ಕೋಲ್ಕತ್ತಾ:ಪ್ರೀತಿಗಾಗಿ, ಬಿರಿಯಾನಿಗಾಗಿ, ಮದ್ಯ, ಹಣಕ್ಕಾಗಿ ಕೊಲೆಗಳನ್ನು ಮಾಡಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಕೇವಲ 5 ರೂಪಾಯಿಗಾಗಿ ಕೊಲೆ ನಡೆದಿದೆ. ಇಂತಹದೊಂದು ಭಯಾನಕ ಘಟನೆ ನಡೆದಿರುವುದು ಬಂಗಾಳ ರಾಜ್ಯದಲ್ಲಿ. ಬಂಗಾಳ ರಾಜ್ಯದ ರಾಜಧಾನಿ ಕೋಲ್ಕತ್ತಾದ ಧಾಕುರಿಯಾದಲ್ಲಿ ಈ ಕೊಲೆ ನಡೆದಿದೆ.
ಮೃತ ವ್ಯಕ್ತಿಯನ್ನು ಸುಶಾಂತ ಮೊಂಡಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಗರಿಯಾಹಟ್ ರಸ್ತೆಯಲ್ಲಿರುವ ಸದರ್ನ್ ಸ್ಟೋರ್ ಲಿಕ್ಕರ್ ಶಾಪ್​​​ನಲ್ಲಿ ಮದ್ಯಕ್ಕೆ ಹಣ ಪಾವತಿಸುತ್ತಿದ್ದಾಗ 5 ರೂ. ಕಡಿಮೆಯಾದ ಕಾರಣ ವ್ಯಕ್ತಿಯೊಬ್ಬನನ್ನು ಅಂಗಡಿ ಮಾಲೀಕ ಹಾಗೂ ವ್ಯಕ್ತಿಯ ನಡುವೆ ಜಗಳ ನಡೆದಿದೆ. ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅವರನದನು ಬದುಕಿಸಲು ಸಾಧ್ಯವಾಗಲಿಲದಲವೆಂದು ವೈದ್ಯರು ಹೇಳಿದ್ದಾರೆ.ಇದನ್ನೂ ಓದಿ:ಅಮೆಜಾನ್ ಕೊಟ್ಟ ಅದೃಷ್ಟ; ಆರ್ಡರ್ ಮಾಡದೆ ಮನೆ ಬಾಗಿಲಿಗೆ ಬಂದವು 100 ಪಾರ್ಸೆಲ್!
ನಂತರ ನಡೆದ ಗಲಾಟೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮೃತನನ್ನು ಸುಸಂತ ಮೊಂಡಲ್ ಎಂದು ಗುರುತಿಸಲಾಗಿದ್ದು, ಅಂಗಡಿಯ ಉದ್ಯೋಗಿಯೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ:3 ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಕೃಷಿ ಹೊಂಡಕ್ಕೆ ಹಾರಿ ಸಾವಿಗೆ ಶರಣು…
ರವೀಂದ್ರ ಸರೋವರ್ ಪೊಲೀಸ್ ಠಾಣೆಯ ಅಧಿಕಾರಿಗಳು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302/34 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಅಂಗಡಿಯ ಮಾಲೀಕ ದೇಬೋಜ್ಯೋತಿ ಸಹಾ ಮತ್ತು ಮೂವರು ಉದ್ಯೋಗಿಗಳನ್ನು ಅಮಿತ್ ಕರ್, ಪ್ರಭಾತ್ ದತ್ತಾ ಅಲಿಯಾಸ್ ಟಿಂಕು ಮತ್ತು ಪ್ರಸೇನ್‌ಜಿತ್ ಬೈದ್ಯ ಎಂದು ಗುರುತಿಸಲಾಗಿದೆ.ಮದ್ಯದ ಅಂಗಡಿ ಮಾಲೀಕ. ಉಳಿದ ಮೂವರು ಉದ್ಯೋಗಿಗಳು. ಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಕಟ್ಟಡದ ಮೇಲೆ ಸಾಹಸ ಮಾಡುತ್ತಾ 68ನೇ ಮಹಡಿಯಿಂದ ಆಯತಪ್ಪಿ ಬಿದ್ದು ಪ್ರಾಣ ಬಿಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 6 =
Remember me
