ಕೋಲ್ಕತ:ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರ‍್ಯಾಲಿಯಲ್ಲಿ ಗೋಲಿ ಮಾರೋ ಘೋಷಣೆ ಕೂಗಿದ್ದು ವಿವಾದಕ್ಕೀಡಾದುದಲ್ಲದೆ, ಆ ರೀತಿ ಕೂಗಿದವರ ಪೈಕಿ ಮತ್ತೂ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 4ಕ್ಕೆ ಏರಿದೆ.
ನಾರ್ತ್​ 24 ಪರಗಣ ಜಿಲ್ಲೆಯ ಸೋದೆಪುರ್​ನ ಗೋಲಾದ ನಿವಾಸಿ ಸುಜಿತ್ ಬರುವಾ(51) ಬಂಧಿತ. ವಿಡಿಯೋ ದೃಶ್ಯಾವಳಿಯಲ್ಲಿ ಈತನನ್ನು ಗುರುತಿಸಿದ ನಂತರವೇ ಬಂಧಿಸಲಾಗಿದೆ. ಇದಕ್ಕೂ ಮೊದಲು ವಿಡಿಯೋ ದೃಶ್ಯಾವಳಿಯನ್ನು ಗೃಹ ಇಲಾಖೆಗೆ ರವಾನಿಸಿದ್ದು, ಅನುಮತಿ ಪಡೆದ ನಂತರವೇ ಮುಂದುವರಿಯಲಾಗಿದೆ ಎಂದು ಕೋಲ್ಕತ ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಬಂಧಿತರಾದವರ ಪೈಕಿ ಪಂಕಜ್​ ಪ್ರಸಾದ್​, ಸುರೇಂದ್ರ ಕುಮಾರ್ ತಿವಾರಿ ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಇದೇ ವೇಳೆ, ಇನ್ನೋರ್ವ ಆರೋಪಿ ಧ್ರುವಾ ಬಸು ಎಂಬಾತನಿಗೆ ಸಿಟಿ ಕೋರ್ಟ್​ ವಯಸ್ಸು ಮತ್ತು ಅನಾರೋಗ್ಯದ ಕಾರಣಕ್ಕೆ ಜಾಮೀನು ಮಂಜೂರು ಮಾಡಿದೆ.
ವಿಡಿಯೋ ದೃಶ್ಯಾವಳಿಯಲ್ಲಿ ಇನ್ನೂ ಕೆಲವರನ್ನು ಗುರುತಿಸಲಾಗಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ಈ ಘಟನೆಯಲ್ಲಿ ಪಕ್ಷದ ಕಾರ್ಯಕರ್ತರಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ. ಇದೆಲ್ಲವೂ ತೃಣಮೂಲ ಕಾಂಗ್ರೆಸ್​ ಪಿತೂರಿ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೋಲ್ಕತದ ಶಹೀದ್ ಮಿನಾರ್ ಗ್ರೌಂಡ್ ಸಮೀಪದಿಂದಾಗಿ ಸಮಾವೇಶದ ಸ್ಥಳಕ್ಕೆ ರೋಡ್ ಷೋ ಮೂಲಕ ತೆರಳುತ್ತಿದ್ದ ವೇಳೆ ಆರೋಪಿಗಳು ಗೋಲಿಮಾರೋ ಘೋಷಣೆ ಕೂಗಿದ್ದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 15 =
Remember me
