ಹೈದರಾಬಾದ್​:ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್​ಎಸ್​, ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಹೈದರಾಬಾದಿನ ಜುಬಿಲಿ ಹಿಲ್ಸ್​ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಅಜರುದ್ದೀನ್​, ಅವರೊಂದಿಗೆ ಆಟವಾಡಿ ಆದರೆ, ಬಿಆರ್​ಎಸ್​ಗೆ ಮತ ಹಾಕಿ ಎಂದು ಸಚಿವ ಕೆ.ಟಿ. ರಾಮರಾವ್​ ಹೇಳಿದ್ದಾರೆ.
ಜುಬಿಲಿ ಹಿಲ್ಸ್ ಕ್ಷೇತ್ರದ ಬಿಆರ್​ಎಸ್​​ ಶಾಸಕ ಮಗಂತಿ ಗೋಪಿನಾಥ್​ ಅವರ ಪರ ಮತಯಾಚಿಸಿ ಮಾತನಾಡಿದ ಕೆಟಿಆರ್ ಚುನಾವಣೆಗೂ ಮುನ್ನ ಅವರು ಇಲ್ಲಿ ಎಲ್ಲಿಯಾದರೂ ಕಾಣಿಡಿಕೊಂಡಿದ್ದರ ಎಂದು ಪ್ರಶ್ನಿಸಿದ್ದಾರೆ.
Make children Play cricket with Congress candidate Azharuddin if he comes but vote for BRS candidate Gopinath – KTREven I am Azharuddin fan, he is great cricketer but not a great politicianBig sport stars and cinema stars won’t get your work doneWas Azharuddin ever seen in…pic.twitter.com/fS1gg1uXAJ
ಇದನ್ನೂ ಓದಿ:ಒಳ್ಳೆಯ ಕೆಲಸಗಳಿಗಾಗಿ ಭಿಕ್ಷೆ ಬೇಡಲು ಎಂದಿಗೂ ಹಿಂಜರಿಯುವುದಿಲ್ಲ: ಮೋಹನ್ ಭಾಗವತ್
ಅಜರುದ್ದೀನ್​ ಮತಯಾಚಿಸಿ ನಿಮ್ಮ ಮನೆ ಬಳಿ ಬಂದಾಗ ಅವರ ಜತೆ ನಿಮ್ಮ ಮಕ್ಕಳನ್ನು ಕ್ರಿಕೆಟ್​ ಆಡಲು ಬಿಡಿ. ಆದರೆ, ದಯವಿಟ್ಟು ನಿಮ್ಮ ಮತವನ್ನು ಗೋಪಿನಾಥ್​ಗೆ ಹಾಕಿ. ಚುನಾವಣೆ ಮುಗಿಯುತ್ತಿದ್ದಂತೆ ಅಜರುದ್ದೀನ್​ ಕ್ಷೇತ್ರದಿಂದ ಕಣ್ಮರೆಯಾಗುತ್ತಾರೆ. ಇಲ್ಲಿನ ಕಾಲೋನಿಗಳ ಹೆಸರು ಅಥವಾ ಕ್ಷೇತ್ರಗಳ ಸಮಸ್ಯೆ ಬಗ್ಗೆ ಅವರಿಗೆ ಕೊಂಚವಾದರೂ ಅರಿವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರು ಬಡವರಾಗಿಯೇ ಉಳಿದಿರುವುದಕ್ಕೆ ಮುಖ್ಯ ಕಾರಣ ಎಂದರೆ ಕಾಂಗ್ರೆಸ್​ ಪಕ್ಷ. ಏಕೆಂದರೆ ಅವರಿಗೆ 11 ಅವಕಾಶಗಳನ್ನು ನೀಡಲಾಗಿತ್ತು. ಆದರೆ, ಕಾಂಗ್ರೆಸ್​ ಪಕ್ಷ ಕೆಲಸಗಳನ್ನು ಮಾಡುವ ಬದಲು ಜನರ ನಂಬಿಕೆಗಳಿಗೆ ದ್ರೋಹ ಎಸಗಿದೆ. ಕೆಸಿಆರ್ ನೇತೃತ್ವದಲ್ಲಿ ಬಿಆರ್​ಎಸ್​ ಪಕ್ಷ ತೆಲಂಗಾಣದಲ್ಲಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಚಿತ್ರಣ ಬದಲಾಗಿದ್ದು, ಜನರು ಇದನ್ನು ನೋಡಿಯಾದರೂ ನಮಗೆ ಮತ ಹಾಕಿ ಎಂದು ಕೆಟಿಆರ್​ ವಿನಂತಿಸಿದ್ದಾರೆ.
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂದಬರು ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 119 ಸದಸ್ಯಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + seven =
Remember me
