ತೆಲಂಗಾಣ:ಭಾರತದಲ್ಲಿ ಸೋನಿಯಾ ಗಾಂಧಿ, ನರೇಂದ್ರ ಮೋದಿ, ಅಮಿತಾಬ್​ ಬಚ್ಚನ್​ ಸೇರಿ ಅನೇಕ ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆ ನಿರ್ಮಿಸಿಕೊಂಡು ಅದನ್ನೇ ದೇವರೆಂದು ಪೂಜಿಸುವ ಜನರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ನನ್ನು ತನ್ನ ದೇವನೆಂದು ನಂಬಿ ಅವನ ಪ್ರತಿಮೆಗೇ ಪ್ರತಿ ದಿನ ಪೂಜೆ ಮಾಡುತ್ತಿದ್ದಾನೆ.
ತೆಲಂಗಾಣದ ಒಂದು ಪುಟ್ಟ ಹಳ್ಳಿಯಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿರುವ ಕೃಷ್ಣ ಹೆಸರಿನ ವ್ಯಕ್ತಿಗೆ ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಡೊನಾಲ್ಡ್​ ಟ್ರಂಪ್​ ತನ್ನ ಕನಸಿನಲ್ಲಿ ಬಂದಿದ್ದನಂತೆ. ಅಂದಿನಿಂದ ಆತ ಟ್ರಂಪ್​ನನ್ನೇ ದೇವರು ಎಂದು ನಂಬಲಾರಂಭಿಸಿದನಂತೆ.
ಜನರೆಲ್ಲ ಶಿವನನ್ನು ನಂಬುವಂತೆ ನಾನು ಟ್ರಂಪ್​ನನ್ನು ನಂಬುತ್ತೇನೆ. ನಾನು ದೇವರಲ್ಲಿ ಏನೂ ಬೇಡಿಕೊಳ್ಳುವುದಿಲ್ಲ ಆದರೆ ಟ್ರಂಪ್​ ಬಳಿ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ ಟ್ರಂಪ್​ ಭಕ್ತ ಕೃಷ್ಣ.
ಕೃಷ್ಣಗೆ ಟ್ರಂಪ್​ನ ಬಗ್ಗೆ ಅದೆಷ್ಟು ಭಕ್ತಿ ಇದೆ ಎಂದರೆ ಆತ ತನ್ನ ಮನೆಯ ಜಾಗದಲ್ಲಿ ಟ್ರಂಪ್​ನ ಪ್ರತಿಮೆಯೊಂದನ್ನು ನಿರ್ಮಿಸಿಕೊಂಡು ಪ್ರತಿನಿತ್ಯ ಅದಕ್ಕೆ ಪೂಜೆ ಮಾಡುತ್ತಾನೆ. ಆಗಾಗ ಹಾಲಿನ ಅಭಿಷೇಕವೂ ನೆರವೇರುತ್ತದೆ. ಈ ಪ್ರತಿಮೆ ನಿರ್ಮಾಣ ಮಾಡಿದಾಗಿನಿಂದ ಆತನನ್ನು ಊರಿನ ಜನರು ಟ್ರಂಪ್​ ಕೃಷ್ಣ ಎಂದು ಕರೆಯಲಾರಂಭಿಸಿದ್ದು, ಆತನ ಮನೆಯನ್ನು ಟ್ರಂಪ್​ ಮನೆ ಎಂದೇ ಕರೆಯಲಾರಂಭಿಸಿದ್ದಾರೆ.
ಕೃಷ್ಣ ಈ ರೀತಿಯಲ್ಲಿ ಟ್ರಂಪ್​ನ ಆರಾಧನೆ ಮಾಡುತ್ತಿರುವುದರಿಂದಾಗಿ ನಮಗೆಲ್ಲ ಅವಮಾನವಾಗುತ್ತಿದೆ ಎಂದು ಅವನ ಕುಟುಂಬಸ್ಥರೆಲ್ಲ ಆತನನ್ನು ದೂರು ಮಾಡಿದ್ದಾರೆ. ಆದರೆ ಕೃಷ್ಣ ಮಾತ್ರ ಕುಟುಂಬದವರಿಗೆ ದೇವರು ಎಷ್ಟು ಮುಖ್ಯವೋ ನನಗೆ ಟ್ರಂಪ್​ ಅಷ್ಟೇ ಮುಖ್ಯ ಎಂದು ಒಬ್ಬಂಟಿಗರಾಗೇ ಉಳಿದಿದ್ದಾರೆ. ಮನೆಯ ಗೋಡೆಗಳೆಲ್ಲೆಲ್ಲ ಟ್ರಂಪ್​ನ ಹೆಸರನ್ನು ಬರೆದುಕೊಂಡಿದ್ದಾರೆ ಎನ್ನಲಾಗಿದೆ.
ಭಾರತಕ್ಕೆ ಫೆ.24 ಮತ್ತು 25ರಂದು ಡೊನಾಲ್ಡ್​ ಟ್ರಂಪ್​ ಆಗಮಿಸಲಿದ್ದು ಅಂದು ತನಗೆ ಟ್ರಂಪ್​ನನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಿ ಎಂದು ಕೃಷ್ಣ ಕೇಂದ್ರ ಸರ್ಕಾರದ ಬಳಿ ಕೇಳಿಕೊಂಡಿದ್ದಾನೆ, ನಾನು ಟ್ರಂಪ್​ ಭಕ್ತ, ಪ್ರತಿ ಶುಕ್ರವಾರ ಟ್ರಂಪ್​ನ ಒಳಿತಿಗಾಗಿ ಉಪವಾಸ ಮಾಡುತ್ತೇನೆ. ಸರ್ಕಾರ ನನಗೆ ಟ್ರಂಪ್​ನ ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆತ ಕೇಳಿದ್ದಾನೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 4 =
Remember me
