ಹೈದರಾಬಾದ್​:ನಟಿ ಕೃತಿ ಶೆಟ್ಟಿ ಸ್ಟಾರ್ ಹೀರೋ ಮಗನಿಂದ ಕಿರುಕುಳ ಎದುರಿಸುತ್ತಿದ್ದಾರೆ. ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ಎಂದು ಚಿತ್ರಹಿಂಸೆ ಮಾಡುತ್ತಿದ್ದಾರಂತೆ ಎನ್ನುವ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಕೃತಿಗೆ ಸ್ಟಾರ್ ಹೀರೋ ಮಗನಿಂದ ಹೊಸ ಸಮಸ್ಯೆ ಎದುರಾಗಿದೆ. ಕೃತಿ ಶೆಟ್ಟಿ ಜತೆ ಸ್ನೇಹ ಬೆಳೆಸಲು ಅವರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಕೃತಿಗೆ ಅದು ಇಷ್ಟವಿಲ್ಲ. ಪ್ರತಿ ಕಾರ್ಯಕ್ರಮದಲ್ಲೂ ಕೃತಿ ಶೆಟ್ಟಿ ಜತೆಯೇ ಓಡಾಡಿ ತೊಂದರೆ ಕೊಡುತ್ತಿದ್ದಾರೆ. ವ್ಯಕ್ತಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಕೃತಿ ಶೆಟ್ಟಿ ಬರ್ತ್‌ಡೇ ಪಾರ್ಟಿಗೆ ಬರುವಂತೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:ನವಿಲು ಮಾರಣಾಂತಿಕ ದಾಳಿ ಮಾಡುತ್ತಿದೆ ಎಂದು ಆರೋಪ ಮಾಡಿದ ಮಹಿಳೆ!
ಇತ್ತೀಚೆಗಷ್ಟೆ ಕೃತಿ ಶೆಟ್ಟಿಗೆ ಫೋನ್ ಮಾಡಿ ಶೂಟಿಂಗ್ ನಿಲ್ಲಿಸಿ ಬರುವಂತೆ ಒತ್ತಾಯ ಮಾಡಿದ್ದರಂತೆ. ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ಪಾರ್ಟಿಗೆ ಬರುವಂತೆ ಚಿತ್ರಹಿಂಸೆ ನೀಡಿದ್ದರಂತೆ. ಈ ಬಗ್ಗೆ ನಟಿ ಕೃತಿ ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಉಪ್ಪೇನ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಕೃತಿ ಶೆಟ್ಟಿ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. ಆದರೆ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತಿವೆ. ಆದರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯುತ್ತಿದ್ದಾರೆ.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ತಾಯಿ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 2 =
Remember me
