ನವದೆಹಲಿ:ಸಾಕಿದ ನಾಯಿ ಸತ್ತಾಗ ಅದರ ಅಸ್ಥಿಯನ್ನು ಗಂಗಾ ನದಿಯಲ್ಲೇ ಬಿಡಬೇಕು ಎಂದು ದೂರದ ನ್ಯೂಜಿಲ್ಯಾಂಡ್​ನಿಂದ ಭಾರತಕ್ಕೆ ವ್ಯಕ್ತಿಯೊಬ್ಬ ಬಂದಿದ್ದಾನೆ.
ಬಿಹಾರದ ಪೂರ್ಣಿಯಾ ಜಿಲ್ಲೆಯವರಾದ ಪ್ರಮೋದ್​ ಕುಮಾರ್​ ಕಳೆದ 40 ವರ್ಷಗಳಿಂದ ನ್ಯೂಜಿಲ್ಯಾಂಡ್​ನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಳೆದ 10 ವರ್ಷಗಳ ಹಿಂದೆ ನಾಯಿಯೊಂದನ್ನು ತಂದು ಅದಕ್ಕೆ ಲೈಕಾನ್​ ಎಂಬ ಹೆಸರಿಟ್ಟಿದ್ದಾರೆ. 10 ವರ್ಷಗಳಿಂದ ಮನೆ ಮಗನಂತಿದ್ದ ಲೈಕಾನ್​ ಇತ್ತೀಚೆಗೆ ಮೃತನಾಗಿದ್ದಾನೆ. ಪ್ರೀತಿಯಿಂದ ಸಾಕಿದ ನಾಯಿ ಮೃತ ಪಟ್ಟಿದ್ದರಿಂದ ನೋವಿಗೀಡಾಗ ಪ್ರಮೋದ್​ ನ್ಯೂಜಿಲ್ಯಾಂಡ್​ನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ.
ನಾಯಿಯ ಅಸ್ಥಿಯನ್ನು ಗಂಗಾ ನದಿಗೆ ಬಿಡಬೇಕೆಂದುಕೊಂಡಿದ್ದ ಪ್ರಮೋದ್​ ಇತ್ತೀಚೆಗೆ ಭಾರತ ಬಂದಿದ್ದು, ಗಂಗಾ ನದಿಯಲ್ಲಿ ಲೈಕಾನ್​ನ ಅಸ್ಥಿಯನ್ನು ಬಿಟ್ಟಿದ್ದಾರೆ. ಅದರ ಜತೆ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನವನ್ನೂ ಸಹ ನಡೆಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
