಾನು ತೆಗೆದುಕೊಂಡಿದ್ದ ಕೋರ್ಸ್​ನಲ್ಲಿ ಚಿನ್ನದ ಪದಕ ಪಡೆದು, ಎಂಡಿ ಪರೀಕ್ಷೆಯಲ್ಲಿ ಟಾಪರ್ ಆಗಬೇಕು ಎಂಬುದೇ ಆಕೆಯ ಮಹತ್ವದ ಗುರಿಯಾಗಿತ್ತು. ಅವಳನ್ನು ಬೆಳಸಿ, ದೊಡ್ಡವಳನ್ನಾಗಿ ಮಾಡಲು ಬಹಳ ಕಷ್ಟಪಟ್ಟಿದ್ದೇನೆ. ಮಗಳ ವೈದ್ಯಕೀಯ ಸಾಧನೆಯೇ ನಮ್ಮ ಕನಸು ಎಂದು ಭಾವಿಸಿ, ಹಗಲು-ರಾತ್ರಿ ನೋಡದೆ ಶ್ರಮವಹಿಸಿ ಸಾಕಿದ್ದೆ. ಇಂದು ಅವಳೂ ಇಲ್ಲ, ಅವಳ ಕನಸೂ ಇಲ್ಲ” ಎಂದು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ:ಟಾಲಿವುಡ್​ ಆಯ್ತು ಈಗ ಬಾಲಿವುಡ್​ಗೆ ಎಂಟ್ರಿ ಕೊಟ್ಟ ‘ಕಿಸ್’​ ಬೆಡಗಿ! ಸ್ಟಾರ್​ ನಟನ ಚಿತ್ರದಲ್ಲಿ ಕನ್ನಡ ನಟಿ ಶ್ರೀಲೀಲಾ
“ಬಾಲ್ಯದಿಂದಲೂ ಅವಳಿಗಾಗಿ ಸಾಕಷ್ಟು ತ್ಯಾಗಗಳನ್ನು ಮಾಡಿಕೊಂಡು ಬಂದಿದ್ದೆವು. ಈಗ ನನ್ನ ಮಗಳನ್ನು ವಾಪಾಸ್​ ಪಡೆಯಲು ಸಾಧ್ಯವಿಲ್ಲ. ಆದ್ರೆ, ಧೈರ್ಯದಿಂದ, ನ್ಯಾಯಾಂಗ ವ್ಯವಸ್ಥೆ ಮೇಲೆ ಭರವಸೆ ಇಟ್ಟುಕೊಂಡು ನ್ಯಾಯಕ್ಕಾಗಿ ಹಂಬಲಿಸುತ್ತಿದ್ದೇನೆ. ದೇಶದ ಜನತೆ ನಮ್ಮ ಪುತ್ರಿ ಸಾವಿಗೆ ಕಂಬನಿ ಮಿಡಿದಿದೆ. ದೇಶವ್ಯಾಪಿ ಆಕೆಗೆ ಅಭೂತಪೂರ್ವ ಬೆಂಬಲ ದೊರಕುತ್ತಿದೆ. ಇದೇ ನನಗೆ ಧೈರ್ಯ, ಶಕ್ತಿಯಾಗಿದೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).
1 ಗ್ಲಾಸ್​ ಜ್ಯೂಸ್​… ಒಲಿಂಪಿಕ್ ಫೈನಲ್​ ಹಿಂದಿನ ರಾತ್ರಿ ನಡೆದಿದ್ದೇನು? ಅಚ್ಚರಿ ಮೂಡಿಸುತ್ತೆ ಈ ವರದಿ

ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
