ಕೋಟಾ:ಕುಟುಂಬದ ಸದಸ್ಯರು ವೆಂಟಿಲೇಟರ್​ ಪ್ಲಗ್ ತೆಗೆದು ಏರ್​ ಕೂಲರ್​ ಪ್ಲಗ್​ ಇನ್​ ಮಾಡಿದ ಪರಿಣಾಮ 40 ವರ್ಷದ ರೋಗಿಯೊಬ್ಬ ಸಾವಿಗೀಡಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ರೋಗಿಯು ಕರೊನಾ ಸೋಂಕಿನಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ಜೂನ್​ 13ರಂದು ಕೋಟಾದ ಮಹಾರಾವ್​ ಭೀಮ್​ ಸಿಂಗ್​ (ಎಂಬಿಎಸ್) ಆಸ್ಪತ್ರೆಗೆ ದಾಖಲಿಸಲಾಗಿದ್ದ ಅವರನ್ನು ಐಸಿಯುನಲ್ಲಿ ಇಡಲಾಗಿತ್ತು. ಆದರೆ, ವರದಿ ನಗೆಟಿವ್​ ಬಂದಿತ್ತು. ಆದರೂ, ಐಸಿಯು ವಾರ್ಡ್​ನಲ್ಲಿ ಮತ್ತೊಬ್ಬ ರೋಗಿಗೆ ಕರೊನಾ ಸೋಂಕು ಇದ್ದಿದ್ದರಿಂದ ರೋಗಿಯನ್ನು ಪ್ರತ್ಯೇಕ ವಾರ್ಡ್​ಗೆ ಜೂನ್ 15ರಂದು ಸ್ಥಳಾಂತರಿಸಲಾಗಿತ್ತು.ಇದನ್ನೂ ಓದಿ:ಡಿಸೆಂಬರ್​​ನಲ್ಲೇ ವಕ್ಕರಿಸಿದೆ ಕರೊನಾ…ಒಳಚರಂಡಿಯ ತ್ಯಾಜ್ಯದಲ್ಲಿ ಅಡಗಿ ಕುಳಿತಿತ್ತು !
ರೋಗಿಯು ಪ್ರತ್ಯೇಕ ವಾರ್ಡ್​ನಲ್ಲಿ ತುಂಬಾ ಸೆಕೆ ಇದ್ದುದ್ದರಿಂದ ಕುಟುಂಬದ ಸದಸ್ಯರು ಆತನಿಗಾಗಿ ಅದೇ ದಿನ ಏರ್​ ಕೂಲರ್ ಅನ್ನು ಕೊಂಡು ತಂದಿದ್ದರು. ಆದರೆ, ಕೂಲರ್​ ಪ್ಲಗ್​ ಅಳವಡಿಸಲು ಸಾಕೆಟ್​ ಹುಟುಕಾಡಿದ್ದಾರೆ. ಕೊನೆಗೂ ತಿಳಿಯದೇ ವೆಂಟಿಲೇಟರ್​ ಪ್ಲಗ್​ ತೆಗೆದು ಕೂಲರ್​ ಪ್ಲಗ್​ ಅಳವಡಿಸಿದ್ದಾರೆ. ಸುಮಾರು ಅರ್ಧ ಗಂಟೆ ವೆಂಟಿಲೇಟರ್​ ಆಫ್​ ಆಗಿದೆ.​ ಬಳಿಕ ರೋಗಿಯ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದನ್ನು ನೋಡಿ ಕುಟುಂಬದ ಸದಸ್ಯರು ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದಾರೆ. ಬಂದು ಪರೀಕ್ಷಿಸಿದಾದರೂ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.
ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ
ಘಟನೆ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ನವೀನ್​ ಸಕ್ಸೇನಾ, ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದ್ದು, ಶನಿವಾರ ವರದಿ ಸಲ್ಲಿಸಲಿದ್ದಾರೆ. ಪ್ರತ್ಯೇಕ ವಾರ್ಡ್​ನಲ್ಲಿದ್ದ ವೈದ್ಯಕೀಯ ಸಿಬ್ಬಂದಿ ವಿಚಾರಣೆಗೆ ಉತ್ತರಿಸಿದ್ದಾರೆ. ಆದರೆ, ಕುಟುಂಬದ ಸದಸ್ಯರು ಮಾತ್ರ ಉತ್ತರಿಸಿಲ್ಲ ಎಂದು ಆರೋಪಿಸಿದ್ದಾರೆ. ಇದರಲ್ಲಿ ಯಾರೇ ಹೊಣೆಯಾಗಿದ್ದರು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.ಇದನ್ನೂ ಓದಿ:ಒಂದೇ ತಿಂಗಳಲ್ಲಿ ಮೂರು ಮರ್ಯಾದೆ ಹತ್ಯೆ: ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟ ಯುವತಿಯರು
ಕೂಲರ್​ ಪ್ಲಗ್ ಅಳವಡಿಸಲು ಕುಟುಂಬದ ಸದಸ್ಯರು ಯಾವುದೇ ಅನುಮತಿಯನ್ನು ಪಡೆದಿಲ್ಲ. ರೋಗಿ ಸತ್ತಾಗ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಅವರು ಅಸಭ್ಯವಾಗಿ ವರ್ತಿಸಿದರು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಆಪಾದಿಸಿದೆ.(ಏಜೆನ್ಸೀಸ್​)
ಹಣ್ಣು, ತರಕಾರಿ ಸಾಗಿಸುತ್ತಿದ್ದ ಚಾಲಕನಿಗೂ ಕರೊನಾ, ರಾತ್ರೋರಾತ್ರಿ ಸೀಲ್​ಡೌನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 4 =
Remember me
