ಕೋಲ್ಕತ್ತ: ಜಗತ್ತಿನಲ್ಲೀಗ ಕರೊನಾ ವೈರಸ್​ ನಿವಾರಿಸುವ ಲಸಿಕೆಯನ್ನು ತಯಾರಿಸುವ ಕಾರ್ಯ ಭಾರಿ ವೇಗದಿಂದ ನಡೆಯುತ್ತಿರುವುದು ಸರಿಯಷ್ಟೇ. ಕರೊನಾವನ್ನು ಈ ವಿಶ್ವದಿಂದಲೇ ದೂರ ಓಡಿಸಬೇಕೆಂಬ ಉದ್ದೇಶಕ್ಕೆ ನೂರಾರು ರಾಷ್ಟ್ರಗಲು ಜತೆಗೂಡಿ ಕಾರ್ಯ ನಿರ್ವಹಿಸುತ್ತಿವೆ.
ಅಂತೆಯೇ, ಕರೊನಾವನ್ನು ದೂರವಿಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗಿರಬೇಕು ಎಂಬುದು ಕೂಡ ಅಷ್ಟೇ ನಿಜ. ಈ ಕಾರ್ಯವನ್ನೇ ಲಸಿಕೆಯಿಂದ ಮಾಡಲು ಅಂದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಶೋಧನೆಗಳು ನಡೆಯುತ್ತಿವೆ.
ಇದನ್ನೂ ಓದಿ;ಎರಡು ಲಕ್ಷ ಸೋಂಕಿತರಿದ್ದರೂ ಭಾರತ ಭಯಪಡಬೇಕಿಲ್ಲ; ವಿಶ್ವ ಆರೋಗ್ಯ ಸಂಸ್ಥೆಗೆ ಏಕಿಂಥ ವಿಶ್ವಾಸ…?
ಇಂಥದ್ದೇ ಕಾರ್ಯವನ್ನು ನಾವು ತಯಾರಿಸಿರುವ ಸಿಹಿ ತಿಂಡಿ ಕೂಡ ಮಾಡಲಿದೆ ಎಂದು ಕೋಲ್ಕತ್ತದ ಬಲರಾಮ್​ ಮಲ್ಲಿಕ್​ ಮತ್ತು ರಾಧಾರಮಣ ಮಲ್ಲಿಕ್​ ಸಿಹಿ ತಿಂಡಿಗಳ ಅಂಗಡಿ ಹೇಳಿಕೊಂಡಿದೆ. ಇದಕ್ಕೆ ‘ಇಮ್ಯೂನಿಟಿ ಸಂದೇಶ್​’ ಎಂದು ಹೆಸರಿಟ್ಟಿದೆ.
‘ಸಂದೇಶ್​’ ಬೆಂಗಾಳ ಪ್ರಸಿದ್ಧ ಸಿಹಿ ತಿನಿಸಾಗಿದೆ. ಇದರಲ್ಲಿ ಆರ್ಯುವೇದ ಮೂಲಿಕೆಗಳನ್ನು ಬಳಸಲಾಗಿರುವುದು ವಿಶೇಷವಾಗಿದೆ. ಇನ್ನು ಗಮನಾರ್ಹ ಅಂಶವೆಂದರೆ, ಇದರ ತಯಾರಿಕೆಗೆ ಸಕ್ಕರೆ ಅಥವಾ ಬೆಲ್ಲ ಬಳಸಿಲ್ಲ. ಇದನ್ನು ಬಳಸಿದರೆ ಆಯುರ್ವೇದ ಸಾಮಗ್ರಿಗಳ ಶಕ್ತಿ ಕುಂದುತ್ತದೆ. ಹೀಗಾಗಿ ಜೇನನ್ನು ಸೇರಿಸಲಾಗಿದೆ.
ಇದನ್ನೂ ಓದಿ;ಕರೊನಾ ಸೋಂಕಿತರಿಗಿನ್ನು ಮನೆಯಲ್ಲೇ ಚಿಕಿತ್ಸೆ; ಭಾರತಕ್ಕೂ ಬಂತು ಅಮೆರಿಕದ ವ್ಯವಸ್ಥೆ
ತುಳಸಿ, ಅರಿಶಿಣ, ಸಣ್ಣ ಏಲಕ್ಕಿ, ಜ್ಯೇಷ್ಠ ಮಧು, ಜಾಯಫಲ, ಶುಂಠಿ, ಕರಿಮೆಣಸು, ಕರಿ ಎಳ್ಳು, ಪೀಪಲ್​ ಮೊದಲಾದ ಆಯುರ್ವೇದ ಸಾಮಗ್ರಿಗಳನ್ನು ಬಳಸಲಾಗಿದೆ. ಈ ಸಾಮಗ್ರಿಗಳನ್ನು ಬಳಸುವ ಮುನ್ನ ಹಲವು ಆಯುರ್ವೇದ ಪಂಡಿತರನ್ನು ಸಂಪರ್ಕಿಸಿ ಸಲಹೆ ಪಡೆಯಲಾಗಿದೆ ಎಂದು ಇದರ ತಯಾರಕರು ಹೇಳಿಕೊಂಡಿದ್ದಾರೆ.
ಆಯುರ್ವೇದ ಸಾಮಗ್ರಿಗಳೆಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿವೆ ಎಂದು ತಜ್ಞರು ಕೂಡ ಹೇಳಿದ್ದಾರೆ. ಇದಕ್ಕೆ ಜನರು ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಬೆಂಗಳೂರಿನಲ್ಲಿ ಚಿಕ್ಕಪ್ಪ ಸೇರಿ ಮೂವರಿಂದ ಅತ್ಯಾಚಾರಕ್ಕೊಳಗಾದ ಬಾಲಕಿಗೆ ಹೊಸ ಬದುಕು ಕಟ್ಟಿಕೊಳ್ಳುವಾಸೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 8 =
Remember me
