ತಿರುವನಂತಪುರ:ಕೋಳಿಕ್ಕೋಡ್​ನಲ್ಲಿ ದುರಂತಕ್ಕೀಡಾದ ಏರ್​ ಇಂಡಿಯಾ ವಿಮಾನ ಕರೊನಾ ಸಂಕಷ್ಟದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರ ನ್ನು ಮರಳಿ ತಾಯ್ನೆಲಕ್ಕೆ ಕರೆತರುವ ಕಾರ್ಯಾಚರಣೆಯ ‘ವಂದೇ ಭಾರತ’ ವಿಮಾನವಾಗಿತ್ತು.
ಇದರಲ್ಲಿ 10 ಹಸುಗೂಸುಗಳು ಸೇರಿ 174 ಪ್ರಯಾಣಿಕರು, ಇಬ್ಬರು ಪೈಲಟ್​ಗಳು ಸೇರಿ 6 ಸಿಬ್ಬಂದಿ ಇದ್ದರು. ದುರಂತ ಸಂಭವಿಸಿದಾಗ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳದಿರುವುದು ಸಾವು ನೋವಿನ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಏರ್​ ಇಂಡಿಯಾ ಎಕ್ಸ್​ಪ್ರೆಸ್​ನ ಬೋಯಿಂಗ್​ 737 ಮಾದರಿ ವಿಮಾನ ಸಂಜೆ 7.40ರಲ್ಲಿ ಇಳಿಯುವ ಪ್ರಯತ್ನದಲ್ಲಿತ್ತು. ರನ್​ ವೇ ಗೊತ್ತಾಗದೇ 35 ಅಡಿಗೂ ಹೆಚ್ಚು ಆಳದ ಕಮರಿಗೆ ಬಿದ್ದಿದೆ. ಹೀಗಾಗಿ ವಿಮಾನ ಎರಡು ತಂಡಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಹಲವರನ್ನು ರಕ್ಷಿಸಲಾಗಿದೆ.
ಕೋಳಿಕ್ಕೋಡ್​ ವಿಮಾನ ಬೆಟ್ಟದ ಮೇಲಿನ ವಿಮಾನ ನಿಲ್ದಾಣವಾಗಿದೆ. ಇದನ್ನು ಟೇಬಲ್​ ಟಾಪ್​ ವಿಮಾಣ ನಿಲ್ದಾಣ ಎಂದು ಕರೆಯಲಾಗುತ್ತದೆ. ಮಂಗಳೂರು ವಿಮಾಣ ನಿಲ್ದಾಣ ಕೂಡ ಟೇಬಲ್​ ಟಾಪ್​ ವಿಮಾನ ನಿಲ್ದಾಣವಾಗಿದೆ. ಇಂಥ ವಿಮಾನ ನಿಲ್ದಾಣಗಳಲ್ಲಿ ಅದರಲ್ಲೂ ರಾತ್ರಿ ವೇಳೆ ರನ್​ವೇಯನ್ನು ಗುರುತಿಸುವುದು ಸವಾಲಿನ ಕೆಲಸವೇ ಸರಿ ಏಕೆಂದರೆ, ರನ್​ವೇ ಬೆಟ್ಟದ ಕೆಳಗಿರುವಂತೆಯೇ ದೃಷ್ಟಿಭ್ರಮೆಯನ್ನು ಉಂಟು ಮಾಡುತ್ತವೆ (ಆಪ್ಟಿಕಲ್​ ಇಲ್ಯೂಷನ್​).ಕೋಳಿಕ್ಕೋಡ್​ ಈ ದುರಂತ ಹತ್ತು ವರ್ಷಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದ ವಿಮಾನ ದುರಂತದ ನೆನಪನ್ನು ಮರುಕಳಿಸಿದೆ.
ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seven =
Remember me
