ಕೋಲ್ಕತ:ವ್ಯಕ್ತಿಯ ಮೃತದೇಹದೊಂದಿಗೆ ರಕ್ತಸಂಬಂಧಿ ದಿನ ಕಳೆದ ಪ್ರಕರಣಗಳು ಅಪರೂಪಕ್ಕೊಮ್ಮೆ ಕಂಡುಬರುತ್ತಿದ್ದು, ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಮಗಳ ಶವದೊಂದಿಗೆ ತಾಯಿ ಐದು ದಿನಗಳನ್ನು ಕಳೆದಿದ್ದಾರೆ.
ಕೋಲ್ಕತದ ರಾಣಿಕುತಿ ಎಂಬಲ್ಲಿನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ತಾಯಿ ದೀಪಾಲಿ ಬಸು ತನ್ನ 32 ವರ್ಷದ ಮಗಳು ದೋಯೆಲ್ ಬಸುವಿನ ಶವದ ಜೊತೆ ಐದು ದಿನಗಳನ್ನು ಕಳೆದಿದ್ದಾರೆ. ತಾಯಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯ ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ತಾಯಿ-ಮಗಳು ವಾಸವಿದ್ದ ಮನೆಯನ್ನೂ ವಶಕ್ಕೆ ಪಡೆದಿರುವ ಪೊಲೀಸರು, ಮಗಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ತಾಯಿ-ಮಗಳು ಇಬ್ಬರೂ 2006ರಿಂದ ಈ ಮನೆಯಲ್ಲಿ ವಾಸವಿದ್ದು, ಅಕ್ಕಪಕ್ಕದವರ ಜತೆ ಅಂಥ ಒಡನಾಟ ಹೊಂದಿಲ್ಲ. ಈ ಮನೆಗೆ ಸಾಮಾನ್ಯವಾಗಿ ಆಹಾರ ಪಾರ್ಸೆಲ್ ಬರುತ್ತಿತ್ತು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಹವಾಮಾನ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಐದು ದಿನ ಗುಡುಗು ಮಿಂಚು ಸಹಿತ ಮಳೆ
ಐದು ದಿನಗಳಿಂದ ತಾಯಿ ಮಾತ್ರ ಹೊರಗೆ ಕಾಣಿಸುತ್ತಿದ್ದು, ಮಗಳ ಬಗ್ಗೆ ವಿಚಾರಿಸಿದಾಗೆಲ್ಲ ಒಂದೋ ಅವಳು ಮಲಗಿದ್ದಾಳೆ ಇಲ್ಲವೇ ವಿಶ್ರಾಂತಿಯಲ್ಲಿದ್ದಾಳೆ ಎಂದು ಹೇಳುತ್ತಿದ್ದರು. ಆದರೆ ಸೋಮವಾರ ಮಧ್ಯಾಹ್ನ ಬಂದಿದ್ದ ಡೆಲಿವರಿ ಬಾಯ್​ ಮನೆಯಲ್ಲಿನ ವಾಸನೆಯನ್ನು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ: ಕಾಂಗ್ರೆಸ್ ಸಮಾವೇಶದಲ್ಲಿ ಜಗದೀಶ ಶೆಟ್ಟರ್
ಇದು ಸಹಜ ಸಾವೇ, ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದು, ಅದು ಸಿಕ್ಕ ಬಳಿಕ ತನಿಖೆಗೆ ಮಹತ್ವದ ಸುಳಿವು ಸಿಗಲಿದೆ ಎನ್ನಲಾಗಿದೆ.
ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್​.ಡಿ.ದೇವೇಗೌಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − five =
Remember me
