ನವದೆಹಲಿ: ಭಾರತ ಮತ್ತು ನೇಪಾಳ ನಡುವಿನ ಸಂಬಂಧ ಹಳಸಿದೆ. ಅಲ್ಲಿನ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು, ಚೀನಾ ಮಾತು ಕೇಳಿಕಂಡು ಭಾರತದ ವಿರುದ್ಧ ತಿರುಗಿಬಿದ್ದಿದ್ದು ಗೊತ್ತೇ ಇದೆ.ಹೀಗಿರುವಾಗ ಇಂದು ಅವರು ಪ್ರಧಾನನಿ ನರೇಂದ್ರ ಮೋದಿಯವರಿಗೆ ಫೋನ್​ ಕರೆ ಮಾಡಿದ್ದಾರೆ.
ಭಾರತವನ್ನು ಪೂರ್ತಿಯಾಗಿ ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂಬುದು ನೇಪಾಳಕ್ಕೆ ಗೊತ್ತಿರುವ ವಿಚಾರ. ನೇಪಾಳದಲ್ಲೂ ಅಷ್ಟೇ ಪ್ರಧಾನಿ ಸೇರಿ ಅವರ ಬೆಂಬಲಿಗರೊಂದಿಷ್ಟು ಜನ ಮಾತ್ರ ಭಾರತದ ವಿರುದ್ಧ ತಿರುಗಿಬಿದ್ದಿದ್ದಾರೆ ಹೊರತು, ಎಲ್ಲರೂ ಅಲ್ಲ. ಓಲಿ ಅವರ ಪಕ್ಷದಲ್ಲೇ ಇರುವ ಕೆಲವರು ಪ್ರಧಾನಿಯ ನಡೆಯನ್ನು ಟೀಕಿಸುತ್ತಿದ್ದಾರೆ.
ಹೀಗಿರುವಾಗ ಇಂದು ಕೆ.ಪಿ.ಶರ್ಮಾ ಓಲಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ, ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ್ದಾರೆ.ಇದನ್ನೂ ಓದಿ:ಕಾರ್ಖಾನೆಯಲ್ಲಿ ಉತ್ಪಾದನೆಯಾಯ್ತು ರಷ್ಯಾದ ಕೋವಿಡ್​ ಲಸಿಕೆ ಸ್ಪುಟ್ನಿಕ್​-ವಿ; ವೈದ್ಯರು, ಶಿಕ್ಷಕರಿಗೆ ಮೊದಲ ಚುಚ್ಚುಮದ್ದು..!
ಹಾಗೇ ಟ್ವೀಟ್​ ಕೂಡ ಮಾಡಿರುವ ಕೆ.ಪಿ.ಶರ್ಮಾ ಓಲಿ ಅವರು,74ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಭಾರತದ ಜನರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಭಾರತ ಇನ್ನಷ್ಟು ಅಭಿವೃದ್ಧಿಯಾಗಲಿ, ಸಂಪದ್ಭರಿತವಾಗಲಿ ಎಂದು ಹಾರೈಸಿದ್ದಾರೆ.
ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಹಳಸಿದ ನಂತರ ನೇಪಾಳದ ಪ್ರಧಾನಮಂತ್ರಿ ಮಾಡುತ್ತಿರುವ ಮೊದಲ ಕರೆ ಇದಾಗಿದೆ.ಭಾರತದ ಭೂಪ್ರದೇಶವನ್ನೊಳಗೊಂಡ ಹೊಸ ನಕ್ಷೆಯನ್ನು ನೇಪಾಳ ಬಿಡುಗಡೆ ಮಾಡಿದ ನಂತರ ಎರಡೂ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಹಾಗೇ ಆಗಸ್ಟ್​ 17ರಂದು ಈ ಎರಡು ದೇಶಗಳ ನಡುವೆ ಮೇಲ್ವಿಚಾರಣಾ ಕಾರ್ಯವಿಧಾನಕ್ಕೆ ಸಂಬಂಧಪಟ್ಟ ಮಾತುಕತೆ ನಡೆಯಲಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್​)
ಶುಕವನದಲ್ಲಿ ಸ್ವಾತಂತ್ರ್ಯ ದಿನಾಚರಣೆ; ಧ್ವಜಾರೋಹಣ ಮಾಡಿ ವಂದನೆ ಸಲ್ಲಿಸಿದ ‘ಗಿಳಿ’ಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 7 =
Remember me
