ಕೊಚ್ಚಿ:ಬಸ್​ ಪ್ರಯಾಣದ ವೇಳೆ ಯುವ ಪ್ರಯಾಣಿಕನೊಬ್ಬನ ಮೇಲೆ ಹಲ್ಲೆ ಮಾಡಿ, ಅಶ್ಲೀಲ ಪದಗಳಿಂದ ನಿಂದಿಸಿದ ವೆಲ್ಲರಾಡ ಡಿಪೋವಿನ ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್​ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಂಡಕ್ಟರ್​ನನ್ನು ಸುರೇಶ್​ ಕುಮಾರ್​ (42) ಎಂದು ಗುರುತಿಸಲಾಗಿದೆ. ಬಲರಾಮಪುರ ಮೂಲದ ಸಂತ್ರಸ್ತ ಪ್ರಯಾಣಿಕ ಹೃತಿಕ್​ ಕೃಷ್ಣ (23) ತಿರುವನಂತಪುರದಿಂದ ವೆಲ್ಲರಾಡಗೆ ತೆರಳುತ್ತಿದ್ದ. ಆತನ ಜತೆ ಮಹಿಳಾ ಸಂಬಂಧಿಕರೊಬ್ಬರು ಇದ್ದರು. ಇಬ್ಬರು ಜತೆಯಲ್ಲೇ ಕುಳಿತು ಪ್ರಯಾಣ ಮಾಡುತ್ತಿದ್ದರು. ಇದು ಕಂಡಕ್ಟರ್​ಗೆ ಇಷ್ಟವಾಗಲಿಲ್ಲ. ಹೀಗಾಗಿ ಮಹಿಳೆಯಿಂದ ದೂರ ಕುಳಿತುಕೊಳ್ಳುವಂತೆ ಯುವಕನಿಗೆ ಒತ್ತಾಯಿಸಿದರು. ಆದರೆ, ಯುವಕ ಒಪ್ಪಲಿಲ್ಲ.
ಬಸ್​ ಕಟ್ಟಕ್ಕಾಡ ಡಿಪೋಗೆ ತಲುಪುತ್ತಿದ್ದಂತೆ ಮತ್ತೆ ಯುವಕನ ಬಳಿ ಬಂದ ಕಂಡಕ್ಟರ್ ಅಶ್ಲೀಲ ಪದಗಳಿಂದ ನಿಂದಿಸಲು ಶುರು ಮಾಡುತ್ತಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗುತ್ತದೆ. ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಉದ್ರಿಕ್ತ ಕಂಡಕ್ಟರ್​ ಟಿಕೆಟ್​ ಮೆಶಿನ್​ನಿಂದಲೇ​ ಯುವಕನ ಮೇಲೆ ಹಲ್ಲೆ ಮಾಡುತ್ತಾನೆ. ಅಲ್ಲದೆ, ಆತನನ್ನು ದೂರ ನೂಕುತ್ತಾನೆ.​
ಇದನ್ನೂ ಓದಿ:ಪ್ರಧಾನ ಕಾರ್ಯದರ್ಶಿ ಪಟ್ಟದಿಂದ ಸಿ.ಟಿ. ರವಿ ಕೈ ಬಿಟ್ಟದ್ದು ಯಾಕೆ? ರಾಜ್ಯಾಧ್ಯಕ್ಷ ಸ್ಥಾನ ಸಿಗೋದು ಪಕ್ಕಾನಾ?
ಇದಾದ ಬಳಿಕ ಕಂಡಕ್ಟರ್​ ಪೊಲೀಸರನ್ನು ಕರೆಸಿ ತನ್ನ ಮೇಲೆ ಯುವಕ ಹಲ್ಲೇ ಮಾಡಲು ಯತ್ನಿಸಿದ ಎಂದು ಸುಳ್ಳು ದೂರು ನೀಡಲು ಯತ್ನಿಸುತ್ತಾನೆ. ಆದರೆ, ಬಸ್​ನಲ್ಲಿದ್ದ ಇತರೆ ಪ್ರಯಾಣಿಕರು ಕಂಡಕ್ಟರ್​ ವರ್ತನೆಯನ್ನು ವಿವರಿಸುತ್ತಾರೆ. ಬಳಿಕ ಕಂಡಕ್ಟರ್​ನನ್ನೇ ಪೊಲೀಸರು ಬಂಧಿಸುತ್ತಾರೆ. ಈ ಘಟನೆಯನ್ನು ಸಹ ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಜಾಲತಾಲದಲ್ಲೂ ಕಂಡಕ್ಟರ್​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಗಾಯಗೊಂಡಿದ್ದ ಯುವಕನ್ನು ಸ್ಥಳೀಯರು ಕಟ್ಟಕ್ಕಾಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ, ಕಂಡಕ್ಟರ್​ ವಿರುದ್ಧವೂ ದೂರು ನೀಡಿದ್ದಾರೆ. ಪೊಲೀಸರು ಹೃತಿಕ್​ ಹೇಳಿಕೆಯನ್ನು ಪಡೆದು ಕಂಡಕ್ಟರ್​ ವಿರುದ್ಧ ಪ್ರಕರಣ ದಾಖಲಿಸಿದರು. ಆದರೆ, ಅದೇ ದಿನ ಜಾಮೀನಿನ ಮೇಲೆ ಕಂಡಕ್ಟರ್​ನನ್ನು ಬಿಟ್ಟು ಕಳುಹಿಸಲಾಗಿದೆ.
ಸುರೇಶ್ ಕುಮಾರ್ ಅವರು ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಇತಿಹಾಸವನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಹಿರಂಗಪಡಿಸಿದ್ದು, ಅವರ ವಿರುದ್ಧ ಈ ಹಿಂದೆಯೂ ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುವಂತೆ ಒತ್ತಾಯ! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಲತಾ ರಾವ್​

ಟ್ವಿಟರ್​ನ ಲೋಗೊ ಬದಲಾದ ಮೇಲೆ ಈತನಿಗೆ ನಿದ್ದೆಯೇ ಇಲ್ವಂತೆ! ಅಸಲಿ ಕಾರಣ ಏನಂದ್ರೆ…

ತಮ್ಮನ ಸಾವಿನಿಂದ ಮನನೊಂದ ಯುವತಿ ನೀರಿನ ಟ್ಯಾಂಕ್​ಗೆ ಹಾರಿ ಪ್ರಾಣ ಬಿಟ್ಟಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
