ನವದೆಹಲಿ/ಹೈದರಾಬಾದ್:ಭಾರತದ ಪ್ರಥಮ ದೇಶೀಯ ಕರೊನಾ ಲಸಿಕೆ ‘ಕೊವಾಕ್ಸಿನ್’, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) ಮಾನದಂಡಕ್ಕಿಂತ ಅಧಿಕ ಪರಿಣಾಮಕಾರಿಯಾಗಿದೆ. ಈ ಲಸಿಕೆ ಶೇಕಡ 60 ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಭಾನುವಾರ ಪ್ರಕಟಿಸಿದೆ. ಇದು ಕರೊನಾ ಚಿಕಿತ್ಸೆ ವಿಚಾರದಲ್ಲಿ ಆಶಾವಾದ ಮೂಡಿಸಿದೆ.
ಅಂಗೀಕಾರ ಪ್ರಕ್ರಿಯೆ ಮುಗಿದ ನಂತರ, 2021ರ ಮಧ್ಯಭಾಗದಲ್ಲಿ ಲಸಿಕೆ ಬಿಡುಗಡೆ ಮಾಡುವ ಸುಳಿವನ್ನು ಕಂಪನಿ ನೀಡಿದೆ. ತಾನು ಅಭಿವೃದ್ಧಿಪಡಿಸಿದ ಲಸಿಕೆ ಶೇಕಡ 95ರಷ್ಟು ಪರಿಣಾಮಕಾರಿ ಎಂದು ಅಮೆರಿಕದ ಫೈಜರ್ ಈಗಾಗಲೇ ಘೋಷಿಸಿದೆ. ಆದರೆ, ಭಾರತ್ ಬಯೋಟೆಕ್ ದೇಶೀಯವಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದು ಮಹತ್ವದ ವಿದ್ಯಮಾನವಾಗಿದೆ.
ಕನಿಷ್ಠ ಶೇಕಡ 50ರಷ್ಟು ಪರಿಣಾಮಕಾರಿಯಾದ ಲಸಿಕೆಯನ್ನು ಉಸಿರಾಟ ಸಂಬಂಧಿ ವ್ಯಾಧಿಗಳಿಗೆ ಬಳಸಬಹುದು ಎಂದು ಡಬ್ಲ್ಯುಎಚ್​ಒ, ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಯುಎಸ್​ಎಫ್​ಡಿಎ) ಮತ್ತು ಭಾರತದ ಕೇಂದ್ರೀಯ ಔಷಧಗಳ ಮಾನಕ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ) ಅಂಗೀಕರಿಸಿವೆ ಎಂದು ಭಾರತ್ ಬಯೋಟೆಕ್​ನ ಗುಣಮಟ್ಟ ವಿಭಾಗದ ಅಧ್ಯಕ್ಷ ಸಾಯಿ ಡಿ. ಪ್ರಸಾದ್ ಹೇಳಿದ್ದಾರೆ. ನಿಗದಿತ ಶೇಕಡ 60 ಪರಿಣಾಮಕಾರಿತ್ವ ಸಾಧಿಸಲಾಗಿದ್ದು ಅದಕ್ಕಿಂತ ಅಧಿಕ ಸಾಧಿಸುವ ಗುರಿ ಹೊಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಲಸಿಕೆ ಕನಿಷ್ಠ ಶೇಕಡ 50ರಷ್ಟು ಪರಿಣಾಮ ಬೀರುವುದು ಸ್ಪಷ್ಟವಾದರೆ ಅದನ್ನು ಚಿಕಿತ್ಸೆಗಾಗಿ ಅಂಗೀಕರಿಸಬಹುದು ಎನ್ನುವುದು ಡಬ್ಲ್ಯುಎಚ್​ಒ ಅಭಿಮತವಾಗಿದೆ. ಈ ಗಡಿಯನ್ನು ಕೊವ್ಯಾಕ್ಸಿನ್ ದಾಟಿರುವುದು ಭಾರತದಲ್ಲಿ ಆಶಾವಾದ ಹೆಚ್ಚಿಸಿದೆ. ದೇಶದಲ್ಲಿ ಕರೊನಾ ಹಾವಳಿ ಇನ್ನೂ ತೀವ್ರವಾಗಿ ಮುಂದುವರಿದಿರುವುದರ ನಡುವೆ ಈ ಫಲಿತಾಂಶ ಹೊರಬಿದ್ದಿರುವುದು ಮಹತ್ವ ಪಡೆದಿದೆ.
ಬಿಡುಗಡೆಗೆ ಡೆಡ್​ಲೈನ್:ಕೊನೆಯ ಹಂತದ ಪರೀಕ್ಷೆಗಳ ಸುರಕ್ಷತಾ ದತ್ತಾಂಶ, ಪರಿಣಾಮಕಾರಿತ್ವ ಮೊದಲಾದವು ಲಭ್ಯವಾಗಿ ಸಂಬಂಧಪಟ್ಟ ಪ್ರಾಧಿಕಾರದ ಸಮ್ಮತಿ ದೊರೆತಾದ ಮೇಲೆ 2021ರ ಎರಡನೇ ತ್ರೖೆಮಾಸಿಕದಲ್ಲಿ ಲಸಿಕೆಯನ್ನು ಬಿಡುಗಡೆ ಗೊಳಿಸುವುದು ಬಯೋಟೆಕ್ ಯೋಜನೆಯಾಗಿದೆ.
91 ಲಕ್ಷದತ್ತ ಸೋಂಕಿತರುಶನಿವಾರದಿಂದೀಚೆಗೆ 45,209 ಹೊಸ ಪ್ರಕರಣಗಳು ವರದಿ ಅಗುವುದರೊಂದಿಗೆ ಭಾರತದ ಕರೊನಾ ಸೋಂಕಿತರ ಸಂಖ್ಯೆ 91 ಲಕ್ಷಕ್ಕೆ ಸಮೀಪಿಸಿದೆ. ಸೋಂಕಿಗೆ ದೇಶದಲ್ಲಿ ಇದುವರೆಗೆ 1,32,726 ಜನರು ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
25 ಕೇಂದ್ರಗಳಲ್ಲಿ ಪರೀಕ್ಷೆಭಾರತ್ ಬಯೋಟೆಕ್ ನವೆಂಬರ್​ನಲ್ಲಿ 3ನೇ ಹಂತದ ಪರೀಕ್ಷೆ ಆರಂಭಿಸಿದೆ. 25 ಕೇಂದ್ರಗಳಲ್ಲಿ 26,000 ಸ್ವಯಂಸೇವಕರು ಪಾಲ್ಗೊಂಡಿದ್ದಾರೆ.
ರಾಜ್ಯಗಳಿಗೆ ಕೇಂದ್ರ ತಂಡ
ಕೋವಿಡ್ ಸೋಂಕು ವ್ಯಾಪಕವಾಗುತ್ತಿರುವುದನ್ನು ತಡೆಯುವಲ್ಲಿ ನೆರವಾಗಲು ಕೇಂದ್ರ ಸರ್ಕಾರ ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ ಮತ್ತು ಛತ್ತೀಸ್​ಗಢ ರಾಜ್ಯಗಳಿಗೆ ಉನ್ನತ ಮಟ್ಟದ ತಂಡಗಳನ್ನು ಕಳಿಸಿದೆ.
ಅಡ್ಡ ಪರಿಣಾಮ
ಕೊವಾಕ್ಸಿನ್ ಮೊದಲ ಹಂತದ ಪರೀಕ್ಷೆಯಲ್ಲಿ ಅಡ್ಡ ಪರಿಣಾಮ ಉಂಟಾಗಿತ್ತು ಎನ್ನುವುದನ್ನು ಭಾರತ್ ಬಯೋಟೆಕ್ ಬಹಿರಂಗ ಪಡಿಸಿದೆ. ಅದನ್ನು ಭಾರತೀಯ ಔಷಧಗಳ ಮಹಾ ನಿಯಂತ್ರಕರಿಗೆ (ಡಿಸಿಜಿಐ) 24 ಗಂಟೆಯೊಳಗೆ ವರದಿ ಮಾಡಿದ್ದಾಗಿಯೂ ಕಂಪನಿ ಸ್ಪಷ್ಟಪಡಿಸಿದೆ. ಆದರೆ, ಈ ಅಡ್ಡ ಪರಿಣಾಮವು ಲಸಿಕೆ ಸಂಬಂಧಪಟ್ಟಿದ್ದಲ್ಲ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದೂ ಸಂಸ್ಥೆ ತಿಳಿಸಿದೆ. ಮಾನವರ ಮೇಲಿನ ಪ್ರಯೋಗಕ್ಕೆ (ಕ್ಲಿನಿಕಲ್ ಟ್ರಯಲ್) ಒಳಗಾದ ಸ್ವಯಂಸೇವಕನೊಬ್ಬ ಅಸ್ವಸ್ಥನಾಗಿ ಆಗಸ್ಟ್​ನಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಪರೀಕ್ಷೆಯನ್ನು ಸ್ಥಗಿತಗೊಳಿಸಿರಲಿಲ್ಲ. ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಎರಡನೇ ಹಾಗೂ ಮೂರನೇ ಹಂತದ ಪರೀಕ್ಷೆಗೆ ಅನುಮತಿ ಪಡೆಯಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
