ಕೋಲ್ಕತ:ರಾಷ್ಟ್ರವನ್ನು ಇಬ್ಭಾಗ ಮಾಡಿ, ಶಾಂತಿ ಕದಡಲು ಬಯಸಿರುವ ಜನರು ಖಂಡಿತವಾಗಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ(ಎನ್​ಎಸ್​ಜಿ)ಗೆ ಭಯಪಡಲೇಬೇಕೆಂದು ಗೃಹ ಸಚಿವ ಅಮಿತ್​ ಷಾ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳಿಗೆ ಟಾಂಗ್​ ನೀಡಿದರು.
ಪಶ್ಚಿಮ ಬಂಗಾಳದ ರಾಜರ್ಹತ್​ನಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ(ಎನ್​ಎಸ್​ಜಿ)ಯ 29 ವಿಶೇಷ ಸಂಯೋಜಿತ ಗುಂಪು ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮಿತ್​ ಷಾ ಮಾತನಾಡಿದರು.
ಜಾಗತಿಕವಾಗಿ ನಾವು ಶಾಂತಿಯನ್ನು ಬಯಸಿದ್ದೇವೆ. ನಮ್ಮ 10,000 ವರ್ಷಗಳ ಇತಿಹಾಸದಲ್ಲಿ ಭಾರತ ಯಾರೊಬ್ಬರ ಮೇಲೂ ಆಕ್ರಮಣ ಮಾಡಿಲ್ಲ. ಶಾಂತಿಯನ್ನು ಕದಡಲು ಯಾರೊಬ್ಬರಿಗೂ ಅವಕಾಶ ಮಾಡಿಕೊಟ್ಟಿಲ್ಲ. ಆದರೆ, ಯಾರು ನಮ್ಮ ಯೋಧರ ಪ್ರಾಣವನ್ನು ತೆಗೆಯುತ್ತಾರೋ ಅವರಿಗೆ ಧೈರ್ಯವಾಗಿಯೇ ಉತ್ತರ ನೀಡುತ್ತೇವೆ ಎಂದರು.
ಕೆಲ ಜನರು ದೇಶದ ವಿಭಜನೆ ಹಾಗೂ ಶಾಂತಿ ಕದಡುವುದನ್ನು ಬಯಸಿದ್ದಾರೆ. ಆದರೆ ಅವರು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯನ್ನು ನೋಡಿ ಹೆದರಲೇಬೇಕು. ಅದರ ಮೇಲೂ ಅವರು ಮುಂದುವರಿದರೆ, ಅಂಥವರ ವಿರುದ್ಧ ಹೋರಾಡಿ ಸೋಲಿಸಬೇಕಾಗಿರುವುದು ಎನ್​ಎಸ್​ಜಿಯ ಜವಬ್ದಾರಿ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತಾ ನಿಯಮನವನ್ನು ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ. ಇದರಲ್ಲಿ ಎನ್​ಎಸ್​ಜಿ ಪಾತ್ರ ಪ್ರಮುಖವಾಗಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ರಕ್ಷಣಾ ಮತ್ತು ವಿದೇಶಾಂಗ ನೀತಿಯಲ್ಲಿ ಭಾರಿ ಬದಲಾವಣೆ ಆಗಿದೆ. ಅದಕ್ಕೂ ಮುಂಚೆ ಇದ್ದ ನಿಯಮವನ್ನು ಯಾರು ಇಷ್ಟಪಡುತ್ತಿರಲಿಲ್ಲ ಎಂದರು. ಅಲ್ಲದೆ, ಮೋದಿ ಅಧಿಕಾರವಧಿಯಲ್ಲಿ ಎನ್​ಎಸ್​ಜಿಯ ನಿರೀಕ್ಷೆಗಳನ್ನು ಖಂಡಿತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ಅಮಿತ್​ ಷಾ ಅವರು ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಇಂದು ಕೋಲ್ಕತಗೆ ಬಂದಿಳಿದಿದ್ದಾರೆ. ಕೋಲ್ಕತ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಬಿಜೆಪಿ ನಾಯಕರು ಬರಮಾಡಿಕೊಂಡರು. ಇತ್ತ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರು ಗೋ ಬ್ಯಾಕ್​ ಅಮಿತ್​ ಷಾ ಘೋಷಣೆ ಕೂಗಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
