ಬೆಂಗಳೂರು:ಕೋರಮಂಗಲದ ವಿಆರ್ ಲೇಔಟ್​ನಲ್ಲಿರುವ ಲೇಡಿಸ್​ ಪಿಜಿಯಲ್ಲಿ ಬಿಹಾರ ಮೂಲದ ಯುವತಿ ಕೃತಿ ಕುಮಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಅಭಿಷೇಕ್​ನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ.
ಜುಲೈ 23ರ ನಡುರಾತ್ರಿ ಯುವತಿಯ ಕತ್ತು ಸೀಳಿ ಕೊಲೆ ಮಾಡಿ ಮಧ್ಯಪ್ರದೇಶದಲ್ಲಿ ತಲೆಮಾರಿಸಿಕೊಂಡಿದ್ದ. ಆರೋಪಿಯನ್ನು ಬಂಧಿಸಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮಧ್ಯಪ್ರದೇಶದಲ್ಲಿ ಆತನನ್ನು ಬಂಧಿಸಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಜುಲೈ 23ರ ರಾತ್ರಿ 11:30ಕ್ಕೆ ಕೋರಮಂಗಲದ ವಿಆರ್​ ಲೇಔಟ್​ನಲ್ಲಿರುವ ಪಿಜಿಗೆ ನುಗಿದ್ದ ಆರೋಪಿ ಅಭಿಷೇಕ್​ ರೂಮಿನ ಬಾಗಿಲು ತೆಗೆದ ಯುವತಿ ಕೃತಿ ಕುಮಾರಿಯನ್ನು ತನ್ನ ಪ್ರೇಯಸಿ ಎಂದು ಭಾವಿಸಿ ಕತ್ತನ್ನು ಸೀಳಿ ಮನಸೋಇಚ್ಛೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣವು ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮಧ್ಯಪ್ರದೇಶದಲ್ಲಿ ತಲೆಮಾರಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Make your daughter strong. 😡Horrific Murder in Bengaluru PG: CCTV Captures Woman's Desperate Cries for Help.Kriti Kumari, a 24-year-old woman from Bihar, was brutally killedThe suspect, Abhishek, arrived at the PG looking for his ex-girlfriendpic.twitter.com/sbF9Y1GL6G
ಇದನ್ನೂ ಓದಿ:ಇಂಜಿನ್​ ಮಾತ್ರ ಬದಲಾಗಿದೆ ಬೋಗಿಗಳಲ್ಲ; ಸರಣಿ ಆರಂಭಕ್ಕೂ ಮುನ್ನ ನೂತನ ನಾಯಕ ಸೂರ್ಯಕುಮಾರ್​ ಹೇಳಿಕೆ ವೈರಲ್
ಕೊಲೆ ಆರೋಪಿ ಅಭಿಷೇಕ್​ ಮಧ್ಯಪ್ರದೇಶದ ಭೋಪಾಲ್​ ನಿವಾಸಿಯಾಗಿದ್ದು, ಮೃತ ಕೃತಿ ಕುಮಾರಿ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದನು. ಇಬ್ಬರೂ ಒಂದೇ ಪಿಜಿಯಲ್ಲಿ ಲಿವಿಂಗ್ ಟುಗೆದರ್ ರೀತಿಯಲ್ಲಿ ವಾಸವಾಗಿದ್ದರು. ಆದರೆ, ಕಳೆದ ಕೆಲವು ತಿಂಗಳ ಹಿಂದೆ ಅಭಿಷೇಕ್ ಕೆಲಸ ಬಿಟ್ಟು ಭೋಪಾಲ್‌ಗೆ ಹೋಗಿದ್ದನು. ಜೊತೆಗೆ, ಆಗಾಗ ಬೆಂಗಳೂರಿಗೆ ಬಂದು ಪ್ರೇಯಸಿಯನ್ನು ಭೇಟಿ ಮಾಡಿ ಹೋಗುತ್ತಿದ್ದನು.
ಯಾವುದೇ ಕೆಲಸ ಮಾಡದೇ ನಿರಿದ್ಯೋಗಿಯಾಗಿ ಅಲೆದಾಡುತ್ತಿದ್ದ ಅಭಿಷೇಕ್‌ಗೆ ಬೆಂಗಳೂರಿನಲ್ಲಿಯೇ ಕೆಲಸಕ್ಕೆ ಸೇರಿಕೊಳ್ಳುವಂತೆ ಪ್ರೇಯಸಿ ಹೇಳಿದ್ದಾಳೆ. ಆದರೆ, ಆತ ಕೆಲಸಕ್ಕೆ ಸೇರಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಕೆಲ ದಿನಗಳ ಬಳಿಕ ಈತ ಸುಳ್ಳು ಹೇಳಿರುವ ವಿಚಾರ ಪ್ರೇಯಸಿಗೆ ತಿಳಿದಿದ್ದು, ಆತನಿಂದ ಅಂತರವನ್ನು ಕಾಯ್ದುಕೊಂಡಿದ್ದಾಳೆ. ಬಳಿಕ ಕೃತಿ ಕುಮಾರಿ ವಾಸವಿದ್ದ ಪಿಜಿಗೆ ಶಿಫ್ಟ್​ ಆಗಿದ್ದಳು. ಇದರಿಂದ ಕುಪಿತಗೊಂಡ ಆರೋಪಿ ಜುಲೈ 23ರಂದು ಪ್ರೇಯಸಿಯನ್ನು ಕೊಲೆ ಮಾಡಲು ಪಿಜಿಗೆ ನುಗ್ಗಿದ್ದು, ಪ್ರೇಯಸಿಯ ಬದಲು ಕೃತಿ ಕುಮಾರಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − 5 =
Remember me
