ಕೋಲ್ಕತಾ:ಪ್ರತಿಭಟನೆಯಿಂದ ದುರ್ಗಾಪೂಜೆಯತ್ತಾ ತಮ್ಮ ಗಮನ ಹರಿಸುವಂತೆ ಜನರನ್ನು ಮನವಿ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆಗೆ ಹತ್ಯೆಯಾದ ಟ್ರೈನಿ ವೈದ್ಯೆಯ ತಾಯಿ ತಿರಸ್ಕಾರದ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ:ಪ್ರಧಾನಿ ಮೋದಿಯನ್ನು ದ್ವೇಷಿಸುವುದಿಲ್ಲ.. ಸಹಾನುಭೂತಿ ಇದೆ; ರಾಹುಲ್​ಗಾಂಧಿ ಹೀಗೆಳಿದ್ದೇಕೆ?
ನಮ್ಮ ಮನೆಯಲ್ಲೂ ಹಬ್ಬವನ್ನು ಆಚರಿಸುತ್ತೆದ್ದೇವು. ನನ್ನ ಮಗಳು ಹಬ್ಬದ ಜವಾಬ್ದಾರಿಯೆಲ್ಲವನ್ನು ನಿಭಾಯಿಸುತ್ತಿದ್ದಳು. ಆದರೆ ಇನ್ನು ಮುಂದೆ ನಮ್ಮ ಮನೆಯಲ್ಲಿ ದುರ್ಗಾಪೂಜೆಯನ್ನು ಆಚರಿಸುವುದಿಲ್ಲ. ನನ್ನ ಮನೆಯ ಬೆಳಕ ಹಾರಿಹೋಗಿದೆ. ಹಬ್ಬದ ಕಡೆಗೆ ಗಮನ ಹರಿಸಿ ಎಂದು ಜನರಿಗೆ ಹೇಗೆ ಕೇಳಬಹುದು? ಮುಖ್ಯಮಂತ್ರಿ ಕುಟುಂಬದಲ್ಲಿಯೂ ಹೀಗೆ ಆಗಿದ್ದರೆ ಅವರಿಗೆ ಹೀಗೆ ಹೇಳುವ ಧೈರ್ಯ ಇರುತಿತ್ತಾ? ಅವರು ನಮ್ಮ ಮಗಳನ್ನು ಹಿಂದುರಿಗಿಸಲಿ ಎಂದಿದ್ದಾರೆ.
ಘಟನೆ ನಡೆದು ಒಂದು ತಿಂಗಳಾಗಿದೆ. ಆದ್ದರಿಂದ ತಾವೆಲ್ಲರೂ ಪೂಜೆಗೆ ಹಿಂತಿರುಗಿ ಉತ್ಸವದಲ್ಲಿ ಭಾಗವಹಿಸಬೇಕೆಂದು ವಿನಂತಿಸುತ್ತೇನೆ. ಆದಷ್ಟು ಬೇಗ ನ್ಯಾಯ ಒದಗಿಸುವಂತೆ ಸಿಬಿಐಗೆ ಕೇಳಿದ್ದೇನೆ. ನೀವು ಪ್ರತಿಭಟನೆ ನಡೆಸಲು ರಾತ್ರಿಯಿಡೀ ಬಿದಿಗಿಳಿದರೆ ಅನೇಕು ಜನರಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ಇನ್ನು ಈ ಪ್ರಕರಣದ ನಂತರ ವೈದ್ಯೆಯ ಕುಟುಂಬಕ್ಕೆ ಯಾವುದೇ ಹಣವನ್ನು ನೀಡಲಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿಗಳ ಮಾತನ್ನು ಸಂತ್ರಸ್ತೆಯ ತಾಯಿ ತಳ್ಳಿಹಾಕಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಸುಳ್ಳು ಹೇಳುತ್ತಿದ್ದಾರೆ. ನಮಗೆ ಹಣ ನೀಡಿದ್ದರು, ನನ್ನ ಮಗಳು ಹಿಂತಿರುಗುವುದಿಲ್ಲ, ನಾನು ಅವಳ ಹೆಸರಿನಲ್ಲಿ ಸುಳ್ಳು ಹೇಳುತ್ತೇನೆಯೇ?. ನಿಮ್ಮ ಮಗಳ ನೆನಪಿಗಾಗಿ ಏನಾದರೂ ಮಾಡಿ ಎಂದು ಅವರು ಹೇಳಿದರು. ನನ್ನ ಮಗಳಿಗೆ ನ್ಯಾಯ ಸಿಕ್ಕಾಗ ಸಿಎಂ ಕಚೇರಿಗೆ ಹೋಗಿ ಆ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಸಂತ್ರಸ್ತೆ ತಾಯಿ ತಿಳಿಸಿದ್ದಾಗಿ ಎಎನ್​ಐ ವರದಿ ಮಾಡಿದೆ.
ತನ್ನ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಅವರು ಹೇಳಿದರು. ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್​​ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಶವಪರೀಕ್ಷೆ ವರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆಯಾಗಿರುವುದು ಕಂಡುಬಂದಿದೆ. ಪ್ರಕರಣವು ದೇಶವ್ಯಾಪ್ತಿ ಆಕ್ರೋಶವನ್ನುಂಟು ಮಾಡಿತು. ಅಂದಿನಿಂದ ಪಶ್ಚಿಮಬಂಗಾಳದಲ್ಲಿ ಪ್ರತಿಭಟನೆ ನಡೆಯುತ್ತಲೆ ಇದೆ. (ಏಜೆನ್ಸೀಸ್​​)
ಮಕ್ಕಳಿಗೆ ಹುಷಾರಿಲ್ಲದಿದ್ದರೆ ರಜೆ ನೀಡಲಾಗುವುದಿಲ್ಲ; ಕಂಪನಿಯ ಹೊಸ ರೂಲ್ಸ್​ಗೆ ನೆಟ್ಟಿಗರು ಗರಂ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen + four =
Remember me
