ಅಮರಾವತಿ:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವ ಆಂಧ್ರದ ಮೇಲೆ ಬಿದ್ದಿದ್ದು, ಕರಾವಳಿ ಜಿಲ್ಲೆಗಳು ತತ್ತರಿಸಿ ಹೋಗಿವೆ. ಮಳೆ ಅಬ್ಬರಕ್ಕೆ ಕೃಷ್ಣಾ ನದಿ ಉಕ್ಕಿಹರಿಯುತ್ತಿದೆ. ನದಿ ಅಂಚಿನ ಗ್ರಾಮಗಳು ಪ್ರವಾಹದ ನೀರಿನಲ್ಲಿ ಸಂಪೂರ್ಣ ಜಲಾವೃತವಾಗಿವೆ. ರಾಯಪುಡಿಯ ಪೆಡಲಂಕಾದಲ್ಲಿ ಸುಮಾರು 300 ಹಾಲು ಕೊಡುವ ಎಮ್ಮೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ.
ಇದನ್ನೂ ಓದಿ:Success Story: ‘ಮಿಲಿಯನೇರ್ ಆದೆ.. ಆದ್ರೆ ಆ ಹೊಡೆತಕ್ಕೆ ಎಲ್ಲ ಕಳೆದುಕೊಂಡೆ’: ಜನಪ್ರಿಯ ಮ್ಯಾಟ್ರಿಮೋನಿಯಲ್ ಸಂಸ್ಥಾಪಕನ ಕಥೆ ಕೇಳಿದ್ರೆ ಬೆರಗಾಗ್ತೀರಾ!
ಇಡೀ ಗ್ರಾಮ ನಡುಗಡ್ಡೆಯಂತಾಗಿದ್ದು, 300 ಗ್ರಾಮಸ್ಥರನ್ನು ಸಮೀಪದ ಎನ್‌ಟಿಆರ್ ಜಿಲ್ಲೆ ಇಬ್ರಾಹಿಂಪಟ್ಟಣದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 70 ಮಂದಿ ಗ್ರಾಮದಲ್ಲೇ ಸಿಲುಕಿಕೊಂಡಿದ್ದಾರೆ. ಅವರೆಲ್ಲ ಮನೆ, ಮರಗಳ ಮೇಲೇರಿ ಸಹಾಯಕ್ಕಾಗಿ ವಿನಂತಿಸುತ್ತಿದ್ದಾರೆ. ಹೆಲಿಕಾಪ್ಟರ್ ಮೂಲಕ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಕೃಷ್ಣಾ ನದಿಯಲ್ಲಿ ಹೆಚ್ಚುತ್ತಿರುವ ಪ್ರವಾಹದಿಂದಾಗಿ ತುಳ್ಳೂರ್ಮ ಮಂಡಲದ ಹರಿಶ್ಚಂದ್ರಾಪುರ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ನದಿ ನೀರು ಗ್ರಾಮಕ್ಕೆ ನೀರು ನುಗ್ಗಿದೆ.
ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ದೌರ್ಜನ್ಯ ಪ್ರಕರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 4 =
Remember me
