ಕೋಲ್ಕತ್ತ:ಮಾನವೀಯತೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದು ಕಡಿಮೆಯಾಗುತ್ತಿದೆ. ಪೊಲೀಸ್​​ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಗೆ ಸಹಾಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಹೋಗಲು ದಾರಿತಪ್ಪಿ, ಅಳುತ್ತ ನಿಂತಿದ್ದ ಬಾಲಕಿಯನ್ನು ಪೊಲೀಸ್​ ಅಧಿಕಾರಿಯೊಬ್ಬರು ಜೀರೋ ಟ್ರಾಫಿಕ್ ಮೂಲಕವಾಗಿ ಕರೆದುಕೊಂಡು ಹೋಗಿ ಪರೀಕ್ಷೆಗೆ ಸರಿಯಾದ ಸಮಯಕ್ಕೆ ತಲುಪಿಸಿದ್ದಾರೆ.
ಇದನ್ನೂ ಓದಿ:ವೆಡ್ಡಿಂಗ್ ಆ್ಯನಿವರ್ಸರಿ ಮರೆತ ಪತಿಗೆ ಗೂಸಾ ಕೊಟ್ಟ ಮಹಿಳೆ ವಿರುದ್ಧ ದೂರು ದಾಖಲು!
ಈ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದ್ದು, ಹೌರಾಹ್ ಸೇತುವೆ ಟ್ರಾಫಿಕ್​ ಗಾರ್ಡ್​ ಆಗಿರುವ, ಪೊಲೀಸ್ ಅಧಿಕಾರಿ ಸೌವಿಕ್​ ಚಕ್ರವರ್ತಿ ಅವರು ರಾಜಾ ಕತ್ರಾ ಬಳಿ ಕರ್ತವ್ಯದಲ್ಲಿ ಇದ್ದರು. ಆಗ ಅಲ್ಲೊಬ್ಬಳು ಶಾಲಾ ಬಾಲಕಿ ಅಳುತ್ತ ನಿಂತಿರುವುದನ್ನು ನೋಡಿದ್ದಾರೆ. ಆಕೆ ಶಾಲಾ ಸಮವಸ್ತ್ರ ತೊಟ್ಟು, ಹೆಗಲಿಗೆ ಬ್ಯಾಗ್​ ಹಾಕಿದ್ದಳು. ಕೇಳಿದ್ದಕ್ಕೆ, ‘ನಾನು ನನ್ನ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿತ್ತು. ಹತ್ತಿರದ ಸಂಬಂಧಿಯೊಬ್ಬರು ತೀರಿಕೊಂಡಿದ್ದರಿಂದ ಮನೆಯವರೆಲ್ಲ ಅವರ ಅಂತ್ಯಸಂಸ್ಕಾರಕ್ಕೆ ಹೋಗಬೇಕಾಯಿತು. ನಾನು ಒಬ್ಬಳೇ ಬಂದೆ. ಆದರೆ ದಾರಿ ತಪ್ಪಿ ಹೋಯಿತು. ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗದಿದ್ದರೆ, ಒಳಗೆ ಸೇರಿಸುವುದಿಲ್ಲ’ ಎಂದು ಬಾಲಕಿ ಅಳಲು ಪ್ರಾರಂಭಿಸಿದ್ದಾಳೆ.
ಇದನ್ನೂ ಓದಿ:7.9ಲಕ್ಷ ರೂ. ಖರ್ಚು ಮಾಡಿ ವಿಶ್ವದಲ್ಲೇ ಅತಿ ದೊಡ್ಡ ತುಟಿ ಪಡೆದ ಯುವತಿ!
ಪೊಲೀಸ್ ಇನ್​ಸ್ಪೆಕ್ಟರ್​ ಚಕ್ರವರ್ತಿ, ಬಾಲಕಿಯನ್ನು ತಮ್ಮ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡರು. ಆಕೆಯ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಾದ ಮಾರ್ಗವನ್ನು ಝೀರೋ ಟ್ರಾಫಿಕ್​ ಮಾಡುವಂತೆ ಕಂಟ್ರೋಲ್​ ರೂಮಿಗೆ ಸೂಚಿಸಿದರು. ಬಾಲಕಿಯ ಪರೀಕ್ಷಾ ಕೇಂದ್ರ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಸರಿಒಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಿದ ಬಾಲಕಿಯ ಮುಖದಲ್ಲಿ ನಗು ಅರಳಿತ್ತು. ಈ ಘಟನೆಯನ್ನು ಪೊಲೀಸ್​​ ಅಧಿಕಾರಿಯೊಬ್ಬರು ಫೇಸ್​ಬುಕ್ ಪೇಜ್​​ನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಪೊಲೀಸ್​​ ಅಧಿಕಾರಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.
ಏರ್ ಆಂಬ್ಯುಲೆನ್ಸ್ ದುರಂತ; ರೋಗಿ ಸೇರಿ 5 ಮಂದಿ ಮೃತ್ಯು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 11 =
Remember me
