ಕೋಲ್ಕತ್ತಾ:ದೇಶಾದ್ಯಂತ ಸಂಚಲನ ಮೂಡಿಸಿರುವ ಆರ್ ಜಿ ಕಾರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಸ್ನಾತಕೋತ್ತರ ಟ್ರೈನಿ ವೈದ್ಯೆ ಹತ್ಯೆ ಪ್ರಕರಣದಲ್ಲಿ ಪೋಸ್ಟ್​ ಪರ್ಟಂ ರಿಪೋರ್ಟ್​ ಬಂದಿದ್ದು, ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:12.5 ಕೋಟಿ ಮೌಲ್ಯದ ಚಿಕನ್ ಕಳ್ಳತನ.. ಮಹಿಳೆಗೆ 9 ವರ್ಷ ಜೈಲು!
ವರದಿ ನೀಡಿದ ಬಳಿಕ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಸುಭರ್ಣಾ ಗೋಸ್ವಾಮಿ, ಟ್ರೈನಿ ವೈದ್ಯೆ ದೇಹದಲ್ಲಿ 151 ಗ್ರಾಂ ದ್ರವವಿದೆ. ಒಬ್ಬರೇ ಲೈಂಗಿಕ ದೌರ್ಜನ್ಯ ಎಸಗಿದರೆ ಆಕೆಯ ದೇಹದಲ್ಲಿ ಅಷ್ಟು ದ್ರವ ಇರುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಈ ಕೊಲೆ ಘಟನೆಯಲ್ಲಿ ಹಲವರು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮೃತರ ಕುಟುಂಬದವರೂ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಡಾ.ಗೋಸ್ವಾಮಿ ನೆನಪಿಸಿದರು. ಆಕೆಯ ಮೈಮೇಲೆ ಗಾಯಗಳಿವೆ. ಒಬ್ಬರೇ ಇದ್ದರೆ, ಆಕೆಯನ್ನು ಇಷ್ಟು ನೋಯಿಸುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?: ಟ್ರೈನಿ ವೈದ್ಯೆಯನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಅದರಿಂದಾಗಿ ಆಕೆಯ ಥೈರಾಯ್ಡ್ ಭಾಗದ ಮೃದು ಸ್ಥಿತಿಯು ಮುರಿದುಹೋಗಿದೆ. ಆಕೆಯ ದೇಹದ ಖಾಸಗಿ ಭಾಗಗಳಲ್ಲಿ ಗಾಯಗಳಿವೆ. ತುಟಿ, ಬೆರಳುಗಳು ಮತ್ತು ಮೇಲಿನ ಎಡ ಕಾಲಿನ ಮೇಲೆ ಗಾಯಗಳು ಕಂಡುಬಂದಿವೆ. ಆಕೆಯ ಬಾಯಿ, ಕಣ್ಣಿನಿಂದ ರಕ್ತ ಬಭದಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಬಾಯಿ ಬಿಗಿದಿದ್ದರು. ಇದರಿಂದ ಉಸಿರು ಬಾರದ ಸ್ಥಿತಿಗೆ ತಲುಪಿದ್ದಾಳೆ. ಆಕೆಯ ತಲೆಯನ್ನು ಗೋಡೆಗೆ ಹೊಡೆದಿರುವುದು ಈ ವರದಿಯಲ್ಲಿ ಸ್ಪಷ್ಟವಾಗಿದೆ. ಮುಖದ ಮೇಲೂ ಗೀಚಿರುವುದು ಕಂಡುಬಂದಿದೆ. ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಆಕೆಗೆ ತೀವ್ರ ಚಿತ್ರಹಿಂಸೆ ನೀಡಲಾಗಿದೆ ಎಂದು ಪೋಸ್ಟ್‌ಮಾರ್ಟಂ ವರದಿಯು ಸ್ಪಷ್ಟಪಡಿಸಿದೆ.
ಸಿಬಿಐ ತನಿಖೆ: ಆಗಸ್ಟ್ 9ರ ಶುಕ್ರವಾರದ ಮುಂಜಾನೆ ಆಸ್ಪತ್ರೆಯ ಸಿಬ್ಬಂದಿ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ ವಿದ್ಯಾರ್ಥಿಯ ಶವ ಬೆತ್ತಲೆಯಾಗಿ ಬಿದ್ದಿರುವುದು ಕಂಡುಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸಂಜಯ್ ರಾಯ್ ಎಂಬ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಮತ್ತೊಂದೆಡೆ ಘಟನೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನೊಂದು ಕಡೆ ಪ್ರಕರಣವನ್ನು ಸಿಬಿಐಗೆ ವಹಿಸಿ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದ್ದು, ಸಿಬಿಐ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
‘ಮನೆಯಲ್ಲಿ ಕುಳಿತು ಮಾಡುವುದು ಸುಲಭ, ಆದ್ರೆ..’ ಟ್ರೋಲ್‌ ಮಾಡಿದವರಿಗೆ ಸೈನಾ ಕೌಂಟರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
