ಕೋಲ್ಕತಾ:ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಸೂಪರಿಂಟೆಂಡೆಂಟ್​ ಮತ್ತು ಸಂತ್ರಸ್ತೆಯ ಪಾಲಕರ ಸಂಭಾಷಣೆ ಎನ್ನಲಾದ ಆಡಿಯೋವೊಂದು ವೈರಲ್​ ಆಗಿದೆ. ಮೂರು ಫೋನ್​ ಕರೆಗಳ ಆಡಿಯೋ ವೈರಲ್​ ಆಗಿದ್ದ ಸಾಕಷ್ಟು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದೆ.
ಇದನ್ನು ಓದಿ:ಲೈಂಗಿಕ ದೌರ್ಜನ್ಯ ಪ್ರಕರಣದಡಿ ಈ ನಟನ ವಿರುದ್ಧ ಎರಡನೇ ಎಫ್​​ಐಆರ್​ ದಾಖಲು; ಪೊಲೀಸರು ಹೇಳಿದಿಷ್ಟು
ಮೂರು ಫೋನ್ ಕರೆಗಳ ಆಡಿಯೋ ರೆಕಾರ್ಡಿಂಗ್‌ಗಳನ್ನು ಹೇಗೆ ಮಾಡಲಾಗಿದೆ ಎಂದು ನನಗೆ ತಿಳಿದಿಲ್ಲ. ಇದು ಎಲ್ಲಿಂದ, ಹೇಗೆ ವೈರಲ್ ಆಗಿದೆ ಎಂದು ನಮಗೆ ತಿಳಿದಿಲ್ಲ. ನಾವು ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ. ಆಡಿಯೋದಲ್ಲಿನ ಧ್ವನಿ ನಿಮ್ಮದೆ ಎಂದು ಕೇಳಿದಾಗ ಸಂತ್ರಸ್ತೆಯ ತಂದೆ, ನೀವು ಹಾಗೆ ಹೇಳುತ್ತೀರಿ. ಆದರೆ ನನಗೆ ಅದು ಕಾಣಿಸುತ್ತಿಲ್ಲ. ಇದು ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಸುಮಾರು 30 ನಿಮಿಷಗಳ ಅವಧಿಯಲ್ಲಿ ಅದೇ ಸಂಖ್ಯೆಯಿಂದ ಸಂತ್ರಸ್ತೆಯ ಪಾಲಕರಿಗೆ ಮೂರು ಬಾರಿ ಕರೆ ಮಾಡಿಲಾಗಿದೆ. ಮೊದಲ ಕರೆ ಬೆಳಗ್ಗೆ 10.53ಕ್ಕೆ ಬಂದಿದ್ದು, ನಾನು ಆರ್​ಜಿ ಕಾರ್ ಮೆಡಿಕಲ್​​​ ಆಸ್ಪತ್ರೆಯಿಂದ ಕರೆ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಅದಕ್ಕೆ ಸಂತ್ರಸ್ತೆಯ ತಂದೆ ಯಾಕೆ, ಏನಾಯಿತು ಎಂದು ಕೇಳಿದ್ದಾರೆ. ಅದಕ್ಕೆ ಕರೆ ಮಾಡಿದವರು ನಿಮ್ಮ ಮಗಳಿಗೆ ಸ್ವಲ್ಪ ಹುಷಾರಿಲ್ಲ, ನಾವು ಆಸ್ಪತ್ರೆಗೆ ಸೇರಿಸಿದ್ದೇವೆ. ನೀವು ಬೇಗನೆ ಬನ್ನಿ ಎಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಿ ಕೇಳಿದಾಗ ನಿಮಗೆ ಆ ವಿವರಗಳನ್ನು ವೈದ್ಯರು ನೀಡುತ್ತಾರೆ. ನಿಮಗೆ ಫೋನ್​ ಮಾಡಲು ನಂಬರ್​ ಹುಡುಕಿ ವಿಷಯ ತಿಳಿಸಲು ಕರೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಬೇಗ ಬನ್ನಿ, ನೀವು ಬಂದ ಬಳಿಕ ವೈದ್ಯರು ನಿಮಗೆ ವಿವರಿಸುತ್ತಾರೆ ಎಂದು ಹೇಳಿದ್ದಾರೆ. ಸಂತ್ರಸ್ತೆಯ ತಂದೆ ಮಗಳ ಸ್ಥಿತಿ ಗಂಭೀರವಾಗಿದೆಯೇ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿ ಅವರು, ಹೌದು ಎಂದು ಹೇಳಿ ಬೇಗ ಬನ್ನಿ ಎಂದು ಹೇಳಿದ್ದಾರೆ. ಈ ಫೋನ್​ ಕರೆ 1 ನಿಮಿಷ ಹನ್ನೊಂದು ಸೆಕೆಂಡಗಳ ಅವಧಿಯಲ್ಲಿದೆ.
ಐದು ನಿಮಿಷಗಳ ಬಳಿಕ ಬಂದ ಎರಡನೇ ಫೋನ್​ ಕರೆ ಸುಮಾರು 48 ಸೆಕೆಂಡ್​​ಗಳ ಅವಧಿ ಇದೆ. ಮೊದಲ ಕರೆ ಮಾಡಿದವರೇ ಈ ಕರೆಯನ್ನು ಮಾಡಿದ್ದು, ನಿಮ್ಮ ಮಗಳ ಸ್ಥಿತಿ ತೀರಾ ಗಂಭೀರವಾಗಿದೆ. ಸಾಧ್ಯವಾದಷ್ಟು ಬೇಗ ಬನ್ನಿ ಎಂದು ಹೇಳಿದ್ದಾರೆ. ಕರೆ ಮಾಡಿದವರಿ ನೀವು ಯಾರು ಎಂದು ಸಂತ್ರಸ್ತೆಯ ತಂದೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಡಾಕ್ಟರ್​ ಅಲ್ಲ, ಸಹಾಯಕ ಸೂಪರಿಂಟೆಂಡೆಂಟ್​ ಎಂದು ಹೇಳಿದ್ದಾರೆ. ನೀವು ಸಾಧ್ಯವಾದಷ್ಟು ಬೇಗ ಬನ್ನಿ ಎಂದು ಹೇಳಿದ್ದಾರೆ.
ಮೂರನೇ ಮತ್ತು ಅಂತಿಮ ಕರೆ ಮಾಡಿ, ನಾವು ನಿಮಗೆ ಪದೇಪದೆ ಹೇಳುತ್ತಿದ್ದೇವು, ಬೇಗ ಬನ್ನಿ ಎಂದು. ನಿಮ್ಮ ಮಗಳ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಾವಿನ ಸುದ್ದಿಯನ್ನು ಸಂತ್ರಸ್ತೆಯ ಪಾಲಕರಿಗೆ ತಿಳಿಸಿದ್ದಾರೆ. ನಾವು ಆಸ್ಪತ್ರೆಯಿಂದ ಇಲ್ಲಿಗೆ ಬಂದಿದ್ದೇವೆ, ವೈದ್ಯರು ಇಲ್ಲಿಯೇ ಇದ್ದಾರೆ. ನಿಮಗೆ ಬೇಗನೆ ಬರಲು ಹೇಳಿದೆವು ಎಂದು ತಿಳಿಸಿದ್ದಾರೆ. ಈ ಫೋನ್​ ಕರೆ 28 ಸೆಕೆಂಡ್​ಗಳ ಕಾಲ ನಡೆದಿದೆ.
ವೈರಲ್​ ಆಗಿರುವ ಆಡಿಯೋ ಬಗ್ಗೆ, ಸ್ವಲ್ಪ ಅನಾರೋಗ್ಯದಿಂದ ಆರಂಭವಾಗಿ ತುರ್ತು ಚಿಕಿತ್ಸೆ ವಾರ್ಡ್​ಗೆ ದಾಖಲಿಸುವವರೆಗೆ ಹಾಗೂ ಕೊನೆಗೆ ಆತ್ಮಹತ್ಯೆಯಿಂದ ಸಾವನ್ನಪ್ಪಿರಬಹುದು ಎಂಬುವವರೆಗೆ ಬದಲಾವಣೆ ಆಗಿದೆ. ಈ ಫೋನ್​ ಕರೆಯ ಹೇಳಿಕೆಯಲ್ಲಿನ ಬದಲಾವಣೆ ಆತ್ಮಹತ್ಯೆ ಎಂದು ಯೋಜಿಸಲು ಇಷ್ಟೆಲ್ಲಾ ಮಾಡಲಾಗಿದೆಯೇ ಎಂದು ತನಿಖಾಧಿಕಾರಿಗಳನ್ನು ಪ್ರಶ್ನಿಸುವಂತೆ ಮಾಡಿದೆ. ಅಪರಾಧವನ್ನು ಮುಚ್ಚಿಹಾಕಲು ಆಸ್ಪತ್ರೆಯ ಅಧಿಕಾರಿಗಳು ಮತ್ತು ಪೊಲೀಸರು ಸಂಚು ರೂಪಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ.
ಪ್ರಕರಣದಕ್ಕೆ ಸಂಬಂಧಿಸಿದಂತೆ ಸಿಎಂ ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ಸಂತ್ರಸ್ತೆ ತಾಯಿ ತೀವ್ರವಾಗಿ ವಿರೋಧಿಸಿದ್ದಾರೆ. ಇಡೀ ಜಗತ್ತು ನನ್ನ ಮಗಳ ಬೆಂಬಲಕ್ಕೆ ನಿಂತಿದೆ. ನ್ಯಾಯಕ್ಕಾಗಿ ಪ್ರತಿಭಟನೆ, ಹೋರಾಟ ನಡೆಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಮಮತಾ ಅವರು ಕುಟುಂಬದವರಿಗೆ ನ್ಯಾಯ ಬೇಡ ಎಂದು ಹೇಳುತ್ತಾರೆ. ಅವರಿಗೆ ಸ್ವತಃ ಮಗ ಅಥವಾ ಮಗಳು ಇಲ್ಲ. ಆದ್ದರಿಂದ ಮಗುವನ್ನು ಕಳೆದುಕೊಂಡ ನೋವು ಅವರಿಗೆ ಅರ್ಥವಾಗುತ್ತಿಲ್ಲ. ಅವರ ಮಾತು ನನಗೆ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಆಗಸ್ಟ್​​ 9ರಂದು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್​ ಹಾಲ್​ನಲ್ಲಿ ನಡೆದ ಮಹಿಳಾ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ರಾಷ್ಟ್ರವ್ಯಾಪ್ತಿ ಆಕ್ರೋಶವನ್ನು ಹುಟ್ಟುಹಾಕಿತು.(ಎಜೆನ್ಸೀಸ್​​)
ಟೆಲಿಗ್ರಾಮ್​ ಸಿಇಒ ಪಾವೆಲ್ ಡುರೊವ್ ಬಂಧನದ ಹಿಂದಿನ ರೂವಾರಿ ಅಮೆರಿಕ: ರಷ್ಯಾ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
