ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಯ ಸಂಭ್ರಮಾಚರಣೆಗೆ ತುಂಬಾನೆ ಪ್ರಾಮುಖ್ಯತೆ ಕೊಡಲಾಗುತ್ತೆ. ದುರ್ಗಾ ಪೂಜೆ ಆಚರಣೆಗಳು ಅಲ್ಲಿನ ಜನರ ಸೃಜನಶೀಲತೆ ಮತ್ತು ಭವ್ಯತೆಗೆ ಹೆಸರುವಾಸಿಯಾಗಿದೆ.
ಕೋಲ್ಕತ್ತಾದ ಉಪನಗರವಾದ ಬೆಹಾಲಾದಲ್ಲಿನ ಒಂದು ಪಾಂಡಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಯಾಕೆ ಅಂತೀರಾ..? ಇದು ಹೂವಿನ ಪೆಂಡಾಲ್​ ಅಲ್ಲ. ಬದಲಾಗಿ ಪಾನಿಪೂರಿ ಬಳಸಿ ಬೃಹತ್​​ ಪೆಂಡಾಲನ್ನ ತಯಾರಿಸಲಾಗಿದೆ.

ಬೆಹಲಾ ನೋಟುನ್ ದಾಲ್ ಕ್ಲಬ್ ರಚಿಸಿದ ಈ ಪೆಂಡಾಲ್​ ನೋಡುಗರ ಹುಬ್ಬೇರಿಸಿದೆ.
ಬೆಹಲಾ ನೋಟುನ್ ದಾಲ್ ಕ್ಲಬ್ ವಿಶೇಷ ಥೀಮ್​ನೊಂದಿಗೆ ನೆಟ್ಟಿಗರ ಗಮನ ಸೆಳೆದಿದೆ. ಗೋಲ್ಗಪ್ಪ ಬಳಸಿಕೊಂಡು ಸಂಪೂರ್ಣ ಪೆಂಡಾಲನ್ನ ರಚಿಸಲಾಗಿದ್ದು, ಈವರೆಗೂ ಈ ರೀತಿಯ ಪೆಂಡಾಲನ್ನ ಎಲ್ಲಿಯೂ ರಚಿಸಲಾಗಿಲ್ಲ.
#PaniPuribecame a divine traditional decoration at a#DurgaPujapendal in Kolkata, brilliant creativity…Kudos…!!!#RajatBhargavaIASpic.twitter.com/yfnX3xj9kr

ಸದ್ಯ ಈ ಹೊಸ ಥೀಮ್​​​​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಜನರು ಪಾನಿಪುರಿ ಪೆಂಡಾಲ್​ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕೋಲ್ಕತ್ತಾದ ದುರ್ಗಾ ಪೂಜೆಯನ್ನು ಅಲ್ಲಿನ ಕಲಾತ್ಮಕ ಮತ್ತು ಸಾಂಸ್ಕೃತಿಕ ಮಹತ್ವಕ್ಕಾಗಿ ಆಚರಿಸಲಾಗುತ್ತದೆ ಮತ್ತು ಈ ವರ್ಷ, ಪಾಂಡಲ್‌ನ ಥೀಮ್‌ನಲ್ಲಿ ಋತುಚಕ್ರದ ರೀತಿಯಲ್ಲಿ ಪಾನಿಪುರಿ ಪೆಂಡಾಲ್​ ರಚಿಸಲಾಗಿದ್ದು, ಸದ್ಯ ಈ ಹೊಸಬ ಥೀಮ್​ ಎಲ್ಲರ ಗಮನ ಸೆಳೆದಿದೆ. ​​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 1 =
Remember me
