ಮುಂಬೈ: ವಿವಾದಿತ ಪೋಸ್ಟ್​​ಗಳನ್ನು ಹಾಕುತ್ತಾರೆ ಎಂದು ಆರೋಪಿಸಿ ಟ್ವಿಟ್ಟರ್ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕಂಗನಾ, ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಕೂ (Koo) ಎಂಬ ಸಾಮಾಜಿಕ ಜಾಲತಾಣದ ಮೂಲಕ ಟ್ವಿಟ್ಟರ್​​ಗೆ ಟಾಂಗ್ ಕೊಟ್ಟಿದ್ದಾರೆ.
ಕೂ ಇದೊಂದು ಹೊಸ ತಾಣ, ಅಷ್ಟೇ ಅಲ್ಲ ಇದು ನಮ್ಮ ಮನೆ. ನಮ್ಮ ಸ್ವಂತ ಮನೆಯೇ ಯಾವಾಗಲು ನಮ್ಮ ಮನೆಯಾಗಿರುತ್ತದೆ. ಬಾಡಿಗೆ ಮನೆಯಲ್ಲಿದ್ದರೆ ಅದು ನಮ್ಮ ಮನೆಯಾಗುವುದಿಲ್ಲ ಎಂದು ಕೂ ನಲ್ಲಿ ಪೋಸ್ಟ್​ ಹಾಕುವ ಮೂಲಕ ಟ್ವಿಟ್ಟರ್​ ವಿದೇಶಿ ಮೂಲದ್ದು ಅದನ್ನು ಭಾರತೀಯರು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.
ಕಂಗನಾ ಅವರ ಪೋಸ್ಟ್​ಗೆ ಹರ್ಷ ವ್ಯಕ್ತಪಡಿಸಿರುವ ಕೂ ಸಂಸ್ಥಾಪಕ ಹಾಗೂ ಸಿಇಓ ಅಪ್ರಮೇಯ ರಾಧಾಕೃಷ್ಣ ಅವರು ಕಂಗನಾ ಅವರೇ ಕೂ ವೇದಿಕೆಗೆ ನಿಮಗೆ ಸ್ವಾಗತ. ಇದು ಖಂಡಿತವಾಗಿಯೂ ನಿಮ್ಮ ಮನೆ ಎಂದು ಕಂಗನಾ ಅವರನ್ನು ಸ್ವಾಗತ ಮಾಡಿದ್ದಾರೆ. ಕೂ ನಲ್ಲಿ ಇದೇ ಮೊದಲ ಬಾರಿಗೆ ಕಂಗನಾ ಪೋಸ್ಟ್​ ಹಾಕಿದ್ದಾರೆ. ಅಲ್ಲದೇ ಕೂ ವೇದಿಕೆಯ ಇನ್ನೊಬ್ಬ ಸಂಸ್ಥಾಪಕ ಮಯಾಂಕ್ ಅವರು ಕೂಡ ಕಂಗನಾ ಅವರೇ ಕೂ ಖಂಡಿತವಾಗಿಯೂ ನಿಮ್ಮ ಸ್ವಾಭಿಮಾನದ ಸಂಕೇತ ಎನ್ನುವ ಮೂಲಕ ಸ್ವಾಗತ ಮಾಡಿದ್ದಾರೆ. ಅಂದಹಾಗೇ ಕೂ ನಲ್ಲಿ 4.48 ಲಕ್ಷ ಫಾಲೋವರ್​ಗಳನ್ನು ಕಂಗನಾ ಹೊಂದಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ನಂತರ ಅಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆ ಆಗುತ್ತಿದೆ. ಬೆಂಕಿ ಹಚ್ಚಲಾಗುತ್ತಿದೆ. ಇದನ್ನೆಲ್ಲಾ ಟಿಎಂಸಿ ಹಾಗೂ ಮಮತಾ ಮಾಡಿಸುತ್ತಿದ್ದಾರೆ ಎಂದು ಕಂಗನಾ ಟ್ವಿಟ್ಟರ್​ನಲ್ಲಿ ಸರಣಿ ಪೋಸ್ಟ್​​ಗಳನ್ನು ಹಾಕಿದ್ದರು. ಅಲ್ಲದೇ ಈ ಹಿಂದೆ ಕೂಡ ಅವರು ಹಲವಾರು ಬಾರಿ ಟ್ವಿಟ್ಟರ್​ನ ನಿಯಮಗಳನ್ನು ಉಲ್ಲಂಘನೆ ಮಾಡಿ ದ್ವೇಷ ಬಿತ್ತುವ ಪೋಸ್ಟ್​​ಗಳನ್ನು ಹಾಕಿದ್ದರು. ಅಲ್ಲದೇ ಈ ಹಿಂದೆ ಇದೇ ವಿಷಯವಾಗಿ ಕಂಗಾನಾಗೆ ಟ್ವಿಟ್ಟರ್​ ಎಚ್ಚರಿಕೆಯನ್ನೂ ನೀಡಿತ್ತು.
ಅಕೌಂಟ್​ ಬ್ಯಾನ್​: ಟ್ವಿಟ್ಟರ್​ ವಿರುದ್ಧ ಗುಡುಗಿದ ಕಂಗನಾ ರಣಾವತ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 6 =
Remember me
